new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಲ್ಯಾಂಡ್ ಲಾರ್ಡ್’ ಗೆ ಯು/ಎ ಸರ್ಟಿಫಿಕೇಟ್

‘ಲ್ಯಾಂಡ್ ಲಾರ್ಡ್’ ಗೆ ಯು/ಎ ಸರ್ಟಿಫಿಕೇಟ್
  • PublishedJanuary 17, 2026

ಸಲಗ ವಿಜಯ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಮಿತ್ರ ಹೀಗೆ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಲ್ಯಾಂಡ್ ಲಾರ್ಡ್ ಚಿತ್ರವು ಇದೆ ಜನವರಿ 23ರಂದು ರಾಜ್ಯಾದಾದ್ಯಂತ ತೆರೆ ಕಾಣಲಿದೆ. ಇದೀಗ ಸಿನಿಮಾ ತಂಡವು ಚಿತ್ರದ ದೊಡ್ಡ ಅಪ್ಡೇಟ್ ಒಂದನ್ನು ನೀಡಿದೆ.

ಜನವರಿ 18ಕ್ಕೆ ಚಿತ್ರದ ಟ್ರೈಲರ್ ರಿಲೀಸ್ ಆಗಲಿದ್ದು,ಇದರ ಜೊತೆಗೆ ಸೆನ್ಸಾರ್ ಮಂಡಳಿಯು ಲ್ಯಾಂಡ್ ಲಾರ್ಡ್ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ನೀಡಿದೆ. ಇದರ ಮೂಲಕ ಲ್ಯಾಂಡ್ ಲಾರ್ಡ್ ಮನೆ ಮಂದಿಯೆಲ್ಲಾ ನೋಡಬಹುದಾದ ಸಿನಿಮಾ ಎಂದು ಸೆನ್ಸಾರ್ ಮಂಡಳಿ ಅಪ್ರೂವ್ ಮಾಡಿದೆ.

ಇದೀಗಾಗಲೇ ಚಿತ್ರದ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ದೊಡ್ಡ ಕಲಾ ಬಳಗ ಹೊಂದಿರುವ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಒಂದು ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಚಿತ್ರದ ಟೈಟಲ್ ಲುಕ್ ಎಲ್ಲವೂ ಜನರಿಗೆ ಕುತೂಹಲವನ್ನು ಹೆಚ್ಚು ಮಾಡುವಂತೆ ಮಾಡಿದೆ.

Written By
Kannada Picchar

Leave a Reply

Your email address will not be published. Required fields are marked *