ರಾಜಕೀಯಕ್ಕೆ ಬರುತ್ತಾರಾ ದರ್ಶನ್? ಕೊಟ್ಟಿರುವ ಸುಳಿವು ಏನು?
ದರ್ಶನ್ ತೂಗುದೀಪ ನಟನೆಯ ಡೆವಿಲ್ ಸಿನಿಮಾ ಬಿಡುಗಡೆ ಆಗಿದೆ ರಾಜಕೀಯಕ್ಕೆ ಎಂಟ್ರಿ ಕೊಡುವ ಇಂಗಿತವನ್ನು ‘ಡೆವಿಲ್’ ಸಿನಿಮಾ ಮೂಲಕ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ನಿಜಕ್ಕೂ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಯೇ?
ಹೌದು.. ಈ ಪ್ರಶ್ನೆಗೆ ಹಲವು ಕಾರಣ ಗಳು
ದರ್ಶನ್ ಗೆ ಇರುವ ಅಭಿಮಾನಿಗಳು
ಸುಮಲತಾ ಸೇರಿದಂತೆ ಹಲವು ಪ್ರಚಾರದಲ್ಲಿ ದರ್ಶನ್ ಭಾಗಿ ರಾಜಕೀಯ ಸ್ನೇಹಿತರು ಇದ್ರು ಕಷ್ಟಕಾಲಕ್ಕೆ ಯಾರು ಸಹಾಯಕ್ಕೆ ಬರದೇ ಇರೋದು
ದರ್ಶನ್ ಗೆ ಆಗ್ದೇ ಇರೋರು ಕೆಲವರು ರಾಜಕೀಯ ರಂಗದಲ್ಲಿದ್ದಾರೆ ಅವರಿಗೆ ಬುದ್ಧಿ ಕಲಿಸಲು ದರ್ಶನ ರಾಜಕೀಯಕ್ಕೆ ಬರುವ ಸಾಧ್ಯತೆ ಹೆಚ್ಚಿದೆ ಅನುವ ಮಾತುಗಳು ಕೇಳಿ ಬರ್ತಿದೆ
ದರ್ಶನ್ ಅವರ ಈ ಸ್ಥಿತಿಗೆ ರಾಜಕೀಯ ನಾಯಕರುಗಳ ಕುಮ್ಮಕ್ಕು ಕಾರಣ ಅನ್ನೋ ಮಾತು ಅಭಿಮಾನಿಗಳಿಂದ ಕೇಳಿ ಬರುತ್ತಾ ಇದೆ ಹಾಗಾಗಿ ದರ್ಶನ್ ರಾಜಕೀಯಕ್ಕೆ ಬರಬೇಕು ಅಂತ ಅಭಿಮಾನಿಗಳು ಒತ್ತಡ ಕೂಡ ಹಾಕುತ್ತಿದ್ದಾರೆ
ದರ್ಶನ್ ಸಹೋದರ ದಿನಕರ ಹೇಳಿಕೆ ಕುತೂಹಲವನ್ನು ಮತ್ತಷ್ಟು ಜಾಸ್ತಿ ಮಾಡ್ತಿದೆ
ಭವಿಷ್ಯದಲ್ಲಿ ದರ್ಶನ್ ರಾಜಕೀಯಕ್ಕೆ ಬರ್ತಾರಾ..? ಅದನ್ನ ಸೆಲೆಬ್ರಿಟಿಗಳು ತೀರ್ಮಾನಿಸ್ತಾರೆ ಎಂದ ದಿನಕರ್..!
ತಮಿಳುನಾಡಿನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಟ ವಿಜಯ್ ಅವರ ಹೆಜ್ಜೆಯನ್ನೇ ದರ್ಶನ್ ಅನುಸರಿಸಿದ್ದಾರೆ. ವಿಜಯ್ ಸಹ ರಾಜಕೀಯಕ್ಕೆ ಎಂಟ್ರಿ ನೀಡುವ ಮೊದಲು ರಾಜಕೀಯ ವಿಷಯಗಳುಳ್ಳ ಸಿನಿಮಾಗಳಲ್ಲಿ ನಟಿಸಿದ್ದರು. ‘ಮರ್ಸೆಲ್’ ಇನ್ನಿತರೆ ಕೆಲವು ಸಿನಿಮಾಗಳಲ್ಲಿ ರಾಜಕೀಯ ಭಾಷಣಗಳನ್ನು ಸೇರಿಸಿದ್ದರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಟೀಕೆ ಮಾಡಿದ್ದರು. ತಮ್ಮ ರಾಜಕೀಯ ಅಜೆಂಡಾವನ್ನು ಸಿನಿಮಾಗಳಲ್ಲಿ ಸೇರಿಸಿದ್ದರು. ಆ ಮೂಲಕ ತಮ್ಮ ರಾಜಕೀಯ ಪ್ರವೇಶದ ಇಂಗಿತವನ್ನು ವ್ಯಕ್ತಪಡಿಸಿ ಬಳಿಕ ಒಮ್ಮೆಲೆ ರಾಜಕೀಯಕ್ಕೆ ಎಂಟ್ರಿ ಕೊಟ್ಟರು.
ಕನ್ನಡ ಚಿತ್ರ ನಟರಿಗೆ ರಾಜಕೀಯ ಹೊಸ ವಿಚಾರ ಅಲ್ಲ ಉಪೇಂದ್ರ ಅವರ ಪ್ರಜಾಕೀಯ ಪಕ್ಷ
ಪೂಜಾ ಗಾಂಧಿ, ಗೀತ ಶಿವರಾಜಕುಮಾರ್, ಶಶಿಕುಮಾರ್, ನಿಖಿಲ್ ಕುಮಾರಸ್ವಾಮಿ, ಜನಾರ್ದನ್ ರೆಡ್ಡಿ ಮಗ ಕಿರೀಟಿ… ಚಿತ್ರರಂಗಕ್ಕೂ ರಾಜಕೀಯಕ್ಕೂ ನಂಟಿದೆ ಬಟ್ ದರ್ಶನ್ ರಾಜಕೀಯಕ್ಕೆ ಬರ್ತಾರ ಕಾಲವೇ ಉತ್ತರಿಸಬೇಕು