ಟಿವಿ9 ಲೈಫ್ ಸ್ಟೈಲ್ ಎಕ್ಸ್‌ಪೋ ಗೆ ಗಾಯಕ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಟಿ ಸೋನಾಲ್ ಚಾಲನೆ ಕೊಟ್ಟಿದ್ದಾರೆ.. ಒಂದೇ ಸೂರಿನಡಿಯಲ್ಲಿ ಎಲ್ಲಾ ರೀತಿ ಉತ್ಪನ್ನಗಳನ್ನ ಪಡೆಯುವ ಅವಕAಶವನ್ನ ಗ್ರಾಹಕರಿಗೆ ಟಿವಿ9 ಸಂಸ್ಥೆ ಮಾಡಿಕೊಟ್ಟಿದೆ….

ಚಂದನ್ ಶೆಟ್ಟಿ ಹಾಗೂ ಸೋನಾಲ್ ಅವ್ರಿಗೆ ಗಿರಿಯಾಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಶ್ರೀ ನವೀನ್ ಗಿರಿಯಾ ಸಾಥ್ ಕೊಟ್ಟರು….ಇನ್ನು ಉದ್ಘಾಟನೆ ನಂತ್ರ ಮಾತನಾಡಿದ ಚಂದನ್ ..ಈ ಕಾರ್ಯಕ್ರಮವು ಎಲ್ಲಾ ಉತ್ಪನ್ನಗಳಿಗೆ ಉತ್ತಮ ಸ್ಥಳವಾಗಿದೆ ಎಂದು ಚಂದನ್ ಶೆಟ್ಟಿ ಹೇಳಿದರು ಈ ರೀತಿಯಲ್ಲಿ ಒಂದೇ ಕಡೆ ಅಗತ್ಯವಿರೋ ವಸ್ತುಗಳೆಲ್ಲಾ ಸಿಗುವುದರಿಂದ ಸಮಯ ಮತ್ತು ಇಂಧನವನ್ನು ಉಳಿಸುತ್ತೇವೆ ಎಂದರು…
ಇಂದಿನಿಂದ ಮೂರು ದಿನಗಳ ಕಾಲ ಈ ಎಕ್ಸ್‌ಪೋ ನಡೆಯಲಿದೆ …ವೀಕೆಂಡ್ ನಲ್ಲಿ ಮನೆಗೆ ಶಾಪಿಂಗ್ ಮಾಡೋ ಪ್ಲಾನ್ ಇದ್ರೆ ನೀವು ಕೂಡ ಭೇಟಿ ಮಾಡಬಹುದು …ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೂ ಎಕ್ಸ್‌ಪೋಗೆ ಭೇಟಿ ಕೊಡಬಹುದು….