ಕ್ರಿಕೆಟ್‌ ಆಯ್ತು, ಇನ್ನೂ ಬ್ಯಾಡಿಂಟನ್‌ ಕಿಚ್ಚು ಹೊತ್ತಿಸ್ತಾರಾ ಕಿಚ್ಚ..?

ಕಿಚ್ಚ ಸುದೀಪ್ ಒಬ್ಬ ಉತ್ತಮ ಕ್ರಿಕೆಟರ್ ಅಂತ ಗೊತ್ತಿತ್ತು, ಆದರೆ ಉತ್ತಮ ಬ್ಯಾಡ್ಮಿಂಟನ್ ಆಟಗಾರ ಕೂಡ ಅನ್ನೋದು ತಿಳಿದಿತ್ತಾ??? ಹೌದು, ಪೈಲ್ವಾನ್ ಸಿನಿಮಾ ಬಳಿಕ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾ ಇದ್ದಾರೆ. ಜಿಮ್, ವರ್ಕೌಟ್ ಜೊತೆಗೆ ಫಿಟ್ನೆಸ್ ಗಾಗಿ ಈಗ ಬ್ಯಾಡ್ಮಿಂಟನ್ ಕೂಡ ಆಡ್ತಾ ಇದ್ದಾರೆ ಕಿಚ್ಚ. ಇತ್ತೀಚೆಗೆ ಜೆಪಿ ನಗರದ ಹೆಸರಾಂತ ಫೆಟಲ್ ಕ್ಲಬ್ ನಲ್ಲಿ ಸುದೀಪ್‌ ತಮ್ಮ ಮುಂದಿನ ಸಿನಿಮಾ ಫ್ಯಾಂಟಮ್‌ ನಿರ್ದೇಶಕ ಅನೂಪ್ ಭಂಡಾರಿ, ನಟ ಸಂಚಾರಿ ವಿಜಯ್‌ ಸೇರಿದಂತೆ ತಮ್ಮ ಗೆಳೆಯರ ಬಳಗದ ಜೊತೆ ಸೇರಿ, ಬ್ಯಾಡ್ಮಿಂಟನ್‌ ಆಡಿದ್ದಾರೆ.

ಕಿಚ್ಚ ಕ್ರಿಕೆಟ್‌ ಆಡ್ತಾ ಆಡ್ತಾನೇ ತಮ್ಮ ಅಭಿಮಾನಿಗಳಿಗೆ, ಕನ್ನಡ ಮಾತ್ರವಲ್ಲದೇ ಇತರೆ ಭಾಷೆಯ ಸಿನಿಮಾ ಕಲಾವಿದರಿಗೆ ತುಂಬಾನೇ ಹತ್ತಿರವಾಗಿದ್ರು, ಸೆಲೆಬ್ರಿಟಿಗಳನ್ನ ಮೈದಾನಕ್ಕಿಳಿಸಿ, ಕ್ರಿಕೆಟ್‌ ರಂಗೇರಿಸಿದ್ರು, ಈಗ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ತಮ್ಮ ಕೈಚಳಕ ತೋರಿಸ್ತಾ ಇರೋ ಇರೋ ಪೈಲ್ವಾನ್‌, ಮುಂದಿನ ದಿನಗಳಲ್ಲಿ ಬ್ಯಾಡ್ಮಿಂಟನ್‌ ಅನ್ನೂ ಸೆಲೆಬ್ರಟಿಗಳ ಕೈಯಲ್ಲಿ ಆಡಿಸಿ, ಮತ್ತೊಂದು ಹೊಸ ಭಾಷ್ಯ ಬರೆದರೂ ಅಚ್ಚರಿ ಇಲ್ಲ, ಸ್ನೇಹ ಜೀವಿ ಸುದೀಪ್‌ಗೆ ಜನರನ್ನ, ಅಭಿಮಾನಿಗಳನ್ನ ಸಂಪಾದಿಸಲು ಮಾರ್ಗಗಗಳು ಅನೇಕ, ಆ ದಾರಿಯಲ್ಲಿ ಬ್ಯಾಡ್ಮಿಂಟನ್‌ ಕೂಡ ಒಂದಾಗಬಹುದು, ಏನಂತೀರಾ?

Exit mobile version