ಕರಿಕಾಡ ‘ಕಬ್ಬಿನ್ ಜಲ್ಲೆ’ ಈ ಚಳಿಗೆ ಜ್ವಾಲೆ
ನಿರ್ದೇಶಕ ಗಿಲ್ಲಿ ವೆಂಕಟೇಶ್ ನಿರ್ದೇಶನ ಮಾಡಿರುವ ‘ಕರಿಕಾಡ ‘ ಚಿತ್ರದ “ಕಬ್ಬಿನ್ ಜಲ್ಲೆ ” ಹಾಡು ಬಿಡುಗಡೆಯಾಗಿದ್ದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿನಿ ಪ್ರಿಯರ ಗಮನ ಸೆಳೆದಿದೆ.
ದೀಪ್ತಿ ದಾಮೋದರ್ ನಿರ್ಮಾಪಕರಾಗಿರುವ ಈ ಸಿನಿಮಾಗೆ ರವಿ ಕುಮಾರ್ ಎಸ್. ಆರ್ ಮತ್ತು ನಟರಾಜ್ ಎಸ್. ಆರ್ ಸಹ ನಿರ್ಮಾಪಕರಾಗಿ ಬಂಡವಾಳವನ್ನು ಹೂಡಿದ್ದಾರೆ.
ಅತೀಶಯ್ ಜೈನ್ ಸಂಗೀತ ನೀಡಿರುವ ಕಬ್ಬಿನ್ ಜಲ್ಲೆ ಹಾಡಿನ ಸಾಹಿತ್ಯವನ್ನು ಕೆ. ವೆಂಕಟೇಶ್ ಬರೆದಿದ್ದಾರೆ ಜೊತೆಗೆ ಅತೀಶಯ್ ಜೈನ್ ಹಾಗೂ ಮಾನಸ ಹೊಳ್ಳ ಈ ಸುಮಧುರವಾದ ಹಾಡಿಗೆ ಧನಿಯಾಗಿದ್ದು, ಹಾಡಿನ ಮೆರುಗನ್ನು ಹೆಚ್ಚಿಸಿದೆ.
ಸಂಗೀತಕ್ಕೆ ತಕ್ಕನಾದ ಡಾನ್ಸ್ ಇದ್ದು,ಹಿತಲಕ ಕರಿಬ್ಯಾಡ ಮಾವ, ಪಸಂದಾಗವ್ನೆ ಇಂತಹ ಟ್ರೆಂಡಿಂಗ್ ಹಾಡುಗಳಿಗೆ ಸ್ಟೆಪ್ಸ್ ಹಾಕಿ ಕೊರಿಯೋಗ್ರಾಫಿ ಮಾಡಿ ಕನ್ನಡ ಭೇಷ್ ಅನಿಸಿಕೊಂಡಿದ್ದ ಭೂಷಣ್ ಮಾಸ್ಟರ್ ಹಾಡಿನ ಕೊರಿಯೋಗ್ರಾಫಿಯನ್ನು ಮಾಡಿದ್ದಾರೆ.
‘ಕರಿಕಾಡ’ ಚಿತ್ರವು ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ನಿರ್ದೇಶಕರು ಈ ಚಿತ್ರದ ಮೂಲಕ ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ. ಕಾಡ ನಟರಾಜ್ ಮತ್ತು ನಿರೀಕ್ಷಾ ಶೆಟ್ಟಿ ಅಭಿನಯದ ಈ ಚಿತ್ರವು ಈಗಾಗಲೇ ತನ್ನ ಟೀಸರ್ ಮೂಲಕ ಕುತೂಹಲ ಮೂಡಿಸಿದೆ.ಈಗ ಬಿಡುಗಡೆಯಾಗಿರುವ ಈ ‘ಕಬ್ಬಿನ್ ಜೆಲ್ಲೆ’ ಹಾಡು ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.