new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಡೆವಿಲ್ ನೋಡಿ ದಿನಕರ್ ತೂಗುದೀಪ ಹೇಳಿದ್ದೇನು?

ಡೆವಿಲ್ ನೋಡಿ ದಿನಕರ್ ತೂಗುದೀಪ ಹೇಳಿದ್ದೇನು?
  • PublishedDecember 11, 2025

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಮಂದಿರಗಳಲ್ಲಿ ಅಬ್ಬರದ ಪ್ರದರ್ಶನ ಪಡೆದುಕೊಳ್ಳುತ್ತಾ ಇದೆ. ಚಿತ್ರವನ್ನು ವೀಕ್ಷಿಸಲು ನರ್ತಕಿ ಥಿಯೇಟರ್ ಗೆ ದರ್ಶನ್ ಅವರ ಕುಟುಂಬಸ್ಥರು,ಆಪ್ತರುಗಳು ಬಂದಿದ್ದರು. ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ಚಿತ್ರದ ಪ್ರದರ್ಶನದಲ್ಲಿ ಉಪಸ್ಥಿತರಿದ್ದರು. ಮಾಧ್ಯಮಗಳೊಂದಿಗೆ ಚಿತ್ರದ ಬಗ್ಗೆ ಹಾಗೂ ದರ್ಶನ್ ಅವರ ಬಗ್ಗೆ ಮಾತನಾಡಿದ ಅವರ ಮಾತುಗಳು ಅಭಿಮಾನಿಗಳಲ್ಲಿ ಒಂದು ನವೀನ ವಿಶ್ವಾಸವನ್ನು ಹುಟ್ಟಿಸಿದೆ.

ಅಭಿಮಾನಿಗಳ ಜೊತೆಗೆ ಕುಳಿತು ವೀಕ್ಷಣೆ

ದರ್ಶನ್ ಅವರ ಅನುಪಸ್ಥಿ ಯಲ್ಲಿ ಚಿತ್ರವು ಬಿಡುಗಡೆಗೊಂಡರು ಅವರ ಅಭಿಮಾನಿಗಳ ಪ್ರೀತಿ, ವಿಶ್ವಾಸ ಕಮ್ಮಿ ಆಗಿಲ್ಲ. ಅಂತಹ ಅಭಿಮಾನಿಗಳ ನಡುವೆ ಕುಳಿತು ದಿನಕರ್ ಅವರು ಚಿತ್ರ ವೀಕ್ಷಿಸಿದ್ದಾರೆ. ಜೊತೆಗೆ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ.

ದರ್ಶನ್ ಮನಸ್ಥಿಯ ಬಗ್ಗೆ ಅಪ್ಡೇಟ್

ದರ್ಶನ್ ಅವರು ಸದ್ಯಕ್ಕೆ ಬಂಧಿಯಾರಿಗುವುದರಿನ ಅನೇಕರಿಗೆ ದರ್ಶನ್ ಕುಗ್ಗಿ ಹೋಗಿದ್ದಾರೆ, ಮಾನಸಿಕವಾಗಿ ನೊಂದಿದ್ದಾರೆ ಎಂದೆಲ್ಲಾ ಉಹಾ ಪೋಹಗಳು ಕೇಳಿ ಬರುತ್ತಿತ್ತು. ಇದಕ್ಕೆ ಉತ್ತರಿಸಿದ ಅವರ ಸಹೋದರ ” ದರ್ಶನ್ ಕುಗ್ಗಿಲ್ಲ, ಕುಗ್ಗುವ ಮನಸ್ಥಿತಿ ಕೂಡ ಅವರದಲ್ಲ ಎಂದು ಹೇಳಿದ್ದಾರೆ.

ಅಭಿಮಾನಿಗಳೇ ಸಾಕು

ದರ್ಶನ್ ಅಭಿಮಾನಿಗಳು ಚಿತ್ರದ ಅನೌನ್ಸ್ ಮೆಂಟ್ ಆಗಿರುವ ಸಮಯದಿಂದಲೂ ಇಲ್ಲಿಯವರೆಗೂ ಅವರೇ ದರ್ಶನ್ ಅಭಿಮಾನಿ ಸಂಘ ಗಳ ನಾಯಕತ್ವದಲ್ಲಿ ತಮ್ಮ ಕೈಯಲ್ಲಾಗುವಷ್ಟು ಪ್ರಚಾರವನ್ನು ಮಾಡಿದ್ದಾರೆ. ನಿನ್ನೆ ರಾತ್ರಿಯೂ ಸಂಭ್ರಮ ಭರ್ಜರಿಯಾಗಿ ನಡೆದಿದೆ.

ದಿನಕರ್ ಅವರು ಅಭಿಮಾನಿಗಳನ್ನು ಕುರಿತು “ಅವರ ಸೆಲೆಬ್ರಿಟಿಸ್ ಅವರ ಜೊತೆ ಇರೋ ತನಕ ನಮ್ಮ ಅವಶ್ಯಕತೆ ಇಲ್ಲ,ಅವರ ಪ್ರೀತಿ ಅಷ್ಟರ ಮಟ್ಟಿಗೆ ಇದೆ, ಅಭಿಮಾನಿಗಳೇ ಸಾಕು” ಎಂದು ಅಭಿಮಾನಿಗಳನ್ನು ಹೊಗಳಿದರು.

Written By
Kannada Picchar

Leave a Reply

Your email address will not be published. Required fields are marked *