ಯಶ್‌ ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾ ಅನೌನ್ಸ್‌..!

ಬ್ಯಾಕ್‌ ಟು ಬ್ಯಾಕ್‌ ಗುಡ್‌ ನ್ಯೂಸ್‌ ಕೊಡ್ತಾರೆ ಯಶ್‌
ವರ್ಷದಿಂದ ಕಾದಿದ್ದ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ
ಕೊನೆಗೂ ಬಂದೇ ಬಿಡ್ತು ಫ್ಯಾನ್ಸ್‌ ಬಯಸಿದ್ದ ಆ ದಿನ

ರಾಕಿಂಗ್‌ ಸ್ಟಾರ್‌ …ಹೊಸ ಸಿನಿಮಾ ಅನೌನ್ಸ್‌ ಮಾಡದೇ ಇದ್ದರು ಕೂಡ ಯಶ್‌ ಮೇಲಿನ ಕ್ರೇಜ್‌ ಮಾತ್ರ ಕಮ್ಮಿ ಆಗಿಲ್ಲ …ಕೇವಲ ರಾಜ್ಯ , ದೇಶ ಮಾತ್ರವಲ್ಲ…ವಿಶ್ವದಾಧ್ಯಂತ ರಾಕಿ ಹವಾ ಇಂದಿಗೂ ಕೂಡ ಜೋರಾಗಿಯೇ ಇದೆ…ಹೊರ ದೇಶದ ಗಲ್ಲಿ ಗಲ್ಲಿಯಲ್ಲಿಯೂ ಯಶ್‌ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ… ಇನ್ನು ಯಶ್‌ ಹೊಸ ಸಿನಿಮಾ ಯಾವಾಗ ಅನೌನ್ಸ್‌ ಮಾಡ್ತಾರೆ ಅನ್ನೋ ಪ್ರಶ್ನೆಗೆ ಕಡೆಯೂ ಉತ್ತರ ಸಿಕ್ಕೇ ಬಿಟ್ಟಿದೆ…ಅದಷ್ಟೇ ಅಲ್ಲ.. ಅದರೊಟ್ಟಿಗೆ ಯಶ್‌ ನೋಡ್ಬೇಕು ಮಾತಾಡ್ಬೇಕು ಅಂತ ಕಾಯ್ತಿದ್ದ ಅಭಿಮಾನಿಗಳಿಗೂ ಯಶ್‌ ಭೇಟಿ ಮಾಡೋ ಚಾನ್ಸ್‌ ಸಿಕ್ತಿದೆ….

ಯೆಸ್‌ ..ರಾಕಿಂಗ್‌ ಸ್ಟಾರ್‌ ಈ ಭಾರಿ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ…ಜನವರಿ 8 ರಂದು ನಟ ಯಶ್‌ ಹುಟ್ಟುಹಬ್ಬವಿದ್ದು ಈ ಭಾರಿ ಬರ್ತಡೇಯನ್ನ ಫ್ಯಾನ್ಸ್‌ ಜೊತೆ ಆಚರಣೆ ಮಾಡಿಕೊಳ್ತಿದ್ದಾರೆ…. ಕಳೆದ ಎರಡು ಮೂರು ವರ್ಷದಿಂದ ಅಭಿಮಾನಿಗಳನ್ನ ಭೇಟಿ ಮಾಡಲು ಸಾಧ್ಯವಾಗದೇ ಹುಟ್ಟುಹಬ್ಬವನ್ನೂ ಆಚರಣೆ ಮಾಡಿಕೊಳ್ಳದ ಯಶ್‌ ಈ ಭಾರಿ ಅದ್ದೂರಿಯಾಗಿ ಅಭಿಮಾನಿಗಳನ್ನ ಮೀಟ್‌ ಮಾಡಲಿದ್ದಾರೆ…ಸಾವಿರ ಲೆಕ್ಕದಲ್ಲಿ ಅಲ್ಲ… ಲಕ್ಷಾಂತರ ಫ್ಯಾನ್ಸ್‌ ರಾಕಿ ಭಾಯ್‌ ಮೀಟ್‌ ಮಾಡಲು ಬರೋದಕ್ಕೆ ಈಗಾಗಲೇ ಸಿದ್ದತೆ ಮಾಡಿಕೊಳ್ತಿದ್ದಾರೆ…

ಅಭಿಮಾನಿಗಳ ಸಮ್ಮುಖದಲ್ಲಿ , ಫ್ಯಾನ್ಸ್‌ ಪ್ರೀತಿ ಆಶೀರ್ವಾದ ಪಡೆದು ಯಶ್‌ ತಮ್ಮ ಹೊಸ ಸಿನಿಮಾ ಅನೌನ್ಸ್‌ ಮಾಡಲಿದ್ದಾರೆ…ಹೌದು ಹುಟ್ಟುಹಬ್ಬದಂದೆ ರಾಕಿ ಸಿನಿಮಾ ಘೋಷಣೆ ಆಗಲಿದೆ , ಸದ್ಯ ಸುದ್ದಿಯಾಗಿರೋ ಎಲ್ಲಾ ವಿಚಾರಕ್ಕೂ ರಾಕಿ ಬ್ರೇಕ್‌ ಹಾಕಿ ದೊಡ್ಡದಾಗಿ ಸುದ್ದಿ ಕೊಡೋದಂತು ಕನ್ಫರ್ಮ್‌ ಆಗಿದೆ…

ಮತ್ತೊಂದು ಸಂತಸದ ವಿಚಾರ ಅಂದ್ರೆ ಯಶ್‌ ತಮ್ಮದೇ ಹೋಂ ಬ್ಯಾನರ್‌ ಸ್ಟಾರ್ಟ್‌ ಮಾಡ್ತಾರಂತೆ…ಮಗಳು ಐರಾ ಹೆಸರಿನಲ್ಲಿ ಪ್ರೊಡಕ್ಷನ್‌ ಹೌಸ್‌ ಶುರುವಾಗಲಿದೆ ಅನ್ನೋ ಸುದ್ದಿ ಜೋರಾಗಿದೆ …ಆದ್ರೆ ಸದ್ಯ ಅನೌನ್ಸ್‌ ಆಗುವ ಸಿನಿಮಾ ಕೆಬಿಎನ್‌ ಅಥವಾ ಜೀ ಸ್ಟೂಡಿಯೋಸ್‌ ಬ್ಯಾನರ್‌ ನಲ್ಲಿ ನಿರ್ಮಾಣ ಆಗಲಿದ್ಯಾಮತೆ ಆದ್ರೆ ಯಾವ ನಿರ್ದೇಶಕ ಯಾವ ರೀತಿ ಸಿನಿಮಾ ಅನ್ನೋದು ಮಾತ್ರ ಹುಟ್ಟುಹಬ್ಬದಿನದಂದೇ ಕನ್ಫರ್ಮ್‌ ಆಗೋದು….

ಪವಿತ್ರ, ಬಿ
Exit mobile version