new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಗೆಲ್ಲಲಿಲ್ಲ ಗಮನ ಸೆಳೆದು ಭರವಸೆ ಹುಟ್ಟಿಸಿದ್ರು

ಗೆಲ್ಲಲಿಲ್ಲ ಗಮನ ಸೆಳೆದು ಭರವಸೆ ಹುಟ್ಟಿಸಿದ್ರು
  • PublishedDecember 31, 2025

2025ನೇ ಇಸವಿ ಸ್ಯಾಂಡಲ್‌ವುಡ್ ಗೆ ಒಂದು ರೀತಿಯಲ್ಲಿ ‘ಪ್ರಯೋಗಗಳ ವರ್ಷ’ ಎಂದ್ರು ತಪ್ಪಾಗಲ್ಲ. ಈ ವರ್ಷ ಕೆಲವು ಸಿನಿಮಾಗಳು ಕೋಟಿ ಕೋಟಿ ಹಣ ಗಳಿಸಿಲ್ಲ, ಚಿತ್ರಮಂದಿರಗಳಲ್ಲಿ ನೂರು ದಿನ ಓಡಿಲ್ಲ. ಆದ್ರೆ, ಆ ಸಿನಿಮಾಗಳ ಟೈಟಲ್, ಕಥೆ ಮತ್ತು ಮೇಕಿಂಗ್ ಗಾಗಿ ಜನರ ಗಮನ ಸೆಳೆದಿದಂತು ಸುಳ್ಳಲ್ಲ! ಸಿನಿಮಾ ಅಂದ್ರೆ ಬರೀ ನೂರು ಕೋಟಿ ಕ್ಲಬ್ ಸೇರೋದು ಮಾತ್ರ ಅಲ್ಲ,ಬದಲಿಗೆ ಪ್ರೇಕ್ಷಕರು ಸಿನಿಮಾ ನೋಡಿ ಬಂದ್ಮೇಲೆ ಅವನನ್ನು ಆ ಮೂವಿ ಎಷ್ಟು ಕಾಡುತ್ತದೆ ಎನ್ನುವುದು ಮುಖ್ಯ. ಹಾಗಾಗಿ ಈ ವರ್ಷ ಚಿತ್ರರಂಗದಲ್ಲಿ ಗೆಲ್ಲದಿದ್ದರೂ ಗಮನ ಸೆಳೆದ ಸಿನಿಮಾ ಯಾವು ಅನ್ನೋದನ್ನ ನೋಡೋಣ…

ಲವ್ ಓಟಿಪಿ

ನಟ ಅನಿಶ್ ತೇಜೇಶ್ವರ್ ಮುಖಭೂಮಿಯಲ್ಲಿ ನಟಿಸಿರುವಂತಹ ಈ ಸಿನಿಮಾ ಥಿಯೇಟರ್ ನಲ್ಲಿ ಅಂದುಕೊಂಡಷ್ಟು ಗೆಲುವನ್ನು ಸಾಧಿಸದೆ ಇದ್ದರೂ ಸನಿ ಪ್ರಿಯರ ಗಮನವನ್ನು ಸೆಳೆಯಿತು. ಮೊದಲನೆಯದಾಗಿ ಸಿನಿಮಾದ ಕಥೆ ಯುವ ಜನತೆಗೆ ಹತ್ತಿರವಾಯಿತು ಯಾಕೆಂದರೆ ಈ ಸಿನಿಮಾದಲ್ಲಿ ಪ್ರೀತಿಯ ಸಿಹಿಯಾದ ಮುಖವನ್ನು ಮಾತ್ರವಲ್ಲದೆ ಪ್ರೀತಿ ಯಾವಾಗ ಪುಸಿವ್ನೆಸ್ ಅತಿಯಾದಾಗ ಒಬ್ಬ ಮನುಷ್ಯ ಮಾನಸಿಕವಾಗಿ ಯಾವ ರೀತಿಯ ಟಾರ್ಚರ್ ಮತ್ತು ಫ್ರೆಶರನ್ನು ಅನುಭವಿಸುತ್ತಾನೆ ಎಂದು ಈ ಸಿನಿಮಾ ತಿಳಿಸಿಕೊಡುತ್ತದೆ ಹಾಗಾಗಿ ಈ ಸಿನಿಮಾ ಯುವಜನರ ಗಮನ ಸೆಳುವಲ್ಲಿ ಯಶಸ್ವಿಯಾಯಿತು. ಇನ್ನು ಸಿನಿಮಾದ ಟೈಟಲ್ ಕೂಡ ಬಹಳಷ್ಟು ಸದ್ದು ಮಾಡಿತು ಸಾಮಾನ್ಯವಾಗಿ ಓಟಿಪಿ ಎಂದರೆ ಒನ್ ಟೈಮ್ ಪಾಸ್ವರ್ಡ್ ಆದರೆ ಈ ಸಿನಿಮಾದಲ್ಲಿ ಓಟಿಪಿ ಎಂದರೆ ಓವರ್ ಟಾರ್ಚರ್ ಪ್ರೆಷರ್ ಈ ಎಲ್ಲಾ ಅಂಶಗಳಿಂದ ಚಿತ್ರ ಗಮನ ಸೆಳೆಯಿತು.

ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರಿ

2025ರ ಜನವರಿ 10ರಂದು ಬಿಡುಗಡೆಯಾದ ಈ ಸಿನಿಮಾದ ಕಥಾ ಹಂದರ ಹಾಗೂ ನಟನೆ ಒಂದಿಷ್ಟು ಜನರ ಗಮನವನ್ನು ಸೆಳೆಯಿತು. ಸಿನಿಮಾದ ಶೀರ್ಷಿಕೆ ಸಾಮಾನ್ಯವಾಗಿ ನಾವು ಸಾರ್ವಜನಿಕ ಸ್ಥಳಗಳಲ್ಲಿ ಬಳಸುವ ಎಚ್ಚರಿಕೆಯ ವಾಕ್ಯ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರಿ. ಹಾಗಾಗಿ ಜನ ಸಿನಿಮಾದ ಟೈಟಲ್ ಗೆ ಬೇಗ ಕನೆಕ್ಟ್ ಆದ್ರೂ. ಸಿನಿಮಾದ ಕಥೆಯು ಕೂಡ ಮೂರು ವಿಭಿನ್ನ ಕಥೆಗಳ ಸಂಗಮ ಏಕೆಂದರೆ ಒಂದು ಕಡೆ ಓಸಿಡಿ ಪ್ರಾಬ್ಲಮ್ ಇರುವ ಕಳ್ಳ ಇನ್ನೊಂದು ಕಡೆ, ಕ್ಲಪ್ತೋ ಮಾನ್ಯ ಕಾಯಿದೆ ಇರುವ ಜೋಡಿ ಮತ್ತು ಮತ್ತೊಂದು ಕಡೆ ಹನಿ ಟ್ರಾಪಿಂಗ್ ದಂಧೆಯ ಕಥೆ ಈ ಮೂರರ ಸುತ್ತ ಸುತ್ತುವ ಕಥೆ ಈ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರಿ. ಇನ್ನು ಸಿನಿಮಾದಲ್ಲಿ ದಿಲೀಪ್ ರಾಜ್ ಅವರ ನಟನೆ ಬಹಳ ಮೆಚ್ಚುಗೆ ಪಡೆಯಿತು. ಹಾಗಾಗಿ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸಕ್ಕತ್ ಸದ್ದು ಮಾಡದಿದ್ದರೂ ಅದರ ಕಥೆ ಹಾಗೂ ನಟನೆಗೆ ಮನ್ನಣೆ ಪಡೆಯಿತು.

ನೋಡಿದವರು ಏನಂತಾರೆ?

