ಬ್ಯಾಡ್ ಕಮೆಂಟ್ ಮಾಡಿದವರಿಗೆ ಬಿಸಿ ಮುಟ್ಟಿಸಿದ ಖಾಕಿ! ದರ್ಶನ್ ಪತ್ನಿ ದೂರು, 3 ಸ್ಪೆಷಲ್ ಟೀಮ್ ರಚನೆ
By Pallavi N Raj
ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮಗೆ ಬ್ಯಾಡ್ ಕಮೆಂಟ್ಸ್ ಮಾಡಿದವರ ವಿರುದ್ಧ ದೂರು ನೀಡಿದ್ದರು. ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಮಾಡಿರುವ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು.
ದೂರು ನೀಡಿದ ನಂತರ ಕೆಟ್ಟ ಕಮೆಂಟ್ ಮಾಡಿದ ಕಿಡಿಗೇಡಿಗಳ ಪತ್ತೆಗೆ ಮೂರು ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಸಿಸಿಬಿ ಸೈಬರ್ ಕ್ರೈಮ್ ನ ಮೂರು ತಂಡಗಳಿಂದ ತನಿಖೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಸೈಬರ್ ಕ್ರೈಮ್ ಪೊಲೀಸರಿಂದ ಮೆಟಾಗೆ ಪತ್ರ ಬರೆಯಲಾಗಿದ್ದು ಅಶ್ಲೀಲ ಕಾಮೆಂಟ್ ಹಾಕಿದ ಖಾತೆಗಳ ಮಾಹಿತಿ ನೀಡುವಂತೆ ಕೇಳಿಕೊಳ್ಳಲಾಗಿದೆ. 18 ಸೋಷಿಯಲ್ ಮೀಡಿಯಾ ಖಾತೆಗಳ ವಿವರ ನೀಡುವಂತೆ ಪತ್ರ ಬರೆಯಲಾಗಿದೆ.
ಕೆಲವು ಕಿಡಿಗೇಡಿಗಳ ಮಾಹಿತಿ ಕಲೆ ಹಾಕಿದ ಸೈಬರ್ ಕ್ರೈಮ್ ಪೊಲೀಸರು ಕಿಡಿಗೇಡಿಗಳ ಗುರುತು, ವಿಳಾಸ ಪತ್ತೆ ಹಚ್ಚಿ ಹುಡುಕಾಟ ಮಾಡಲಿದ್ದಾರೆ. ಐಪಿ ಅಡ್ರೆಸ್, ಸರ್ವರ್ ಮೂಲಕ ಕೆಲವರ ಮಾಹಿತಿ ಪತ್ತೆಯಾಗಿದೆ.
ಪೊಲೀಸರ ಶೋಧ ವಿಚಾರ ತಿಳಿದು ಕೆಲವರು ನಾಪತ್ತೆಯಾಗಿದ್ದು, 18 ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನ ಪರಿಶೀಲನೆ ನಡೆಸಿ, ಪ್ರತಿಯೊಬ್ಬರಿಗೂ ಖಾಲಿ ತಲಾಷ್ ಮಾಡಲಾಗಿದೆ. ಕೆಲವರು ಬಂಧನದ ಭೀತಿಯಲ್ಲಿ ತಲೆಮರೆಸಿಕೊಂಡಿದ್ದಾರೆ. ಅಕೌಂಟ್ ಗಳು, ಪೋಸ್ಟ್ ಡಿಲೀಟ್ ಮಾಡಿ ನಾಪತ್ತೆಯಾಗಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿಗೆ ದೂರು ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ಕಮೆಂಟ್ ಹಾಕುವವರ ವಿರುದ್ಧ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 (U/s-67,66(C)) ಅಡಿ ಎಫ್ಐಆರ್ ದಾಖಲಾಗಿದೆ.
ಇನ್ನೂ.. ಫ್ಯಾನ್ಸ್ ವಾರ್ ಶುರು ಆದ್ಮೇಲೆ ಇದೇ ಫಸ್ಟ್ ಟೈಮ್ ನೇರವಾಗಿಯೇ ಜೈಲಿಗೆ ಹೋಗಿ ವಿಜಯಲಕ್ಷ್ಮಿ ಪತಿ ದರ್ಶನ್ ಭೇಟಿ ಆಗಿದ್ದಾರೆ. ಸುಮಾರು ಹೊತ್ತು ಮಾತಾನಾಡಿದ್ದಾರೆ. ದರ್ಶನ್ ಸಹೋದರ ದಿನಕರ್ ಕೂಡ ಸಾಥ್ ಕೊಟ್ಟಿದ್ದರು. ವಿಜಯಲಕ್ಷ್ಮಿ ಅವರ ಮಾತುಗಳ ಬಳಿಕ ಫ್ಯಾನ್ಸ್ ವಾರ್ ಜೋರಾಗಿಯೇ ಆಯಿತು. ಆದಾದ ನಂತರದಲ್ಲಿ ಎಲ್ಲವೂ ಬದಲಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ವಾರ್ ಫ್ಯಾನ್ಸ್ ಅಂತ ಒಂದ್ಕಡೆ ದರ್ಶನ್ ಫ್ಯಾನ್ಸ್ ಮತ್ತೊಂದುಕಡೆ ಕಿಚ್ಚನ ಫ್ಯಾನ್ಸ್ ವಾರ್ ಮಾಡ್ತಿದ್ದಾರೆ..