ಯುದ್ಧ ಹೇಳಿಕೆಗೆ ಕಿಚ್ಚ ಸ್ಪಷ್ಟನೆ! ವಿಜಯಲಕ್ಷ್ಮಿ ಹೇಳಿಕೆಗೂ ಪ್ರತಿಕ್ರಿಯೆ.
ನಟ ಕಿಚ್ಚ ಸುದೀಪ್ ಅಂದ್ರೆ ತಾಳ್ಮೆ.. ತಾಳ್ಮೆ ಅಂದ್ರೆ ಕಿಚ್ಚ ಬಟ್ ಮೊನ್ನೆ ನಡೆದ ಪ್ರೀ ರೀಲಿಸ್ ಈವೆಂಟ್ನಲ್ಲಿ ಕಿಚ್ಚ ತಾಳ್ಮೆ ಕಳ್ಕೊಂಡು ಕಂಟ್ರೋಲ್, ಕಂಟ್ರೋಲ್ ಅಂತಿದ್ರು..
ಹೌದು.. ಹುಬ್ಬಳ್ಳಿಯಲ್ಲಿ ಹೇಳಿದ್ದ ಯುದ್ಧ ಹೇಳಿಕೆಗೆ ನಟ ಕಿಚ್ಚ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಯಾರಿಗಾದ್ರೂ ವಾರ್ನಿಂಗ್ ಮಾಡಬೇಕಿದ್ರೇ ವೇದಿಕೆ ನನಗೆ ಬೇಕಿಲ್ಲ. ನಾನ್ ಮಾತಲ್ಲಿ ಪೈರಸಿ ಅಂತ ಯಾಕೆ ಹೇಳ್ಬೇಕಿತ್ತು..? ಅವಶ್ಯಕತೆ ಇರಲಿಲ್ಲ. ಪೈರಸಿ ಬಗ್ಗೆ ವಾರ್ನ್ ಮಾಡಿದ್ದು ತಪ್ಪಾ ಎಂದು ಡಿಜಿಟಲ್ ಮಾಧ್ಯಮದವರೊಂದಿಗೆ ಕಿಚ್ಚ ಪ್ರಶ್ನೆ ಮಾಡಿದ್ದಾರೆ…
ನನ್ನ ಸಿನಿಮಾವನ್ನು ನಾನು ಕಾಪಾಡಿಕೊಳ್ಳಬೇಕು. ಚಿತ್ರದ ಹಿಂದೆ ಎಷ್ಟೋ ಜನ ಕಲಾವಿದರಿದ್ದಾರೆ. ಎಷ್ಟೋ ಜನರ ಬದುಕು ಇದೆ. ಯಾವುದೋ ಒಂದು ಜಿದ್ದಿಗೆ ಮಾಡೋದಲ್ಲ. ಪೈರಸಿ ಮಾಡ್ತೀರಾ..?
ಕಾಪಾಡಿಕೊಳ್ಳಬೇಕಿತ್ತು. ಇಷ್ಟು ವರ್ಷದ ಸಿನಿಮಾ ಜರ್ನಿಯಲ್ಲಿ ಹುಬ್ಬಳ್ಳಿಯಲ್ಲಿ ಮಾತನ್ನಾಡಬೇಕಾದರೆ ನನಗೆ ಗೊತ್ತಿರಲಿಲ್ವಾ? ಎಷ್ಟು ಕ್ಯಾಮೆರಾ ಆನ್ ಇರುತ್ತೆ. ಇದು ವೈರಲ್ ಆಗುತ್ತೆ ಎಂದು? ನಾನು ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಚೆಸ್ ಆಡಬೇಕಾದರೆ ನಾವು ಕದ್ದುಮುಚ್ಚಿ ಚೆಕ್ಮೆಟ್ ಎಂದು ಹೇಳೋಕೆ ಆಗಲ್ಲ. ನೇರವಾಗಿಯೇ ಹೇಳಬೇಕು. ಚೆಸ್ ಮೈಂಡ್ಗೇಮ್
ಇನ್ನೂ.. ಬಹಳವರ್ಷಗಳ ನಂತರ ಹಬ್ಬಳ್ಳಿಗೆ ಹೋಗಿರ್ತೀರಿ ಯಾವಾಗಲೂ ತಾಳ್ಮೆ ಅಂತಿರೋ ನೀವು ಯಾಕೆ ತಾಳ್ಮೆ ಕಳ್ಕೊಂಡು ಯುದ್ಧದ ಬಗ್ಗೆ ಮಾತಾಡ್ತೀರಿ ಎಂಬ ಕನ್ನಡ ಪಿಚ್ಚರ್ ಪ್ರತಿನಿಧಿ ಪ್ರಶ್ನೆಗೆ ಉತ್ತರಿಸಿದ ಕಿಚ್ಚ.. ನಾನು ಆ ಲೆವೆಲ್ ಗೆ ತಾಳ್ಮೆ ಕಳ್ಕೋತಿನಿ ಅಂದ್ರೆ ರೀಸನ್ ಇರುತ್ತೆ ಅಲ್ವಾ..? ಪೈರಸಿ ಕಾಟದಿಂದ ಬೇಸತ್ತಿದ್ದೀವಿ.. ಯುದ್ಧ ಪೈರಸಿ ವಿರುದ್ಧ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ..
ಮುಂದುವರೆದು ಸ್ಟಾರ್ ವಾರ್ ಫ್ಯಾನ್ ವಾರ್ ಬಗ್ಗೆ ಕೇಳಿದ ಕನ್ನಡ ಪಿಚ್ಚರ್ ಪ್ರತಿನಿಧಿಗೆ ಕಿಚ್ಚ ಕೂಲ್ ಆಗೆ ಉತ್ತರಿಸಿದ್ರು ಆ ಸಮಯದಲ್ಲಾದ ಒಂದಷ್ಟು ವಿಚಾರವನ್ನು ಶೇರ್ ಮಾಡ್ಕೋತಾರೆ..
ಏನಿವೇ ಒಂದುವಾರದಿಂದ ನಡಿತೀರೋ ಈ ರಂಪರಾಮಾಯಣಕ್ಕೆ ಕಿಚ್ಚ ಸದ್ಯಕ್ಕೆ ತೆರೆ ಎಳೆದಿದ್ದಾರೆ..