ನೋಡಿದವರು ಏನಂತಾರೆ? ಇದು ನಮ್ಮ ಜನರಲ್ಲಿರುವ ದೊಡ್ಡ ಪ್ರಶ್ನೆ. ಈ ಸಿನಿಮಾ ಕೂಡ ಇದೇ ಪ್ರಶ್ನೆಯ ಮೇಲೆ ಉತ್ತರ ಹುಡುಕುವ ಕಥೆಯಾಗಿದೆ. ಸಿನಿಮಾದಲ್ಲಿ ಒಬ್ಬ ಐಟಿ ಹುಡುಗ ತನ್ನ ಪೋಷಕರು ಸ್ನೇಹಿತರು ತಿಳಿದವರು ತನ್ನ ಬಗ್ಗೆ ಏನು ಅಂದುಕೊಳ್ಳುವರು ಎನ್ನುವ ಭಯದಲ್ಲೇ ಜೀವನ ನಡೆಸುತ್ತಾನೆ. ಆದರೆ ಬಂದು ಪಾಯಿಂಟ್ ನಲ್ಲಿ ಕಣ್ಣನ್ನು ತಾನೇ ಹುಡುಕಿಕೊಳ್ಳುವ ಪಯಣವನ್ನು ಶುರು ಮಾಡುತ್ತಾನೆ. ಆತನನ್ನು ತಾನೇ ಹುಟ್ಟಿಕೊಳ್ಳುವ ಪಯಣವೇ ಈ ಸಿನಿಮಾ. ಈ ಸಿನಿಮಾದ ಕಥೆಯು ಜನಸಾಮಾನ್ಯರಿಗೆ ತುಂಬಾ ರಿಲೇಟೆಡ್ ಆಗಿರುವುದರಿಂದ ಜನರ ಗಮನ ಸೆಳೆಯಿತು. ಜೊತೆಗೆ ಸಿನಿಮಾದ ಸಿನಿಮಾೋಗ್ರಾಫಿ ಕೂಡ ಮೆಚ್ಚುಗೆಯನ್ನು ಪಡೆಯಿತು.

ವೀರಚಂದ್ರ

ಏಪ್ರಿಲ್ 18ರಂದು ಬಿಡುಗಡೆಯಾದ ಈ ಸಿನಿಮಾ ತಮ್ಮ ವೈಶಿಷ್ಟ್ಯ ಆಲೋಚನೆಗೆ ಹೆಸರುವಾಸಿ ಆಯಿತು. ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಬೆಳ್ಳಿತೆರೆಯ ಮೇಲೆ ಈ ಸಿನಿಮಾ ತಂದಿದೆ. ಇದು ಹೊಸ ಪ್ರಯತ್ನ ಆದುದರಿಂದ ಹಲವಾರು ಜನಗಳಿಗೆ ಇಷ್ಟವಾಯಿತು. ಇನ್ನು ಚಿತ್ರದ ವಿಮರ್ಶಕರು ಕೂಡ ಈ ಸಿನಿಮಾ ಯಕ್ಷಗಾನದ ಮೇಲಿನ ಪ್ರೀತಿ ಮತ್ತು ಗೌರವದಿಂದ ಕೂಡಿದ ಪ್ರಾಮಾಣಿಕ ಪ್ರಯತ್ನ” ಎಂದು ವಿಮರ್ಶಿಸಿದ್ದಾರೆ.

