ಕಿಚ್ಚ ಸುದೀಪ್ ಹಾಗೂ ಸಿಎಂ ಬೊಮ್ಮಾಯಿ ಇಬ್ಬರು ಸಾಕಷ್ಟು ವರ್ಷದಿಂದ ಫ್ಯಾಮಿಲಿ ಫ್ರೆಂಡ್ಸ್ …ಸುದೀಪ್ ಮತ್ತು ಬೊಮ್ಮಾಯಿ ಕುಟುಂಬಸ್ಥರಲ್ಲಿ ಒಳ್ಳೆ ಅನುಬಂಧವಿದೆ,..ಇಂದು ಕಿಚ್ಚ ರಾಜಕೀಯವಾಗಿ ಬೊಮ್ಮಾಯಿ ಅವ್ರ ಬೆನ್ನಿಗೆ ನಿಂತಿದ್ದಾರೆ…ಅದಕ್ಕೆ ಕಾರಣವೂ ಇದೆ..ಕಿಚ್ಚ ಸುದೀಪ್ ಅವ್ರು ಹೇಳಿದಂತೆಯೇ ತನ್ನ ಕಷ್ಟ ಕಾಲದಲ್ಲಿ ಬೊಮ್ಮಾಯೊ ಅವರು ನನ್ನ ಬೆನ್ನಿಗೆ ನಿಂತು ಕೈಹಿಡಿದ್ದರು..ಆಗಾಗಿ ಈಗ ಅವ್ರ ಸಹಾಯಕ್ಕೆ ನಾನು ನಿಂತಿದ್ದೇನೆ ಎಂದಿದ್ದಾರೆ…
ಹಾಗಾದ್ರೆ ಸಿಎಂ ಬೊಮ್ಮಾಯಿ ಅವರು ಕಿಚ್ಚನಿಗೆ ಮಾಡಿದ ಸಹಾಯವೇನು ? ನಾವ್ ಹೇಳ್ತಿವಿ ಕೇಳಿ… ಕಿಚ್ಚ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗಲೂ ಬೊಮ್ಮಾಯಿ ಅವ್ರ ಸಹಾಯ ದೊಡ್ಡದಿದೆ…ಅಂದು ಬೊಮ್ಮಾಯಿ ಮನಸ್ಸು ಮಾಡಿರಲಿಲ್ಲ ಅಂದಿದ್ರೆ ಕಿಚ್ಚನ ಮೊದಲ ಸಿನಿಮಾ ಸ್ಪರ್ಶ ಪ್ರೇಕ್ಷಕರ ಮುಂದೆ ಬರುತ್ತಿರಲಿಲ್ಲ…ಥಿಯೇಟರ್ ಅಂಗಳಕ್ಕೆ ಕಾಲಿಡುತ್ತಿರಲಿಲ್ಲ…
ಹೌದು ಕಿಚ್ಚನ ಮೊದಲ ಸಿನಿಮಾ ಸ್ಪರ್ಶ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿ ಆಗಿತ್ತು…ಚಿತ್ರ ರಿಲೀಸ್ ಮಾಡೋಕೆ ಹಣ ಇರೋದಿಲ್ಲ ..ಆ ಸಂದರ್ಭದಲ್ಲಿ ರಿಲೀಸ್ ಗಾಗಿ ಬೇಕಿರೋ ಹಣವನ್ನ ಬೊಮ್ಮಾಯಿ ಅವರು ನೀಡುತ್ತಾರೆ..ಅದರ ಸಹಾಯದಿಂದ ಸ್ಪರ್ಶ ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಗುತ್ತೆ…ಹಣ ನೀಡಿದ ನಂತ್ರ ಬೊಮ್ಮಾಯಿ ಅವರು ಒಂದು ಷರತ್ತನ್ನು ಹಾಕುತ್ತಾರೆ ಸಿನಿಮಾದಲ್ಲಿ ಎಲ್ಲಿಯೂ ನನ್ನ ಹೆಸರನ್ನ ಬಳಸಬೇಡಿ ಎಂದು …ಇದು ಅವ್ರ ತಂದೆಯ ನಿಲುವು ಕೂಡ ಆಗಿರುತ್ತದೆ., ಹಾಗಾಗಿ ತನ್ನ ಮೊದಲ ಸಿನಿಮಾ ರಿಲೀಸ್ ಗೆ ಸಹಾಯ ಮಾಡಿದನ್ನ ಇಂದಿಗೂ ನೆನಪಿನಲ್ಲಿಟ್ಟುಕೊಂಡು ತನ್ನ ಮಾಮನ ಪರವಾಗಿ ಪ್ರಚಾರ ಮಾಡಲು ಸಿದ್ದರಾಗಿದ್ದಾರೆ ಕಿಚ್ಚ ಸುದೀಪ್ ….