2025ರಲ್ಲಿ ನಮ್ಮನ್ನಗಲಿದ ಸಿನಿ ತಾರೆಯರು..
2025 ಮುಗಿಯಲು ಇನ್ನೆನೂ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ.. ಸಂಪೂರ್ಣವಾಗಿ ಈ ವರ್ಷವನ್ನು ನೆನಪಿಸಿ ಕೊಳ್ಳೋ ಸಮಯವಿದು. ಕರುನಾಡ ಮನರಂಜನಾ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೃದಯ ವಿದ್ರಾವಕ ಘಟನೆ ನಡೆದಿವೆ ಬಣ್ಣದ ಲೋಕದ ಹಿರಿಜೀವಗಳು ನಮ್ಮನ್ನಗಲಿದ್ದಾರೆ.. ಕನ್ನಡತಿ, ಬಹುಭಾಷಾ ನಟಿ ಬಿ.ಸರೋಜಾ ದೇವಿ ಅವ್ರಿಂದ ಹಿಡಿದು ಧರ್ಮೇಂದ್ರರವರ ವರೆಗೂ ಹಲವು ಸಿನಿಮಾ ದಿಗ್ಗಜರನ್ನು ನಾವು ಕಳೆದುಕೊಂಡಿದ್ದೇವೆ. ಈ ಕ್ಷಣ ಅವರ ನೆನಪನ್ನ ಮೆಲುಕು ಹಾಕೋಣ..
ಬಿ. ಸರೋಜಾ ದೇವಿ

ನಟಿ ಬಿ. ಸರೋಜಾ ದೇವಿ ಕನ್ನಡ ಸಿನಿಮಾ ಲೋಕ ಕಂಡ ದಿಗ್ಗಜ ನಟಿ ಬಿ. ಸರೋಜಮ್ಮ ಜುಲೈ 14ರಂದು ಬೆಂಗಳೂರಿನಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ರು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸರೋಜಮ್ಮನ ನಿಧನವು ಭಾರತೀಯ ಚಿತ್ರರಂಗದಲ್ಲಿ, ವಿಶೇಷವಾಗಿ ದಕ್ಷಿಣ ಭಾರತಕ್ಕೆ ಆಘಾತ ಉಂಟು ಮಾಡಿತು..
ಎಂ.ಎಸ್. ಉಮೇಶ್

ಹಿರಿಯನಟ ಉಮೇಶಣ್ಣ ಆನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಎಂ.ಎಸ್. ಉಮೇಶ್ ಅವರು ನವೆಂಬರ್ 30ರಂದು ಬೆಂಗಳೂರಿನಲ್ಲಿ ತೀರಿಹೋಗ್ತಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿದೀವದೊಂದಿದೆ ದೊಡ್ಡ ದೊಡ್ಡ ಕಲಾವಿದರು ಬಂದು ಭೇಟಿಯಾಗ್ತಾರೆ.. ಸುಧೀರ್ಘ ಹೋರಾಟದ ನಂತರ ನವೆಂಬರ್ 30ರ ಬೆಳಗ್ಗೆ 8:30ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 6 ದಶಕಗಳ ಕಾಲ ಕನ್ನಡ ಪ್ರೇಕ್ಷಕರನ್ನು ರಂಜಿಸಿ ಮರೆಯಾದ್ರು ನಮ್ಮೆಲ್ಲರ ಉಮೇಶಣ್ಣ..
ಯಶವಂತ ಸರದೇಶಪಾಂಡೆ
ಹಾಸ್ಯ ನಟ ಯಶವಂತ ಸರದೇಶಪಾಂಡೆ ರಂಗಭೂಮಿ ಕಲಾವಿದ, ಸೂಪರ್ ಹಿಟ್ ರಾಮ ಶಾಮ ಭಾಮ ಸಿನಿಮಾ ಖ್ಯಾತಿಯ ಹಾಸ್ಯ ನಟ ಯಶವಂತ್ ಸರದೇಶಪಾಂಡೆ ಹೃದಯಾಘಾತದಿಂದ ಸೆಪ್ಟಂಬರ್ 29ರಂದು ಕೊನೆಯುಸಿರೆಳೆದರು. ನಟನಿಗೆ 62 ವರ್ಷಗಳಾಗಿತ್ತು. ತಮ್ಮ ಕಾಮಿಡಿ ಜಲಕ್ ಮೂಲಕನೆ ಪ್ರಸಿದ್ಧಿ ಪಡ್ಕೊಂಡಿದ್ರು..
ರಾಜು ತಾಳಿಕೋಟೆ

ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಖ್ಯಾತ ನಟ, ರಂಗಭೂಮಿ ಕರ್ಮಿ, ರಾಜು ತಾಳಿಕೋಟೆ ಅಕ್ಟೋಬರ್ 13ರಂದು 62ನೇ ವಯಸ್ಸಿನಲ್ಲಿ ನಿಧನರಾದರು . ಚಿತ್ರೀಕರಣ ಸಲುವಾಗಿ ಉಡುಪಿಯಲ್ಲಿದ್ದರು. ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ದುರಾದೃಷ್ಟವಶಾತ್ ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡಿ ಕಿಂಗ್, ಕನ್ನಡದ ಸೆಂದಿಲ್ ಸೇರಿ ಹಲವು ಬಿರುದುಗಳನ್ನು ಹೊಂದಿದ್ದ ನಟ ಹೃದಯಾಘಾತದಿಂದ ನಿಧನರಾಗ್ತಾರೆ.
ಬ್ಯಾಂಕ್ ಜನಾರ್ಧನ್

ನಟ ಬ್ಯಾಂಕ್ ಜನಾರ್ಧನ್ ವಯೋಸಹಜ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದ ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಏಪ್ರಿಲ್ 14ರಂದು ತಮ್ಮ 75ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ರು.. ಸರಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ..
ರಾಕೇಶ್ ಪೂಜಾರಿ
ಹಾಸ್ಯ ನಟ ರಾಕೇಶ್ ಪೂಜಾರಿ ಕನ್ನಡ, ತುಳು ಮತ್ತು ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿಜೇತ ರಾಕೇಶ್ ಪೂಜಾರಿ, ಮೇ 11ರಂದು ಜಸ್ಟ್ 34ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಹರೀಶ್ ರಾಯ್