ಅಜ್ಞಾತವಾಸಿ

ಜನಾರ್ಧನ್ ಚಿಕ್ಕಣ್ಣ ಅವರು ನಿರ್ದೇಶಿಸಿರುವ ಈ ಸಿನಿಮಾವು ಅದ್ಭುತ ತಾರಾ ಬಳಗವನ್ನು ಹೊಂದಿತ್ತು. ರಂಗಾಯಣ ರಘು ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಸುನಿಮಗು ಒಂದು ಕ್ರೈಂ ಥ್ರಿಲ್ಲರ್ ಆಗಿರುವುದರಿಂದ ಈ ಅಜ್ಞಾತವಾಸಿ ಚಿತ್ರಪನ್ ಕ್ರೈಂ ಓರಿಯೆಂಟೆಡ್ ಸಿನಿಮಾ ಪ್ರಿಯರಿಗೆ ಬಹಳ ಇಷ್ಟವಾಯಿತು.​ ಕಥೆಯ ಹರಿವು ಮತ್ತು ಕೊನೆಯವರೆಗೂ ಸಸ್ಪೆನ್ಸ್ ಕಾಯ್ದುಕೊಳ್ಳುವ ರೀತಿ ಗಮನ ಸೆಳೆದಿದೆ. ಸಿನಿಮಾದ ಸಿನಿಮಾ ಆಟೋಗ್ರಾಫಿ ಹಾಗೂ ಬಿಜಿಎಂ ಬ್ಯಾಗ್ರೌಂಡ್ ಮ್ಯೂಸಿಕ್ ಬಹಳ ಸೂಕ್ತವಾಗಿರುವುದರಿಂದ ಜನಕ್ಕೆ ಇಷ್ಟವಾಯಿತು. ಇದೆಲ್ಲದಕ್ಕಿಂತ ಮಿಗಿಲಾಗಿ ಸಿನಿಮಾವು ಥಿಯೇಟರ್ ನಲ್ಲಿ ಗೆಲ್ಲದಿದ್ದರೂ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಹಲ್ ಚಲ್ ಎಬ್ಬಿಸಿತ್ತು.

ಜೂನಿಯರ್

ಜನಾರ್ಧನ್ ರೆಡ್ಡಿ ಅವರ ಮಗ ಕಿರೀಟಿ ಹಾಗೂ ಶ್ರೀ ಲೀಲಾ ಅವರು ನಟಿಸಿರುವ ಈ ಸಿನಿಮಾವು ಚಿತ್ರ ಬಂದಿರಗಳಲ್ಲಿ ಜನರನ್ನು ಬರಮಾಡಿಕೊಳ್ಳುವಲ್ಲಿ ಯಶಸ್ವಿ ಆಗದಿದ್ದರೂ ಸಿನಿಮಾದ ಮೇಕಿಂಗ್ ಹಾಗೂ ಹಾಡು ‘ವೈರಲ್ ವೈಯಾರಿ‘ ಸಕ್ಕತ್ ವೈರಲ್ ಆಗಿತ್ತು. ಇನ್ನು ಚಿತ್ರದ ನಾಯಕನಾಗಿದ್ದ ಕಿರೀಟಿ ಅವರ ಡ್ಯಾನ್ಸಿಂಗ್ ಎಬಿಲಿಟಿ ಯನ್ನು ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಅಂದೊಂದಿತ್ತು ಕಾಲ

ದೊಡ್ಮನೆ ಕುಡಿಯಾದ ವಿನಯ್ ರಾಜಕುಮಾರ್ ಅವರು ಹಾಗೂ ಅತಿ ಪ್ರಭುದೇವನ್ ಮುಖ್ಯ ಭೂಮಿಯಲ್ಲಿ ನಟಿಸಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಿನಿಮಾದ ಹಾಡುಗಳಿಂದ ಸುದ್ದಿಯಲ್ಲಿತ್ತು. ಸಿನಿಮಾವು ಥಿಯೇಟರ್ ನಲ್ಲಿ ಗೆಲ್ಲದಿದ್ದರೂ ಒಂದು ವಿಭಾಗದ ಜನರನ್ನು ಸೆಳೆಯುವಲ್ಲಿ ಯಶಸ್ವಿ ಆಯಿತು.90ರ ದಶಕದ ಜೀವನಶೈಲಿ, ಮನುಷ್ಯರ ನಡುವಿನ ಸಂಬಂಧಗಳು ಈ ಎಲ್ಲಾ ವಿಷ್ಯ ಗಳನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತೋರಿಸಿದ ರೀತಿಗೆ ಜನ ಮೆಚ್ಚುಗೆ ವ್ಯಕ್ತ ಪಡಿಸಿದರು.

Written By
Kannada Picchar

Leave a Reply

Your email address will not be published. Required fields are marked *