ನಟ ಕಿಚ್ಚ ಸುದೀಪ್ ಇತ್ತೀಚಿಗಷ್ಟೇ ಸಿಎಂ ಬೊಮ್ಮಾಯಿ ಅವರ ಪರವಾಗಿ ಬಿಜೆಪಿ ಪಕ್ಷಕ್ಕೆ ಪ್ರಚಾರ ಮಾಡುವದಾಗಿ ಮಾಧ್ಯಮದ ಮುಂದೆ ಬಂದು ಹೇಳಿಕೊಂಡಿದ್ದರು.. ಬೊಮ್ಮಾಯಿ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಕೂಡ ಭಾಗಿಯಾಗಿದ್ದರು…
ಬಿಜೆಪಿ ಪಕ್ಷ ಕೂಡ ಕಿಚ್ಚ ಸುದೀಪ್ ಅವರು ಈ ಬಾರಿ ನಮಗೆ ಸ್ಟಾರ್ ಪ್ರಚಾರಕರಾಗಿರುತ್ತಾರೆ ಎಂದು ಘೋಷಣೆ ಮಾಡಿದ್ದರು…

ಇಂದಿನಿಂದನಿಂದ ಕಿಚ್ಚ ಸುದೀಪ್ ಬೊಮ್ಮಾಯಿ ಪರವಾಗಿ ಶಿಗ್ಗಾವಿಯಲ್ಲಿ ಪ್ರಚಾರ ಆರಂಭ ಮಾಡಿದ್ದಾರೆ.. ಬಿಜೆಪಿ ಪಕ್ಷ ಈ ಬಾರಿ ನಮ್ಮ ಪಕ್ಷದ ಪರವಾಗಿ ಯಾರೆಲ್ಲಾ ಪ್ರಚಾರ ಮಾಡಲಿದ್ದಾರೆ ಅನ್ನೋ ಒಂದು ಲಿಸ್ಟ್ ಕೂಡ ಬಿಡುಗಡೆ ಮಾಡಿದೆ…
ಅದರಲ್ಲಿ ರಾಜ್ಯ ನಾಯಕರು ಕೇಂದ್ರ ನಾಯಕನ ಜೊತೆಗೆ ಒಂದಷ್ಟು ಸಿನಿಮ ಕಲಾವಿದರು ರಾಜಕೀಯದಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವವರ ಹೆಸರು ಕೂಡ ಘೋಷಣೆ ಮಾಡಿದೆ…ಆದರೆ ವಿಪರ್ಯಾಸ ಅಂದರೆ ಕಿಚ್ಚ ಸುದೀಪ್ ಅವರ ಹೆಸರೇ ಪಟ್ಟಿಯಲ್ಲಿಲ್ಲ.. ಈ ವಿಚಾರನ ಕಂಡ ಸುದೀಪ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ …ಅದಷ್ಟೇ ಅಲ್ಲದೆ ಒಂದಷ್ಟು ಜನರು ಈ ರೀತಿಯ ಮರ್ಯಾದೆ ಕಿಚ್ಚ ಅವರಿಗೆ ಬೇಕಿತ್ತಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ..