new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಲವ್‌ ಕೇಸ್‌ 2ನೇ ಹಂತದ ಚಿತ್ರೀಕರಣ ಮುಕ್ತಾಯ

ಲವ್‌ ಕೇಸ್‌ 2ನೇ ಹಂತದ ಚಿತ್ರೀಕರಣ ಮುಕ್ತಾಯ
  • PublishedJanuary 1, 2026

ನಿರ್ದೇಶಕ ಜೈಶ್‌ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ಲವ್‌ ಕೇಸ್‌. ಈ ಹಿಂದೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಎಂ.ಬಿ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ಶ್ರೀ ನಗರ ಕಿಟ್ಟಿ, ಸುಧಾರಾಣಿ ,ಪ್ರಮೋದ್‌ ಶೆಟ್ಟಿ, ನಾಗಭೂಷಣ್‌,ಮಹಾನಟಿ ರಿಯಾಲಿಟಿ ಶೋ ವಿನ್ನರ್‌ ವಂಶಿ, ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು ಹಾಗು 2021 ರ ಬ್ಲಾಕ್‌ ಬಸ್ಟರ್‌ ಹಿಟ್‌ ಕಾಂತಾರ ಸಿನಿಮಾ ಖ್ಯಾತಿಯ ರಂಜನ್‌ ಸೇರಿ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

ನವೆಂಬರ್‌ 7,2025 ರಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ಜರುಗಿತ್ತು.ಇದೀಗ ಚಿತ್ರದ ಎರಡನೆಯ ಹಂತದ ಶೂಟಿಂಗ್‌ ಕೂಡ ಮುಗಿದಿದೆ.ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಮಗ ಆದಿ ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದು, ಕೆ.ಎಸ್.‌ ಚಂದ್ರಶೇಕರ್‌ ಸಿನಿಮೋಟಾಗ್ರಾಫಿ ಮಾಡಿದ್ದಾರೆ.ಕಳೆದ ಎರಡು ದಶಕಗಳಿಂದ ಕನ್ನಡ,ತೆಲುಗು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವ ಇವರು ಮೊಗ್ಗಿನ ಮನಸು,ಚಕ್ರವರ್ತಿ,ಮೈಲಾರಿ ಹೀಗೆ ಅನೇಕ ಚೊಚ್ಚಲ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಅನುಕೃಷ್ಣ ಅವರು ಸಂಕಲನವಿರುವ ಲವ್‌ ಕೇಸ್‌ ಚಿತ್ರದ ಎರಡನೆಯ ಹಂತದ ಚಿತ್ರೀಕರಣ ಬಹಳ ಬಿರುಸಾಗಿ ಮುಗಿದಿದೆ.ಇನ್ನು ಕೊನೆಯ ಹಂತದ ಶೂಟಿಂಗ್‌ ಬಾಕಿ ಇದ್ದು,ಅದರ ಚಿತ್ರೀಕರಣಕ್ಕಾಗಿ ಕರಾವಳಿಯ ಮಂಗಳೂರಿನತ್ತ ತಂಡ ಹೋಗಬೇಕಿದೆ.ಎಲ್ಲ ಸರಿಯಾದ ಸಮಯಕ್ಕೆ ಅದರೆ ಲವ್‌ ಕೇಸ್‌ ಚಿತ್ರ ಈ ವರ್ಷದ ಯುಗಾದಿ ಹಬ್ಬಕ್ಕೆ ತೆರೆ ಕಾನಬಹುದು ಎಂದು ಸಿನಿಮಾ ತಂಡ ಹೇಳಿದೆ.

Written By
Kannada Picchar

Leave a Reply

Your email address will not be published. Required fields are marked *