ಕಿಚ್ಚ ಸುದೀಪ್ ನಟನೆಯ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಮಾರ್ಕ್. ಈ ಸಿನಿಮಾ ಇಂದು ಬಿಡುಗಡೆಗೊಂಡಿತು.ಹಾಗಾದರೆ ಮಾರ್ಕ್ ಸಿನಿಮಾ ಹೇಗಿತ್ತು? ಸಿನಿಮಾದಲ್ಲಿ ಏನಿತ್ತು? ಎನ್ನುವುದರ ಸಣ್ಣ ಮಾಹಿತಿ ಇಲ್ಲಿದೆ.

ವಿಜಯ ಕಾರ್ತೀಕೆಯ ಅವರ ಬರವಣಿಗೆ ಹಾಗೂ ಡೈರೆಕ್ಷನ್ ನಲ್ಲಿ ಮೂಡಿ ಬಂದಿರುವ ಸಿನಿಮಾ ‘ಮಾರ್ಕ್ ‘ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಕಲಾವಿದರ ಒಂದು ದೊಡ್ಡ ಬಳಗವಿರುವ ಈ ಚಿತ್ರ ಬಿಡುಗಡೆಯ ದಿನಾಂಕ ಅನೌನ್ಸ್ ಮಾಡಿದಾಗಿನಿಂದ ಇಲ್ಲಿಯವರೆಗೂ ಸದ್ದು ಮಾಡ್ತಾನೆ ಇದೆ.

ಮೊದಲನೆಯದಾಗಿ ಚಿತ್ರದ ಸ್ಕ್ರೀನ್ ಪ್ಲೇ ಬಹಳ ಉತ್ತಮವಾಗಿದ್ದು. ಒಂದು ಮಾಸ್ ಸಿನಿಮಾವನ್ನು ಅದರ ಗತ್ತು, ಗಮ್ಮತ್ತನ್ನು ಚೆನ್ನಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರು ಅಜೇಯ ಮಾರ್ಕಂಡೇಯ ಎಂಬ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಚ್ಚನ ಎಂಟ್ರಿಗೆ ಎಲ್ಲರೂ ಫಿದಾ ಆಗೋದಂತೂ ಪಕ್ಕ.

ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಶ್ನೆಸ್ ಗೆ ಮತ್ತೊಂದು ಹೆಸರೇ ಬಾದ್ ಷಾ ಕಿಚ್ಚ ಸುದೀಪ್. ಮಾರ್ಕ್ ಸಿನಿಮಾದಲ್ಲೂ ಅವರ ಮ್ಯಾನರಿಸಮ್, ಸ್ಟೈಲಿಶ್ ಅಟ್ಟಿಟ್ಯೂಡ್ ನೋಡಿದ ಅಭಿಮಾನಿಗಳು ಸಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.ಇನ್ನು ಸುದೀಪ್ ಅವರನ್ನು ಪೊಲೀಸ್ ಪಾತ್ರದಲ್ಲಿ ನೋಡೋದೇ ಒಂದು ಖುಷಿ, ಅದ್ರಲ್ಲೂ ಈ ಬಾರಿ ಸಸ್ಪೆಂಡ್ ಆಗಿರೋ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಸುದೀಪ್ ಅವರ ನಟನೆಯ ಬಗ್ಗೆ ದೂಸ್ರ ಮಾತಿಲ್ಲ. ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುವ ಅವರು ಅಜೇಯ ಮಾರ್ಕಂಡೇಯ ಪಾತ್ರದಲ್ಲೂ ತಮ್ಮ ನಟನಾ ಕೌಶಲ್ಯದಿಂದ ಮಿಂಚಿದ್ದಾರೆ.

ಮಾರ್ಕ್ ಸಿನಿಮಾದಲ್ಲಿ ಕಥಾ ನಾಯಕ ಸಸ್ಪೆಂಡ್ ಆಗಿರೋ ಒಬ್ಬ ಪೊಲೀಸ್ ಆಫೀಸರ್. ಕಥೆ ರಾಜಕೀಯ ತಂತ್ರ, ಡ್ರಗ್ಸ್ ದಂಧೆ ಹಾಗೇ ಚಿತ್ರದ ಟ್ರೈಲರ್ ನಲ್ಲಿ ಬಿಟ್ಟು ಕೊಟ್ಟಿರುವ ಹಾಗೇ ಮಕ್ಕಳ ಕಿಡ್ನಾಪ್ ಈ ಮೂರು ಅಂಶಗಳ ಸುತ್ತ ಸುತ್ತುವ ಕಥೆಯಾಗಿದೆ. ಸಿನಿಮಾದ ಫರ್ಸ್ಟ್ ಹಾಫ್ ನಲ್ಲಿ ಕುತೂಹಲ ವನ್ನು ಹೆಚ್ಚಿಸಿ, ಆ ಕುತೂಹಲಕ್ಕೆ ಹಾಗೂ ಹಲವಾರು ಪ್ರಶ್ನೆಗಳಿಗೆ ಎರಡನೇ ಹಾಫ್ ನಲ್ಲಿ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಚಿತ್ರವು ಪಕ್ಕ ಮಾಸ್ ಸಿನಿಮಾ, ಫ್ಯಾಮಿಲಿ ಆಡಿಯೆನ್ಸ್ ಗಳಂತು ಬಹಳ ಇಷ್ಟ ಪಟ್ಟು ನೋಡೋ ಸಿನಿಮಾ ಅನ್ನೋದ್ರಲ್ಲಿ ಡೌಟೇ ಇಲ್ಲ.

Written By
Kannada Picchar

Leave a Reply

Your email address will not be published. Required fields are marked *