new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಗಲಾಟೆ ಮಾಡೋದು ನನ್ ಕೆಲ್ಸ ಅಲ್ಲ : ಕಿಚ್ಚ

ಗಲಾಟೆ ಮಾಡೋದು ನನ್ ಕೆಲ್ಸ ಅಲ್ಲ : ಕಿಚ್ಚ
  • PublishedDecember 27, 2025

ಹುಬ್ಬಳ್ಳಿ ಯಲ್ಲಿ ಯುದ್ಧಕ್ಕೆ ಸಿದ್ದ ಎನ್ನುವ ಮಾತು ಸಖತ್ ಸುದ್ದಿ ಆಗಿತ್ತು. ಈ ವಿಚಾರವಾಗಿ ಲಾಸ್ಟ್ ಟೈಮ್ ಪೈರಸಿ ಬಗ್ಗೆ ಕ್ಲಾರಿಫಿಕೇಷನ್ ಕೊಟ್ಟರು.ಇದೀಗ ಈ ಪೈರಸಿ ವಿಚಾರವಾಗಿ ಮತ್ತೆ ಸುದೀಪ್ ಅವರು ಮಾತನಾಡಿದ್ದಾರೆ.

“24 ಗಂಟೆಗಿಂತ ಮುಂಚೆ ನಾನು ಎಚ್ಚರಿಕೆ ಕೊಟ್ಟಿದ್ದೆ. ಅಹಂಕಾರದಲ್ಲಿ ಅಭಿಮಾನಿಗಳನ್ನ ಮುಂದೆ ಇಟ್ಕೊಂಡು ಮಾತಾಡೋ ವ್ಯಕ್ತಿ ನಾನಾಗಿದ್ರೆ, ನೀವು ಇಷ್ಟು ವರ್ಷ ನೋಡಿದ ಸುದೀಪ್ ಸುಳ್ಳಗ್ತಾನೆ.ಆತರ ಮಾತಾಡಿದೀನಿ ಆದ್ಮೇಲೆ ನಾನು ಏನೋ ಕೇಳಿ ಇರ್ಬೇಕು, ತಿಳಿದಿರ್ಬೇಕು, ಧೃಡವಾಗಿರಬೇಕು“ಎಂದು ಶುರುಮಾಡಿದರು.

“ಧೃಡವಾಗಿ ಬಂದಾಗ ರೆಡಿ ಇದೀವಿ ಅಂತ ಅಂದಿದ್ದು.ಸ್ವಲ್ಪ ತಾಳ್ಮೆಲಿ ಇದ್ದಾಗ ಉತ್ತರ ಸಿಗುತ್ತೆ.ನಾನು ನನ್ನ ಫ್ಯಾನ್ಸ್ ನ ನನ್ನ ಸಿನಿಮಾನ ಕಾಪಾಡಿಕೊಳ್ಳಿಲ ಅಂದ್ರೆ ಯಾರ್ ಕಾಪಾಡ್ತಾರೆ.ಹಾಗಾಗಿ ಗಲಾಟೆ, ಬೇಡದಿದ್ದನ್ನು ಮಾಡ್ಕೊಳ್ಳೋ ವ್ಯಕ್ತಿ ನಾನಲ್ಲ”. ಎಂದು ಮಾಧ್ಯಮದವರೊಂದಿಗೆ ಹಂಚಿಕೊಂಡರು.

ನಂತರ ಮುಂದುವರೆಸಿದ ಅವರು”ಪೈರಸಿ ಅಂತ ಬಂದಾಗ ನಾನು ಮಾತ್ರ ಅಲ್ಲ ಸರ್ಕಾರನು ಧೃಡವಾಗಿ ನಿಲ್ಲಬೇಕು.ಪವರ್ ಇರೋದು ಅಲ್ಲಿ” ಎನ್ನುವ ಮೂಲಕ ಸರ್ಕಾರದ ಸಾಥ್ ಬೇಕು ಎಂದು ಹೇಳಿದರು.

Written By
Kannada Picchar

Leave a Reply

Your email address will not be published. Required fields are marked *