ಚಿಲಕ ಟೈಟ್‌ ಇದೆ, ಬಾಗಿಲು ತೆರಿ ಮೇರಿ ಜಾನ್‌.. ಅಂತಿದ್ದಾರೆ ಜಗ್ಗೇಶ್‌

ನವರಸ ನಾಯಕ ಜಗ್ಗೇಶ್‌, ಅದಿತಿ ಪ್ರಭೂದೇವಾ ಲೀಡ್‌ ನಲ್ಲಿ ನಟಿಸಿರುವ ʻತೋತಾಪುರಿʼ ಸಿನಿಮಾ ಮೊದಲ ಸಾಂಗ್‌ ಫೈನಲಿ ರಿಲೀಸ್‌ ಆಗಿದೆ. ಜಸ್ಟ್‌ ಕೆಲವು ದಿನಗಳ ಹಿಂದೆ ರಿಲೀಸ್‌ ಆಗಿದೆ ಹಿಂದಿ ಸಾಲುಗಳ ಟೀಸರ್‌ ನೋಡಿ ಪಡ್ಡೆಗಳು ಮಜಾ ಮಾಡಿ, ಬರೀ ಹಿಂದಿನೇ ಇದೆ ಅಂಥ ಕೆಲವ್ರು ಕೊಂಕು ಮಾಡಿ, ಸಾಂಗ್‌ ಗೆ ಕಾಯ್ತಾ ಇದ್ರು. ಈಗ ಫೈನಲಿ ಸಾಂಗ್‌ ರಿಲೀಸ್‌ ಆಗಿದೆ. ʻಬಾಗಿಲು ತೆರಿ ಮೇರಿ ಜಾನ್‌…,ʼ ಅಂತ ಹುಡುಕಿದ್ರು, ಹುಡುಕ್ದೇಇದ್ರೂ ಚೂರು ಇನ್ನೊಂದು ಮೀನಿಂಗ್‌ ಬರೋ ಲಿರಿಕ್ಸ್‌ನ ನಿರ್ದೇಶಕ ವಿಜಯ್‌ ಪ್ರಸಾದ್‌ ಬರೆದಿದ್ದಾರೆ. ಅನೂಪ್‌ ಸೀಳಿನ್‌ ಪೆಪ್ಪಿಯಾಗಿ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.

YouTube player

ವ್ಯಾಸರಾಜ್‌ ಸೋಸಲೆ, ಅನನ್ಯ ಭಟ್‌ ಹಾಗೂ ಸುಪ್ರಿಯಾ ರಾಮ್‌ ಹಾಡಿರೋ ಕ್ಯಾಚಿ ಲಿರಿಕ್ಸ್‌ ನ ಹಿಂ-ಕನ್ನಡ(ಹಿಂದಿ ಮಿಕ್ಸ್‌ ಆಗಿರೋ ಕನ್ನಡ) ಸಾಂಗ್‌ ಮಜಾ ಕೊಡ್ತಿದೆ. ವಿಜಯ್‌ ಪ್ರಸಾದ್‌ ಸಿನಿಮಾದ ಅಭಿಮಾನಿಗಳು ಹಾಡಿನಲ್ಲಿ ಇಷ್ಟಾದ್ರು ಪೋಲಿ ಲಿರಿಕ್ಸ್‌ ಇರುತ್ತೆ ಅಂತ ನಿರೀಕ್ಷೆ ಮಾಡಿದ್ರು, ನಿರೀಕ್ಷೆಗೆ ತಕ್ಕಂತೆ ಹಾಡಿನ ಲಿರಿಕ್ಸ್‌ ಸ್ವಲ್ಪ ಪೋಲಿತನ, ಸ್ವಲ್ಪ ರೊಮ್ಯಾನ್ಸ್‌, ಇನ್ನೂ ಸ್ವಲ್ಪ ವೇದಂತ ಮಿಕ್ಸ್‌ ಮಾಡಿದ್ದಾರೆ. ಹಾಡಿನ ಥರಾವೇ ಪಕ್ಕಾ ಎಂಟರ್‌ಟೈನ್‌ಮೆಂಟ್‌ ನೀಡೋ ಸಿನಿಮಾ ತೋತಾಪುರಿ ಚಾಪ್ಟರ್‌-1 ಇಷ್ಟರಲ್ಲೇ ರಿಲೀಸ್‌ ಆಗಲಿದೆ.

Exit mobile version