new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಸುದೀಪ್-ದರ್ಶನ್‌ ಫ್ಯಾನ್ಸ್‌ ವಾರ್‌ ಬಗ್ಗೆ ಏನಂದ್ರು ಸಾಧು ಕೋಕಿಲ

ಸುದೀಪ್-ದರ್ಶನ್‌ ಫ್ಯಾನ್ಸ್‌ ವಾರ್‌ ಬಗ್ಗೆ ಏನಂದ್ರು ಸಾಧು ಕೋಕಿಲ
  • PublishedDecember 24, 2025

ಕನ್ನಡ ಚಿತ್ರ ರಂಗದಲ್ಲಿ ಸದ್ಯದಲ್ಲಿ ಚರ್ಚೆ ಆಗುತ್ತಿರುವ ವಿಷಯ ಅಂದ್ರೆ ಸುದೀಪ್-ದರ್ಶನ್‌ ಫ್ಯಾನ್ಸ್‌ ವಾರ್‌.ಕಳೆದ ಮೂರು ನಾಲ್ಕು ದಿನಗಳಿಂದ ಇದೇ ವಿಚಾರ ಇಡೀ ಚಿತ್ರರಂಗದಲ್ಲಿ ಮಾತಾಗಿದೆ. ಈಗ ಇದರ ಬಗ್ಗೆ ಸಾಧು ಕೋಕಿಲ ಅವರು ಮಾಧ್ಯಮದವರೊಂದಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಫ್ಯಾನ್ಸ್‌ ವಾರ್‌ ಬಗ್ಗೆ ಹೇಳಿರೋ ಸಾದು “ ಅಪ್ಪು,ಯಶ್‌,ದರ್ಶನ್‌ ಮತ್ತು ಸುದೀಪ್‌ ಫ್ಯಾನ್ಸ್‌ ಎಲ್ರೂ ನನ್‌ ಫ್ಯಾನ್ಸ್‌” ಎಂದು ಹೇಳಿದ್ದಾರೆ ಎಂದು ಸ್ಯಾಂಡಲ್ ವುಡ್ ನ ಹಾಸ್ಯ ಕಲಾವಿದ ಸಾಧು ಕೋಕಿಲ ಅವರು ಹೇಳಿದ್ದಾರೆ.

ಇತ್ತೀಚಿಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹುಬ್ಬಳ್ಳಿಯಲ್ಲಿ ನೀಡಿದ ಸ್ಟೇಟ್ ಮೆಂಟ್ ಬಾರಿ ಚರ್ಚೆಗೆ ಕಾರಣವಾಗಿತ್ತು. “ಯುದ್ಧಕ್ಕೆ ಸಿದ್ದ, ಯಾಕಂದ್ರೆ ನಾವು ಮಾತಿಗೆ ಬದ್ದ” ಎನ್ನುವುದು.

ಈ ಘಟನೆಯ ಮಾರನೇ ದಿನ ವಿಜಯಲಕ್ಷ್ಮಿ ದಾವಣಗೆರೆ ಯಲ್ಲಿ “ಕೆಲವೊಂದು ವ್ಯಕ್ತಿಗಳು ದರ್ಶನ್ ಅವರು ಇಲ್ದೇ ಇರುವಾಗ ಅವರ ಬಗ್ಗೆ, ಅವರ ಫ್ಯಾನ್ಸ್ಗಳ ಬಗ್ಗೆ ವೇದಿಕೆ ಮೇಲೆ ಹೋಗೋದು, ನಿಂತುಕೊಂಡು ಮಾತಾಡೋದು, ಚಾನೆಲ್ ನಲ್ಲಿ ಮಾತಾಡೋದು. ದರ್ಶನ್ ಅವರು ಇದ್ದಾಗ ಬೆಂಗಳೂರಲ್ಲಿ ಎಲ್ಲಿ ಇರ್ತಾರೆ ಅಂತ ಗೊತ್ತಾಗಲ್ಲ ” ಎಂದು ಹೇಳಿದ್ದರು. ಇದು ಸುದೀಪ್ ಅವರಿಗೆ ಟಾಂಗ್ ಎಂದು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡಿದವು. ಮುಂಚೆಯೇ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ಮಧ್ಯೆ ಫ್ಯಾನ್ಸ್ ವಾರ್ ನಡೆಯುತ್ತಿತ್ತು. ಇದು ಅದಕ್ಕೆ ಮತ್ತೆ ಪುಷ್ಠಿ ಕೊಟ್ಟಂತಾಯಿತು.

Written By
Kannada Picchar

Leave a Reply

Your email address will not be published. Required fields are marked *