ಶಿವಣ್ಣನ ಪುನರ್ಜನ್ಮಕ್ಕೆ ಒಂದು ವರ್ಷ..!!
ಡಾ. ಶಿವರಾಜ್ ಕುಮಾರ್ ಅವರು ತಮ್ಮ ಜೀವನದ ಅತ್ಯಂತ ಕಠಿಣ ಸವಾಲನ್ನು ಎದುರಿಸಿ ಇಲ್ಲಿಗೆ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ಅವರು ತಾವು ಗುಣಮುಖರಾಗಲು ಕಾರಣರಾದ ವ್ಯಕ್ತಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಶಿವಣ್ಣ ಅವರು ಕಳೆದ ವರ್ಷ ಕ್ಯಾನ್ಸರ್ ಎಂಬ ಕಾಯಿಲೆಗೆ ತುತ್ತಾಗಿದ್ದರು. ಡಿಸೆಂಬರ್ 24, 2024 ರಂದು ವಿದೇಶದಲ್ಲಿ ಚಿಕಿತ್ಸೆ ಪಡೆದು ಗುಣ ಮುಖರಾಗಿ ಮತ್ತೆ ಬಂದಿದ್ದರು. ಇದೀಗ ಆ ಪುನರ್ಜನ್ಮಕ್ಕೆ ಒಂದು ವರ್ಷವಾಯಿತು. ಹೀಗಾಗಿ ಅವರು ತಮ್ಮ ಕೃತಜ್ಞತೆಯನ್ನು ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಮುಖಾಂತರ ಹೇಳಿ ಕೊಂಡಿದ್ದಾರೆ.
ಭಾವನಾತ್ಮಕ ಇನ್ಸ್ಟಾಗ್ರಾಮ್ ಪೋಸ್ಟ್
“ನನ್ನ ಜೀವನದ ಬಹು ದೊಡ್ಡ ಸವಾಲಿಗೆ ಇಂದು ಒಂದು ವರ್ಷ. ನಾನು ಮತ್ತೆ ಅದೇ ಚೇತನದಿಂದ ಮುನ್ನಡೆಯಲು ಸಾಧ್ಯವಾದದು ನಿಮ್ಮೆಲರ ಪ್ರೀತಿ, ಆಶೀರ್ವಾದದಿಂದ. ಡಾ. ಮನೋಹರನ್ ಮುರಗೇಶನ್ ಮತ್ತು ತಂಡ, ಡಾ. ದಿಲೀಪ್, ಡಾ ಶಶಿಧರ್, ಡಾ. ವಿ. ಕೆ ಶ್ರೀನಿವಾಸ್, ಡಾ. ಯೋಗಿತಾ ಮತ್ತು ಡಾ. ಅನಿತಾ ಧರ್ಮಲಿಂಗಂ ಅವರಿಗೆ ನನ್ನ ಅನಂತಾನಂತ ವಂದನೆಗಳು. ನಿಮ್ಮ ಪ್ರೀತಿಗೆ ಸದಾ ಚಿರಋಣಿ.” ಎಂದು ಬರೆದು ಪೋಸ್ಟ್ ಹಾಕಿದ್ದಾರೆ.