ಯುವ ಬಗ್ಗೆ ಕೇಳಿದ್ದಕ್ಕೆ ರಾಜ್ಕುಮಾರ್ ಹಾಡಿನ ಮೂಲಕ ಉತ್ತರಿಸಿದ್ರು ಶ್ರೀದೇವಿ!
ಯುವ ಹಾಗೂ ಶ್ರೀದೇವಿ ಮದುವೆ ಆಗಿ ಬಹಳ ವರ್ಷಗಳಾಗಿವೆ.. ಈ ಇಬ್ಬರೂ ಬೇರೆಯಾಗೋ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರೂ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಶ್ರೀದೇವಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗ್ತಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಶ್ರೀದೇವಿ ಅವರಿಗೆ ಯುವ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಅವರು ರಾಜ್ಕುಮಾರ್ ಅವರಿನ ಹಾಡಿನ ಮೂಲಕ ಉತ್ತರವನ್ನು ನೀಡಿದ್ದಾರೆ.
ಹೌದು.. ಯುವ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆ ಆದವರು. ಕೆಲವು ವರ್ಷ ಸಂಸಾರ ನಡೆಸಿ ಇಬ್ಬರೂ ಬೇರೆ ಆಗೋ ನಿರ್ಧಾರಕ್ಕೆ ಬಂದರು. ಇಬ್ಬರ ಮಧ್ಯೆ ವೈಮನಸ್ಸು ಮೂಡಿದ್ದರಿಂದ ಬೇರೆ ಆಗುತ್ತಿದ್ದಾರೆ. ಈ ಕೇಸ್ ಕೋರ್ಟ್ನಲ್ಲಿದೆ. ಹೀಗಿರುವಾಗಲೇ ಯುವ ಅವರ ಬಗ್ಗೆ ಶ್ರೀದೇವಿ ಬಳಿ ಕೇಳಲಾಗಿದೆ. ಇದಕ್ಕೆ ಶ್ರೀದೇವಿ ಮುಚ್ಚುಮರೆ ಇಲ್ಲದೆ ಪ್ರತಿಕ್ರಿಯಿಸಿದ್ದಾರೆ.
ಶ್ರೀದೇವಿ ಇನ್ಸ್ಟಾಗ್ರಾಮ್ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದರು. ಈ ವೇಳೆ ಯುವರಾಜ್ಕುಮಾರ್ ಬಗ್ಗೆ ಏನು ಹೇಳ್ತೀರಾ ಎಂದು ಕೇಳಲಾಯಿತು. ಈ ಪ್ರಶ್ನೆಯನ್ನು ಪೋಸ್ಟ್ ಮಾಡಿ, ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡನ್ನು ಹಾಕಿದ್ದಾರೆ ಶ್ರೀದೇವಿ. ಯುವ ಹಾಗೂ ಆ ನಟಿಯ ಬಗ್ಗೆ ಏನು ಹೇಳ್ತೀರಾ ಅಂತ ಕೇಳಿದ್ದಕ್ಕೆ ಮೋಸ ಮಾಡೋದು ಆಯ್ಕೆ ತಪ್ಪಾಗಿ ಪಡೆಯೋದಲ್ಲ ಎಂಬ ಅರ್ಥದಲ್ಲಿ ಉತ್ತರ ನೀಡಿದ್ದಾರೆ.. ಈ ಪೋಸ್ಟ್ನಲ್ಲಿ ನಟಿಯ ಹೆಸರನ್ನು ಬ್ಲರ್ ಮಾಡಲಾಗಿದೆ..
ಇನ್ನೂ.. 7 ವರ್ಷಗಳ ಕಾಲ ಯುವ ಹಾಗೂ ಶ್ರೀದೇವಿ ಪ್ರೀತಿಸಿದರು. 2019ರಲ್ಲಿ ವಿವಾಹ ಆದರು. ನಾಲ್ಕೇ ವರ್ಷ ಸಂಸಾರ ನಡೆಸಿದ ಇವರು ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅನೇಕ ಬಾರಿ ಯುವ ಹಾಗೂ ಅವರ ಕುಟುಂಬದವರ ಮೇಲೆ ಶ್ರೀದೇವಿ ಕೋಪ ಹೊರಹಾಕಿದ್ದಾರೆ. ಈಗ ಯುವ ಬಗ್ಗೆ ಕೇಳಿದ್ದಕ್ಕೆ ರಾಜ್ಕುಮಾರ್ ಹಾಡು ಹಾಕಿ ಉತ್ತರಿಸಿದ್ದು ಅಭಿಮಾನಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗ್ತಿದೆ..