ನಟ ಹರೀಶ್ ರಾಯ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಕೆಜಿಎಫ್ ಮೂಲಕ ಕೆಜಿಎಫ್ ಚಾಚಾ ಫೇಮಸ್ ಆಗಿದ್ರು, ನಟ ಹರೀಶ್ ರಾಯ್ 4ನೇ ಹಂತದ ಥೈರಾಯ್ಡ್ ಕ್ಯಾನ್ಸರ್ ವಿರುದ್ಧ ಹೋರಾಡಿ ಬೆಂಗಳೂರಿನಲ್ಲಿ ನಿಧನರಾದರು. 55 ವರ್ರ್ಷಕ್ಕೆ ಪುಟ್ಟ ಮಕ್ಕಳನ್ನ ಬಿಟ್ಟು ಅಗಲಿದ್ದಾರೆ.. ಅಗ್ರೇಸಿವ್ ಆಕ್ಟಿಂಗ್, ಪ್ರಭಾವಶಾಲಿ ಸ್ಕ್ರೀನ್ ಪ್ರೆಸೆನ್ಸ್ ನಿಂದಲೇ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ ಗುರುತಿಸಿಕೊಂಡಿದ್ರು..
ಗಡ್ಡಪ್ಪ
ನಟ ಗಡ್ಡಪ್ಪ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಅಂದ್ರೆ ಚನ್ನೇಗೌಡ ಅವರು ನವೆಂಬರ್ 12ರಂದು ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಪಾರ್ಶ್ವವಾಯು, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ವಯೋಸಹಜ ಅನಾರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಿದ್ರು..
ಶ್ರೀಧರ್ ನಾಯಕ್
ನಟ ಶ್ರೀಧರ್ ನಾಯಕ್ ನಿಧನ ಪಾರು ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ನಾಯಕ್ ಮೇ 26ರಂದು ನಿಧನರಾದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಣಕಾಸು ಸಮಸ್ಯೆಯಿಂದ ಬಳಲುತ್ತಿದ್ದ ನಟ ಸಹಾಯಕ್ಕಾಗಿಯೂ ಕೋರಿದ್ದರು. ಪಾರು, ವಧು, ಮಂಗಳ ಗೌರಿ, ಮನೆಯೇ ಮಂತ್ರಾಲಯ ಸೇರಿದಂತೆ 40ಕ್ಕೂ ಹೆಚ್ಚು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸರಿಗಮ ವಿಜಿ
ಸರಿಗಮ ವಿಜಿ ಕನ್ನಡದ ಹಿರಿಯ ನಟ ಮತ್ತು ರಂಗಭೂಮಿ ಕಲಾವಿದ ಸರಿಗಮ ವಿಜಿ ಅವರು ಜನವರಿ 15ರಂದು ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು. ಶ್ವಾಸಕೋಶ ಸಮಸ್ಯೆ ಸೇರಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೇ ತಮ್ಮ 76ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಮುರಳಿ ಮೋಹನ್
ನಿರ್ದೇಶಕ ಮುರಳಿ ಮೋಹನ್ ಶಿವರಾಜ್ಕುಮಾರ್, ರವಿಚಂದ್ರನ್ ಹಾಗೂ ಉಪೇಂದ್ರ ಅವರಂತಹ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಮುರಳಿ ಮೋಹನ್ ಆಗಸ್ಟ್ 13ರಂದು ನಿಧನರಾದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನಟ ತಮ್ಮ 57ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ದಿನೇಶ್ ಮಂಗಳೂರು
ನಟ ದಿನೇಶ್ ಮಂಗಳೂರು ಆ ದಿನಗಳು, ಕೆಜಿಎಫ್, ಉಳಿದವರು ಕಂಡಂತೆ, ಕಿಚ್ಚ, ಕಿರಿಕ್ ಪಾರ್ಟಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು ಆಗಸ್ಟ್ 25ರಂದು ಕುಂದಾಪುರದ ಕೋಟೇಶ್ವರ ಸರ್ಜನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬಹುಬೇಡಿಕೆಯ ಪೋಷಕ ನಟನಿಗೆ ಸ್ಟ್ರೋಕ್ ಆಗಿತ್ತು.
ಚಿ.ರಮೇಶ್ ಕಲ್ಲಡ್ಕ
ಚಿ.ರಮೇಶ್ ಕಲ್ಲಡ್ಕ ತುಳು ರಂಗಭೂಮಿ ಹಿರಿಯ ಕಲಾವಿದ, ಚಲನಚಿತ್ರ ನಟ ಚಿ.ರಮೇಶ್ ಕಲ್ಲಡ್ಕ ಅವರು ಜುಲೈ 23ರಂದು ಕಲ್ಲಡ್ಕದ ಕೊಳಕೀರು ಮನೆಯಲ್ಲಿ ನಿಧನರಾದರು.
ಭರತ್ ಕುಮಾರ್
ನಿರ್ಮಾಪಕ ಭರತ್ ಕುಮಾರ್ ಸಂಚಾರಿ ವಿಜಯ್ ಅಭಿನಯದ ಮೇಲೊಬ್ಬ ಮಾಯಾವಿ ಚಿತ್ರ ನಿರ್ಮಾಣ ಮಾಡಿ ಪುತ್ತೂರು ಭರತ್ ಎಂದೇ ಜನಪ್ರಿಯರಾಗಿದ್ದ ಭರತ್ ಕುಮಾರ್ ಹೃದಯಾಘಾತದಿಂದ ತಮ್ಮ 43ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.