ಕಾಂತಾರ ಸಿನಿಮಾ ಹಿಟ್ ಆಗಿದ್ದೆ ತಡ, ಆದರ ಬಗ್ಗೆ ಸಾಕಷ್ಟು ಕಥೆಗಳು ಇಂಟ್ರಸ್ಟಿಂಗ್ ವಿಷಯಗಳು, ಆಗಾಗ ಹೊರಗೆ ಬರೋಕೆ ಶುರುವಾದವು. ಸಿನಿಮಾ ನೋಡಿದ ಮಂದಿ ಅದನ್ನ, ಆ ಸನ್ನಿವೇಷವನ್ನ, ಆ ಸ್ಥಳವನ್ನ, ತಾವು ಕೇಳೊ ಕಥೆ ಜೊತೆ ಊಹಿಸಿಕೊಳ್ಳಲು ಶುರುಮಾಡಿದರು. ಹೀಗೆ ನಿಮಗೆ ಗೊತ್ತಿಲ್ಲದ ಮತ್ತೊಂದು ವಿಷಯವನ್ನ, ನಾವು ಅಲ್ಲಿ ಸ್ವತಃ ಹೋಗಿ ಸಂದರ್ಶನ ಮಾಡಿದಾಗ, ನಿರ್ದೇಶಕ ರಿಷಭ್ ಶೆಟ್ಟಿ ಅಣ್ಣ ಪ್ರವೀಣ್ ಶೆಟ್ಟಿ ಒಂದು ಇಂಟರೆಸ್ಟಿಂಗ್ ವಿಷಯ ಹೇಳಿದ್ರು.. ಸಿನಿಮಾ ಆರಂಭದ ದಿನಗಳಲ್ಲಿ ಸೆಟ್ಟಿನ ಕೆಲಸ ನಡೆಯುತ್ತ ಇತ್ತು, ಅಲ್ಲಿಗೆ ಬಂದಿದ್ದ ಬೇರೆ ಊರಿನ ಕೆಲಸದವರು ಎಲ್ಲೆಂದರಲ್ಲಿ, ಅವರಿಗೆ ಅರಿವಿಲ್ಲದೆ ಸ್ಥಳವನ್ನ ಮಲೀನ ಮಾಡುತ್ತಿದ್ದರು. ಇದನ್ನ ಗಮನಿಸುತ್ತಿದ್ದ ಸುತ್ತಮುತ್ತಲಿನ ಜನ ಆ ಸ್ಥಳದ ಬಗ್ಗೆ ಹೇಳಿದರು. ಅವರು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಇದೆ ಸಂದರ್ಭಕ್ಕೆ ಸರಿದೂಗುವಂತೆ ಅಲ್ಲಿನ ದೈವಗಳು, ಮೊದಲಿಗೆ ನಾಗ ದೇವರ ರೂಪದಲ್ಲಿ ಬಂದು ಅವರಿಗೆ ಎಚ್ಚರಿಕೆ ನೀಡಿ ಹೋಯಿತು.
ಅದಾದ ಕೆಲ ದಿನಗಳ ಬಳಿಕ ಜನ ಯಾತವತ್ತಾಗಿ ಮತ್ತೆ ತಮ್ಮ ಚಾಳಿಯನ್ನ ಶುರುಮಾಡಿದರು. ಜಾಗವನ್ನ ಮಲೀನ ಮಾಡಿದರು, ಇದರಿಂದ ಕೋಪಗೊಂಡ ಅಲ್ಲಿನ ದೈವಗಳು ಮಳೆಯ ರೂಪದಲ್ಲಿ ಬಂದು, ಶೂಟಿಂಗ್ ಸೆಟ್ಟು ಕೊಚ್ಚಿಹೋಗುವಂತೆ ಮಾಡಿದರು. ಒಂದು ಹಂತದಲ್ಲಿ ಸಿನಿಮಾ ನಿಂತೇ ಹೋಗುತ್ತದೆ ಅನ್ನುವ ಹಾಗೆ ಆಯಿತು. ಆದರೆ ಇದನ್ನ ಗಮನಿಸಿದ ನಿರ್ದೇಶಕ ರಿಷಭ್ ಶೆಟ್ಟಿ, ದೈವಗಳ ಮೊರೆ ಹೋದರ. ಆಗ ದೈವಕೊಟ್ಟ ಹೇಳಿಕೆ ಕೇಳಿ ಅಲ್ಲಿ ನೆರೆದವರೆಲ್ಲ ದಂಗಾದರು. ನಿಮ್ಮ ಚಿತ್ರತಂಡ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಿದ್ದಾರೆ, ನಾನು ರಾತ್ರಿ ಸಂಚಾರ ಹೋಗುವ ಮಾರ್ಗವನ್ನ ಅಡ್ಡಗಟ್ಟಿದ್ದಾರೆ. ಅದನ್ನ ಮೊದಲು ತೆರವು ಮಾಡಿ ಹಾಗೆ ನಾನು ಸಂಚಾರ ಮಾಡುವ ಜಾಗವನ್ನ ಮಲೀನ ಮಾಡದೆ ಸುಚಿತ್ವ ಕಾಪಾಡಿ. ಎಂದು ಹೇಳಿದನ್ನ ಪಾಲಿಸಲು ನಿಂತರು ರಿಷಭ್ ಶೆಟ್ಟಿ. ಇಡೀ ಸಿನಿಮಾ ಮುಗಿಯುವ ತನಕ ಆ ಜಾಗದಲ್ಲಿ ಎಂದೂ ಮಾಂಸಹಾರ, ರಾತ್ರಿ ನಂತರ ಸಂಚಾರ ಮಾಡುವುದನ್ನ ನಿಲ್ಲಿಸಿಬಿಟ್ಟರು. ಅದಾದ ಮೇಲೆ ನಡೆದದೆಲ್ಲ ಇತಿಹಾಸ. ಕರಾವಳಿಯ ದೈವಗಳು ನಂಬಿದವರ ಪಾಲಿಗೆ ಇಂಬುಕೊಡುತ್ತದೆ ಅನ್ನೋದನ್ನ ಮತ್ತೆ ಸಾಬೀತು ಮಾಡಿದವು.
ಅವಿನಾಶ್ ಮಲ್ನಾಡ್