ಹಸೆಮಣೆ ಏರಿದ ಸ್ಯಾಂಡಲ್ ವುಡ್ ಕಲಾವಿದರು
ಈ ವರ್ಷ ಕನ್ನಡ ಸಿನಿ ರಂಗದ ಹಲವಾರು ಕಲ್ಯಾಣವೆಂಬ ಮಧುರ ಬಂಧನಕ್ಕೆ ಕಾಲಿಟ್ಟಿದ್ದಾರೆ. ಬಣ್ಣದ ಲೋಕದಲ್ಲಿ ಮಿಂಚುತ್ತಾ ಮದುವೆ ಎಂಬ ಹೊಸ ಅಪರೂಪದ ಬಾಂಧವ್ಯಕ್ಕೆ ಡಾಲಿ ಧನಂಜಯ್, ಅನುಶ್ರೀ,ಅಗ್ನಿಸಾಕ್ಷಿ ವೈಷ್ಣವಿ ಹೀಗೆ ಅನೇಕ ನಟ ನಟಿಯರು ಹಸೆಮಣೆ ಏರಿರುವವರ ಲಿಸ್ಟ್ ಇಲ್ಲಿದೆ.
ಡಾಲಿ ಧನಂಜಯ ಮತ್ತು ಧನ್ಯತಾ

‘ಡೈರೆಕ್ಟರ್ಸ್ ಸ್ಪೆಷಲ್ ‘ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಧನಂಜಯ್ 2018 ರಲ್ಲಿ ಟಗರು ಮೂಲಕ ಈಗ ಡಾಲಿ ಧನಂಜಯ್ ಎಂದೇ ಪ್ರಖ್ಯಾತಿ. ಇವರು ತಮ್ಮ ಬಹುಕಾಲದ ಗೆಳತಿ ಡಾ. ಧನ್ಯತಾ ಗೌರಕ್ಲರ್ ನೊಡನೆ ಫೆಬ್ರವರಿ 16 ರಂದು ಸಪ್ತಪದಿ ತುಳಿದರು.
ಅನುಶ್ರೀ ಮತ್ತು ರೋಷನ್

ಕರ್ನಾಟಕದ ಮನೆ ಮಗಳಾದ ಅನುಶ್ರೀ ಅವರ ಮದುವೆ ಬಗ್ಗೆ ಅನೇಕ ವದಂತಿಗಳು ಹರಡಿದ್ದವು. ಅನುಶ್ರೀ ಮದುವೆ ಯಾವಾಗ ಅನ್ನೋ ಪ್ರಶ್ನೆ ಎಲ್ಲರಿಗೂ ಇತ್ತು. ಇದಕ್ಕೆಲ್ಲ ಉತ್ತರವನ್ನು ಅನುಶ್ರೀ ಅವರು ಆಗಸ್ಟ್ 28 ಕ್ಕೆ ರೋಷನ್ ಅವರನ್ನು ಮದುವೆಯಾಗಿ ಉತ್ತರ ಕೊಟ್ಟಿದ್ದಾರೆ.
ರಘು ದೀಕ್ಷಿತ್ ಮತ್ತು ವಾರಿಜಾಶ್ರೀ ವೇಣುಗೋಪಾಲ್

2019 ರಲ್ಲಿ ನೃತ್ಯಗಾರ್ಥಿ ಮಯೂರಿ ಹಾಗೂ ರಘು ದೀಕ್ಷಿತ್ ವಿಚ್ಚೇಧನ ಪಡೆದ ನಂತರ ಅಕ್ಟೋಬರ್ 14 ರಂದು ವಾರಿಜಾಶ್ರೀ ವೇಣುಗೋಪಾಲ್ ಜೊತೆಗೆ ಮದುವೆಯ ಬಂಧಕ್ಕೆ ಕಾಲಿಟ್ಟರು. ವಾರಿಜಾಶ್ರೀ ವೇಣುಗೋಪಾಲ್ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದ ಸಂಗೀತಗಾರತಿ.
ರಾಣಾ ಮತ್ತು ರಕ್ಷಿತಾ ಕೆಸರ್ಕರ್
ಏಳು ಮಳೆ ಚಿತ್ರದಲ್ಲಿ ತಮ್ಮ ಅದ್ಬುತ ನಟನೆಗೆ ಪ್ರಶಂಸೆ ಗಳಿಸಿರುವ ರಾಣಾ ಅವರು ರಕ್ಷಿತಾ ಕೆಸರ್ಕರ್ ಎಂಬುವವರ ಜೊತೆ ಹಸೆಮಣೆ ಏರಿದರು.
ಐಶ್ವರ್ಯ ರಂಗರಾಜನ್ ಮತ್ತು ಸಾಯಿ ಸ್ವರೂಪ್

ಸರಿಗಮಪ ಕನ್ನಡ ಸೀಸನ್ 11 ನ ಸ್ಪರ್ಧಿ ಯಾಗಿ ನಂತರ ಕನ್ನಡದ ಅನೇಕ ಹಾಡುಗಳಿಗೆ ಧನಿ ನೀಡಿದ ಐಶ್ವರ್ಯ ರಂಗರಾಜನ್ ಸದ್ದಿಲ್ಲದೇ ಮದುವೆ ಆದರು. ಮಂಗಳೂರಿನ ಸಾಯಿ ಸ್ವರೂಪ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚೈತ್ರ ವಾಸುದೇವನ್ ಮತ್ತು ಜಗದೀಪ್

ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಚಾಮರ ವಜ್ರದಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಚೈತ್ರ ವಾಸುದೇವನ್ ಉದ್ಯಮಿ ಜಗದೀಪ್ ಕೈ ಹಿಡಿದರು. *
ರಜಿನಿ ಗೌಡ ಮತ್ತು ಅರುಣ್ ಗೌಡ
ಅಮೃತವರ್ಷಿಣಿ ಯ ಅಮೃತ ಪಾತ್ರಧಾರಿ ರಜಿನಿ ಫಿಟ್ನೆಸ್ ಟ್ರೈನರ್ ಆಗಿರುವ ಅರುಣ್ ಗೌಡ ಅವರ ಜೊತೆ ವಿವಾಹ ಮಾಡಿಕೊಂಡಿದ್ದಾರೆ.
ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರಾ

ಅಗ್ನಿಸಾಕ್ಷಿಯ ಸನ್ನಿದಿ ಪಾತ್ರದಿಂದ ಜನರ ಮನಸು ಕದಿದ್ದ ಗುಳಿಕೆನ್ನೆ ಸುಂದರಿ ವೈಷ್ಣವಿ ಗೌಡ, ಅನಕೂಲ್ ಮಿಶ್ರಾ ಅವರ ಜೊತೆ ಅಗ್ನಿಸಾಕ್ಷಿ ಯಾಗಿ ಮದುವೆಯಾಗಿದ್ದಾರೆ.
ಅರ್ಚನಾ ಕೊಟ್ಟಿಗೆ ಮತ್ತು ಬಿ. ಆರ್. ಶರತ್
ನಟಿ ಅರ್ಚನಾ ಕೊಟ್ಟಿಗೆ ಕ್ರಿಕೆಟಿಗ ಬಿ. ಆರ್ ಶರತ್ ಅವರನ್ನು ಮದುವೆಯಾದರು. ಮದುವೆ ಸಂಭ್ರಮದಲ್ಲಿ ನಟನಾ ಕ್ಷೇತ್ರ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರು ಭಾಗವಹಿಸಿ ವಧು ವರರಿಗೆ ಹಾರೈಸಿದರು.
ಶ್ರೀ ರಾಮ್ ಮತ್ತು ಸ್ಫೂರ್ತಿ
ನಟ ಶ್ರೀ ರಾಮ್ ತನ್ನ ಗೆಳತಿ ಸ್ಫೂರ್ತಿ ಅವರೊಂದಿಗೆ ನವೆಂಬರ್ 30 ರಂದು ಸಪ್ತಪದಿ ತುಳಿದರು. ದೇವಸ್ಥಾನದಲ್ಲಿ ಸಿಂಪಲ್ ಆಗಿ ಮದುವೆಯಾಗಿರುವ ಇವರು ಜಸ್ಟ್ ಮ್ಯಾರೀಡ್ ಆದ ನವ ಜೋಡಿಗಳು.
ದೀಪ್ತಿ ಮಾನೆ ಮತ್ತು ರೋಹನ್

ಪದ್ಮಾವತಿ ಸೀರಿಯಲ್ ಮೂಲಕ ಆಕ್ಟಿಂಗ್ ದುನಿಯಾಗೆ ಎಂಟ್ರಿ ಕೊಟ್ಟ ದೀಪ್ತಿ ಮಾನೆ ತಮ್ಮ ಬಹುಕಾಲದ ಗೆಳೆಯ ರೋಹನ್ ಜೊತೆಗೆ ಈ ವರ್ಷ ಸಪ್ತಪದಿ ತುಳಿದಿದ್ದಾರೆ.ಇದಿಷ್ಟು ಈ ವರ್ಷ ಮದುವೆ ಎಂಬ ಬದುಕಿನ ಹೊಸ ಪುಟಗಳನ್ನು ತೆರೆದಿರುವ ಕಲಾವಿದರ ಲಿಸ್ಟ್.