ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಭ್ ಹಾಗೂ ವಿವೇಕ್ ಒಬ್ರಾಯ್
ರಿಷಭ್ ಶೆಟ್ಟಿ ಹಾಗೂ ವಿವೇಕ್ ಒಬ್ರಾಯ್ ಅವರು ನಿನ್ನೆ ಮಂಗಳೂರು ಸಮೀಪದ ಪ್ರಸಿದ್ದ ದೇವಾಲಯವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ತಮ್ಮ ಮುಂದಿನ ಚಿತ್ರವಾದ ದಿ ಪ್ರೈಡ್ ಆಫ್ ಭಾರತ್ :ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಯಶಸ್ಸಿಗಾಗಿ ದೇವಾಲಯಕ್ಕೆ ಹೋಗಿ ದೇವರ ಆಶೀರ್ವಾದ ಪಡೆದಿದ್ದಾರೆ.ಸಿನಿಮಾದಲ್ಲಿ ರಿಷಭ್ ಶೆಟ್ಟಿಯವರು ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಮಿಂಚಲಿದ್ದಾರೆ.ಜತೆಗೆ ವಿವೇಕ್ ಒಬ್ರಾಯ್ ಅವರು ಔರಂಗಜೇಬ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.