new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ರುಕ್ಕು ಬಾಲಿವುಡ್‌ ಎಂಟ್ರಿ?

ರುಕ್ಕು ಬಾಲಿವುಡ್‌ ಎಂಟ್ರಿ?
  • PublishedDecember 19, 2025

ಭಾರತೀಯ ಸಿನಿ ರಂಗದಲ್ಲಿ ಸದ್ಯಕ್ಕೆ ಸಖತ್‌ ಸುದ್ದಿ ಮಾಡುತ್ತಿರುವ ನಟಿ ನಮ್ಮ ಕನ್ನಡದ ಬೆಡಗಿ ರುಕ್ಮಿಣಿ ವಸಂತ್. ʼಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿಗೆ ಜೋಡಿಯಾಗಿ ಕನ್ನಡಿಗರ ಮನಸು ಗೆದ್ದ ಈ ಚೆಲುವೆ, ನಂತರʼಕಾಂತಾರ: ಚಾಪ್ಟರ್‌ 1ʼ ರಲ್ಲಿ ಕನಕಾವತಿಯಾಗಿ ಭಾರತೀಯ ಸಿನಿ ಪ್ರಿಯರ ಪ್ರೀತಿಗಳಿಸುವಲ್ಲಿ ಯಶಸ್ವಿಯಾದರು. ಇಂಡಿಯನ್‌ ಸಿನಿವಲ್ಡ್ ನಲ್ಲಿ ತಮ್ಮದೇ ಚಾರ್ಮ್‌ ಅನ್ನು ಪಸರಿಸಿರುವ ಇವರು ಬಾಲಿವುಡ್ಗೆ ಲಗ್ಗೆ ಇಡುತ್ತಿದ್ದಾರೆ ಎನ್ನುವ ಸುದ್ದಿ ಟ್ರೆಂಡಿಂಗ್‌ನಲ್ಲಿ ಇದೆ.

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ ವುಡ್‌ ನಟಿಯರಿಗೆ ಬಾಲಿವುಡ್‌ ನಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ,ರಶ್ಮಿಕ ಮಂದಣ್ಣ ನಿಂದ ಶುರುವಾದ ಈ ಪಯಣ ಬಳಿಕ ಶ್ರೀ ಲೀಲಾ ಅವರವರೆಗೆ ಬಂದು ನಿಂತಿದೆ.ಇದೀಗ ಈ ಪಟ್ಟಿಯಲ್ಲಿ ರುಕ್ಮಿಣಿ ವಸಂತ್‌ ಕೂಡ ಸೇರಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.ಇದಕ್ಕೆ ಕಾರಣವಾದದ್ದು ರುಕ್ಮಿಣಿ ಅವರು ಸಂದರ್ಶನವೊಂದರಲ್ಲಿ ಹೇಳಿರುವ ಮಾತು.ರುಕ್ಮಿಣಿ ಅವರು ತಮಗೆ ಬಾಲಿವುಡ್‌ ನಲ್ಲಿ ಆಫರ್‌ ಬರುತ್ತಿದೆ.ಒಳ್ಳೆ ಕಥೆ ಸಿಕ್ಕರೆ ಸಿನಿಮಾ ಮಾಡುವುದಾಗಿ ಹೇಳಿ ಕೊಂಡಿದ್ದಾರೆ.ಜತೆಗೆ ತಮ್ಮ ಹಿಂದಿ ಭಾಷೆಯ ಜ್ಞಾನದ ಬಗ್ಗೆ ಮಾತನಾಡಿರುವ ರುಕ್ಕು ಹಿಂದಿ ಭಾಷೆ ತನಗೆ ಹೊಸದಲ್ಲ ,ತನ್ನ ತಂದೆ ಸೇನೆಯಲ್ಲಿ ಇದ್ದರು ಹಾಗಾಗಿ ಹಿಂದಿ ಬಲ್ಲೆ ಎಂದು ಹೇಳಿ ಕೊಂಡಿದ್ದಾರೆ. ಹಾಗಾಗಿ ರುಕ್ಮಿಣಿ ವಸಂತ್‌ ಬಾಲಿವುಡ್‌ ಗೆ ಹಾರುತ್ತಾರೆ ಎನ್ನುವ ವಿಷಯ ಕೇಳಿ ಬರುತ್ತಿದೆ.

ಈ ಸುದ್ದಿ ಕೇಳಿರುವ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.ಆದರೆ ಇನ್ನು ಕೆಲವರು ರಶ್ಮಿಕ ಮಂದಣ್ಣ ಹಾಗು ಶ್ರೀ ಲೀಲಾ ಪರಭಾಷೆಗೆ ಹೋದ ನಂತರ ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ.ರುಕ್ಮಿಣಿ ವಸಂತ್‌ ಕೂಡ ಈ ಸಾಲಿಗೆ ಸೇರಿಕೊಳ್ಳುವ ಭಯ ಈಗ ಅವರಿಗೆ ಕಾಣುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *