ಮೋಹಕತಾರೆ ರಮ್ಯಾ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡುವ ಸಲುವಾಗಿ ತಮ್ಮದೇ ಹೋಮ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ನಿರ್ಧಾರ ಮಾಡಿದ್ರು, ಈ ಸಿನಿಮಾದ ನಿರ್ಮಾಣಕ್ಕಾಗಿ ತಮ್ಮದೇ ಹೋಮ್ ಬ್ಯಾನರ್ ಒಂದನ್ನ ಸೃಷ್ಟಿ ಮಾಡಿದ್ರು, ಅದುವೆ ಆಪಲ್ ಬಾಕ್ಸ್ ಪ್ರೊಡಕ್ಷನ್. ಈ ಸಂಸ್ಥೆ ಮೂಲಕ ಸ್ವಾತಿ ಮುತ್ತಿನ ಮಳೆ ಹನಿಯೇ ಅನ್ನೋ ಸಿನಿಮಾ ಅನೌನ್ಸ್ ಮಾಡಿದ್ರು. ತಮ್ಮ ಹೋಮ್ ಬ್ಯಾನರ್‌ನ ಚೊಚ್ಚಲ ಸಿನಿಮಾಕ್ಕೆ ತಾವೇ ಹೀರೋಯಿನ್, ರಾಜ್ ಬಿಶೆಟ್ಟಿ ಅವ್ರೇ ನಿರ್ದೇಶಕ ಕಮ್ ಹೀರೋ ಅಂತಲೂ ಅನೌನ್ಸ್ ಮಾಡಿದ್ರು.
ಕಾಲಕಳೆದಂತೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ತಾವು ನಟಿಸೋದಿಲ್ಲ, ತಮ್ಮ ಬದಲು ಆರ್‌ಜೆ ಸಿರಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಇನ್ನೊಂದು ಸರ್‌ಪ್ರೈಸ್ ಸುದ್ದಿ ಕೊಟ್ಟರು. ಕಳೆದ ತಿಂಗಳು ದಸರಾ ಹಬ್ಬದ ಸಂಭ್ರಮದಲ್ಲಿ ಅನೌನ್ಸ್ ಆದ ಸಿನಿಮಾದ ಶೂಟಿಂಗ್ ಈಗ ಕಂಪ್ಲೀಟ್ ಆಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡ್ತಾ ಇರೋ ಶೆಟ್ಟಿ ಗ್ಯಾಂಗ್‌ನ ರಾಜ್ ಬಿ ಶೆಟ್ಟಿ ಮತ್ತೊಂದು ರೊಮ್ಯಾಂಟಿಕ್ ಕಥೆಯನ್ನ ಹೇಳೋಕೆ ಶುರು ಮಾಡಿದ್ದು, ಈಗ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸಿನಿಮಾದ ಇನ್ನಷ್ಟು ಅಪ್‌ಡೇಟ್ಸ್ ಹೊರಬೀಳಬೇಕಿದೆ.