new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಎಸ್. ಮಹೇಂದರ್ ಮತ್ತು ಹಂಸಲೇಖ ಜೋಡಿ ಹೊಸ ಸಿನಿಮಾ ಅನೌನ್ಸ್!

ಎಸ್. ಮಹೇಂದರ್ ಮತ್ತು ಹಂಸಲೇಖ ಜೋಡಿ ಹೊಸ ಸಿನಿಮಾ ಅನೌನ್ಸ್!
  • PublishedJanuary 9, 2026

ಕನ್ನಡ ಸಿನಿಮಾ ರಂಗದ ಫೇಮಸ್ ಜೋಡಿ ನಿರ್ದೇಶಕ ಎಸ್. ಮಹೇಂದರ್ ಹಾಗೂ ನಾದ ಬ್ರಹ್ಮ ಹಂಸಲೇಖ ಅವರು ಮತ್ತೆ ಸುಮಾರು 20 ಸಿನಿಮಾಗಳ ನಂತರ ಮತ್ತೊಂದು ಸಿನಿಮಾಗೆ ಒಂದಾಗುತ್ತಿದ್ದಾರೆ.

ಗುರುರಾಯ ಸಿನಿಮಾ ಬ್ಯಾನರ್ ಅಡಿಯಲ್ಲಿ ಕೆ ಸಿ ವಿಜಯ್ ಕುಮಾರ್ ಅವರು ಚಿತ್ರವನ್ನು ನಿರ್ಮಾಪಿಸುತ್ತಿದ್ದಾರೆ. ಹಿಂದೆ ಮೋಡಿ ಮಾಡಿದ್ದ ಗಟ್ಟಿಮೇಳ, ಜೋಗುಳ, ಕೌರವ, ತಂದೆಗೆ ತಕ್ಕ ಮಗ ಸಿನಿಮಾಗಳನ್ನು ಎಸ್ ಮಹೇಂದರ್ ನಿರ್ದೇಶಿಸಿದ್ರೆ ಈ ಎಲ್ಲಾ ಸಿನಿಮಾಗಳಿಗೆ ನಾದ ಬ್ರಹ್ಮ ಹಂಸಲೇಖ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ಮತ್ತೆ ಈ ಹಳೆಯ ಯಶಸ್ವಿ ಕಾಂಬಿನೇಷನ್ ಈಗಿನ ತಲೆಮಾರಿಗೆ ತಕ್ಕಂತೆ ಹೊಸ ದೃಶ್ಯ ಕಾರ್ಯವನ್ನು ಸೃಷ್ಟಿಸಲು ಸಜ್ಜಾಗಿದೆ. ಈ ಬಹು ನಿರೀಕ್ಷಿತ ಸಿನಿಮಾದ ಶೀರ್ಷಿಕೆ ಮತ್ತು ಚಿತ್ರತಂಡದ ಅಧಿಕೃತ ಮಾಹಿತಿ ಇದೇ ಜನವರಿ 16 ರಂದು ಘೋಷಣೆಯಾಗಲಿದೆ.

Written By
Kannada Picchar

Leave a Reply

Your email address will not be published. Required fields are marked *