ದುರ್ನಾಥ ತಾಳಲಾರದೇ ಸಿಡಿದೆದ್ದ ಐಂದ್ರಿತಾ ರೈ!
ಕನ್ನಡ ಚಲನಚಿತ್ರದ ‘ಮನಸಾರೆ’ ಹುಡುಗಿ ಐಂದ್ರಿತಾ ರೈ ಇತ್ತೀಚಿಗಿನ ಒಂದು ವಿಡಿಯೋ ಬಾರಿ ಗಮನ ಸೆಳೆದಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಏರುತ್ತಿರುವ ಕಸದ ಸಮಸ್ಯೆ ಬಗ್ಗೆ ಐಂದ್ರಿತಾ ರೈ ಕಾಳಜಿ ವಹಿಸಿದ್ದರು.
ಮೊನ್ನೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆರ್. ಆರ್ ನಗರದಲ್ಲಿರುವ ಐಡಿಯಲ್ ಹೋಮ್ಸ್ ಲೇಔಟ್ ನ ಪ್ರದೇಶದಲ್ಲಿ ಜರುಗುತ್ತಿರುವ ಕಸ ವಿಲೇವಾರಿ ಯ ಅವ್ಯವಸ್ಥೆ ಯಿಂದ ಆಗುತ್ತಿರುವ ಸಮಸ್ಯೆಯನ್ನು ಹೇಳಿಕೊಂಡರು.“ನನಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ, ಕಳೆದ ಮೂರು ದಿನಗಳಿಂದ ಈ ಕಸದ ಹೊಗೆಯಿಂದಾಗಿ ನಾನು ನರಳುತ್ತಿದ್ದೇನೆ. ಮನೆ ಪ್ಲಾಸ್ಟಿಕ್ ಸುಟ್ಟ ವಾಸನೆ ತುಂಬಿದೆ. ಈ ಘಟನೆ ಮುಂದುವರೆದರೆ ನಾನು ಆಸ್ಪತ್ರೆ ಸೇರಬೇಕಾಗುತ್ತದೆ” ಎಂದು ಎಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದರು.
ತಮ್ಮ ಖಾತೆಯಲ್ಲಿ ಅವರು ಎಂಎಲ್ಎ ಮುನಿರತ್ನ ಒಳಗೊಂಡಂತೆ ಇತರೆ ಅಧಿಕಾರಿಗಳ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ ಅಧಿಕಾರಿಗಳು ತಾತ್ಕಾಲಿಕ ಪರಿಹಾರವನ್ನು ತಂದಿದ್ದಾರೆ ಆದರೆ ಐಂದ್ರಿತಾ ರೈ ಅವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ ಎಂದು ಮತ್ತೆ ವಿಡಿಯೋ ದಲ್ಲಿ ಮನವಿ ಮಾಡಿಕೊಂಡಿದ್ದಾರೆ.