ದಿಯಾ..ಕಿಯಾ..ತೊತಾಪುರಿ ಡಬಲ್‌ ಮೀನಿಂಗ್‌ ವೀಡಿಯೋ ಸಾಂಗ್‌ ಜ.31ಕ್ಕೆ

ಕಾಮಿಡಿ ಸಂಭಾಷಣೆಗಳ ಮೂಲಕ, ಕನ್ನಡಿಗರ ವಿಶೇಷ ಅಭಿಮಾನಿ ಬಳಗ ಹೊಂದಿರೋ ನೀರ್‌ ದೋಸೆ ನಿರ್ದೇಶಕ ವಿಜಯ್‌ ಪ್ರಸಾದ್‌ ನಿರ್ದೇಶನದ, ನವರಸ ನಾಯಕ ಜಗ್ಗೇಶ್‌ ಅಭಿನಯದ ತೋತಾಪುರಿ ಸಿನಿಮಾದ ಹಾಡಿನ ಟೀಸರ್‌ ಮೊನ್ನೆಯಷ್ಟೆ ರಿಲೀಸ್‌ ಆಗಿ ಟ್ರೆಂಡ್‌ ಆಗಿದೆ. ಈ ಹಾಡು ಇದೇ ಸೋಮವಾರ ರಂದು ರಿಲೀಸ್‌ ಆಗ್ತಾ ಇದೆ. ಜಗ್ಗೇಶ್‌ ಅವರ ಜೊತೆಗೆ ಅದಿತಿ ಪ್ರಭುದೇವಾ ಲೀಡ್‌ನಲ್ಲಿ ಕಾಣಿಸಿಕೊಳ್ತಾ ಇರೋ ಸಿನಿಮಾದ ಹಾಡುಗಳಿಗೆ ಅನೂಪ್‌ ಸೀಳಿನ್‌ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.

ಕೆ.ಎ ಸುರೇಶ್‌ ನಿರ್ಮಾಣದ ಸಿನಿಮಾ ಚಾಪ್ಟರ್‌-1&2 ಆಗಿ ತೆರೆಗ ಬರಲಿದೆ.ಸದ್ಯ ಚಾಪ್ಟರ್‌-1 ರಿಲೀಸ್‌ಗೆ ರೆಡಿಯಾಗಿದ್ದು, ಡಾಲಿ ಧನಂಜಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋ ಸಿನಿಮಾದ ಸ್ಟಾರ್‌ ಕಾಸ್ಟ್‌ ಕೂಡ ದೊಡ್ಡದಾಗೇ ಇದೆ. ಸಾಂಗ್‌ ಟೀಸರ್‌ಗೆ ನೈವೇದ್ಯ ಅಂದಿರೋ ನಿರ್ದೇಶಕರು ಪ್ರಸಾದ ದಂತಿರೋ ಸಾಂಗ್‌ ಅನ್ನು ಸೋಮವಾರ ರಿಲೀಸ್‌ ಮಾಡ್ತಿದ್ದಾರೆ. ಟೀಸರ್‌ನಲ್ಲೇ ಚಮಕ್‌ ಕೊಟ್ಟಿದ್ದ ಟೀಮ್‌, ಸಾಂಗ್‌ನಲ್ಲಿ ಇನ್ನೆಷ್ಟು ಚಮಕ್‌ ಕೊಡ್ತಾರೋ, ಸಿನಿಮಾದಲ್ಲಿ ಎಷ್ಟು ಮಜಾ ಕೊಡ್ತಾರೋ ಕಾದು ನೋಡ್ಬೇಕು.

Exit mobile version