ಶಿವಣ್ಣನಿಂದ ಡೆವಿಲ್ ಚಿತ್ರಕ್ಕೆ ಶುಭಹಾರೈಕೆ
ದರ್ಶನ್ ಅಭಿನಯದ ‘ಡೆವಿಲ್‘ ಇನ್ನೇನು ಕೆಲವೇ ಗಂಟೆಗಳಲ್ಲಿ ಥೀಯೇಟರ್ ನಲ್ಲಿ ಬಿಡುಗಡೆ ಆಗಲಿದೆ. ಚಿತ್ರತಂಡ, ದರ್ಶನ್ ಅಭಿಮಾನಿಗಳು ಸಿನಿಮಾ ಪ್ರಚಾರವನ್ನ ಬಹಳ ಬರದಿಂದ ಮಾಡಿದೆ ಹಾಗೂ ಮಾಡುತ್ತಾ ಇದ್ದಾರೆ. ಇದೀಗ ಶಿವಣ್ಣ ಅವರು ಡೆವಿಲ್ ಚಿತ್ರಕ್ಕೆ ಶುಭ ಕೊರಿದ್ದಾರೆ.
ಈ ಡಿಸೆಂಬರ್ ಸೂಪರ್ ಸ್ಟಾರ್ಸ್ ಗಳ ಸಿನಿಮಾ ಹಬ್ಬ, ಶಿವಣ್ಣ ನಟನೆಯ ‘45‘ ಡಿಸೆಂಬರ್ 25 ಕ್ಕೆ ತೆರೆ ಕಾಣಲಿದೆ. ಆದರೆ ಅದಕ್ಕಿಂತ ಮುಂಚಿತವಾಗಿ ಡೆವಿಲ್ ತೆರೆ ಕಾಣಲಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ತಮ್ಮ ಬೆಸ್ಟ್ ವಿಶಸ್ಸ್ ಅನ್ನು ಸಿನಿಮಾಗೆ ತಿಳಿಸಿದ್ದಾರೆ.
ಸದ್ಯಕ್ಕೆ ಎಲ್ಲಾ ಕಡೆ ‘ಡಿಬಾಸ್ ಡಿಬಾಸ್‘ ಎಂಬ ಘೋಷಣೆಗಳನ್ನ ನಾವು ಚಿತ್ರ ಮಂದಿರದಲ್ಲಿ ಕಾಣಬಹುದು.ಸದ್ಯಕ್ಕೆ ಕರ್ನಾಟಕದಲ್ಲಿ ಡೆವಿಲ್ ಹಬ್ಬ ನಡೀತಾ ಇದೆ ಅಂತಾನೆ ಹೇಳಬಹುದು.