ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು. ಮೂರು ವರ್ಷದ ನಂತರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ದರ್ಶನ್ ಅವರ ಬರ್ತಡೆ ಸೆಲೆಬ್ರೇಶನ್ ಜೋರಾಗಿಯೇ ಇತ್ತು.. ಬೆಳಗ್ಗೆ ನಿಂದ ಸಂಜೆವರೆಗೂ ಅಭಿಮಾನಿಗಳ ಜೊತೆ ಮನೆಯ ಬಳಿ ದರ್ಶನ್ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರೆ… ಸಂಜೆಯ ನಂತರ ತನ್ನ ಆಪ್ತರ ಜೊತೆ ಬರ್ತಡೆ ಸೆಲೆಬ್ರೇಟ್ ಮಾಡಿದ್ದರು. ಯಶವಂತಪುರ ಬಳಿ ಇರುವ ಜಟ್ ಲ್ಯಾಗ್ ಹೋಟೆಲ್ ನಲ್ಲಿ ದರ್ಶನ್ ಆಪ್ತರು ಅವರಿಗಾಗಿ ಬರ್ತಡೆ ಪಾರ್ಟಿಯನ್ನು ಯೋಜನೆ ಮಾಡಿದ್ದರು…. ಈ ಬರ್ತಡೇ ಪಾರ್ಟಿಯಲ್ಲಿ ಸಾಕಷ್ಟು ಕಲಾವಿದರು ಕೂಡ ಭಾಗಿಯಾದರು ಅದರಲ್ಲಿ ಪ್ರಮುಖವಾಗಿ ನಟಿ ಮೇಘಾ ಶೆಟ್ಟಿ ಸೋನಾಲ್ ಮೆಂಟಾರೋ, ನಟಿ ಪವಿತ್ರ ಗೌಡ ಇನ್ನೂ ಅನೇಕರು ಸೇರಿ ಪಾರ್ಟಿಯನ್ನು ಅರೇಂಜ್ ಮಾಡಿದ್ದರು…. ಈ ಪಾರ್ಟಿಯ ವಿಡಿಯೋವನ್ನು ನಟಿ ಮೇಘಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು….
ಈ ವಿಡಿಯೋವನ್ನು ಕಂಡಂತಹ ದರ್ಶನ್ ಪತ್ನಿ ವಿಜಯ್ ಲಕ್ಷ್ಮಿ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಗ್ಗೆ ಪೋಸ್ಟನ್ನು ಹಾಕಿದ್ದರು… ನನ್ನ ಕುಟುಂಬಕ್ಕೆ ಹಾನಿ ಉಂಟು ಮಾಡುವಂತಹ ವಿಡಿಯೋ ಮತ್ತು ಚಿತ್ರಣಗಳನ್ನ ಪೋಸ್ಟ್ ಮಾಡುವಾಗ ನೀವು ಎರಡು ಬಾರಿ ಯೋಚನೆ ಮಾಡಬೇಕು…. ಏಕೆಂದರೆ ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವುಂಟು ಮಾಡುತ್ತದೆ… ನಿಮ್ಮ ಕೃತ್ಯ ನಿಮ್ಮ ನೈತಿಕತೆಯನ್ನು ತೋರುತ್ತದೆ..ನಾನು ಮೌನವಾಗಿದ್ದೇನೆ ಎಂದರೆ ನಾನು ನಾನ್ ಸೆನ್ಸ್ ಅನ್ನು ತಡೆದುಕೊಳ್ಳುತ್ತೇನೆ ಎಂದು ಅರ್ಥವಲ್ಲ ಎಂದು ಬರೆದುಕೊಂಡಿದ್ದರು… ಮೇಘಾ ಶೆಟ್ಟಿ ಅವರಿಗೆ ಈ ಪೋಸ್ಟನ್ನು ಕೂಡ ಟ್ಯಾಗ್ ಮಾಡಿದ್ದರು ಆ ಪೋಸ್ಟ್ ನೋಡಿದ ಕೂಡಲೇ ಮೇಘಾ ಶೆಟ್ಟಿ ವಿಡಿಯೋ ಡಿಲೀಟ್ ಮಾಡಿದ್ದರು…
ಸ್ಟೇಟಸ್ ಸಮರ ಅಷ್ಟಕ್ಕೆ ಮುಗಿಯಲಿಲ್ಲ ವಿಜಯಲಕ್ಷ್ಮಿ ನಂತರ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸ್ಟೇಟಸ್ ಹಾಕುವ ಮೂಲಕ ಸತ್ಯದ ಬಗ್ಗೆ ಮಾತನಾಡಿದ್ದಾರೆ…ಸತ್ಯ ಸಿಂಹ ಇದ್ದ ಹಾಗೆ ಯಾರು ರಕ್ಷಿಸಬೇಕಾಗಿಲ್ಲ ಅದನ್ನು ಸೋಲಲು ಬಿಡಿ ಅದನ್ನು ಅದೇ ರಕ್ಷಿಸಿಕೊಳ್ಳಲಿದೆ ಎಂದು ಬರೆದಿರುವ ಸಾಲನ್ನು ತಮ್ಮ instagram ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ… ಈ ಮೂಲಕ ಸತ್ಯ ಯಾವತ್ತಿಗೂ ಸೋಲುವುದಿಲ್ಲ ಎಂಬುದನ್ನು ಹೇಳಿದ್ದಾರೆ… ಆದರೆ ಈ ಮಾತುಗಳನ್ನ ಹಾಗೂ ಈ ಸ್ಟೇಟಸ್ ಸಮರವನ್ನು ಯಾರ ಮೇಲೆ ಸಾರುತಿದ್ದಾರೆ ವಿಜಯಲಕ್ಷ್ಮಿ ದರ್ಶನ್ ಎನ್ನುವುದು ಕುತೂಹಲ ಉಂಟುಮಾಡಿದೆ….