ಪಿಚ್ಚರ್ EXCLUSIVE

ಬಿಜೆಪಿ ಪ್ರಚಾರಕ್ಕೆ ಕಿಚ್ಚ ಸುದೀಪ್‌ ಬ್ರೇಕ್‌?

ಬಿಜೆಪಿ ಪ್ರಚಾರಕ್ಕೆ ಕಿಚ್ಚ ಸುದೀಪ್‌ ಬ್ರೇಕ್‌?
  • PublishedApril 29, 2023

ಮಾತಿಗೆ ಸದಾ ಬದ್ಧರಾಗಿರುವ ಕಿಚ್ಚ ಸುದೀಪ ದಿಢೀರನೇ ಪ್ರಚಾರ ನಿಲ್ಲಿಸಿದ್ದೇಕೆ..?
ಸುದೀಪ್ ಮನಸ್ಸಿಗೆ ನೋವು ಮಾಡಿದ್ದೂ ಯಾರು?


ಒಂದು ದಿನಕ್ಕೆ ಅರರು ಕ್ಷೇತ್ರಗಳಲ್ಲಿ ಬಿಡುಲ್ಲದೇ ಪ್ರಚಾರ ಮಾಡುತ್ತಿದ್ದ ಕಿಚ್ಚ ಸುದೀಪ್ ಅಚಾನಕ್ ಪ್ರಚಾರ ನಿಲ್ಲಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದೀಕೆ?


ನಾನು ಬೊಮ್ಮಾಯಿ ಮಾಮಾನಾ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದ ಸುದೀಪ್, ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ಸೀಮಿತವಾದರೂ. ಕಾಂಗ್ರೆಸ್ ನಲ್ಲಿ ಅಹ್ವಾನ ಇದ್ದರು ಅವ್ರಿಗೆ ಅಪಾರ ಸ್ನೇಹಿತ ಅಭಿಮಾನಿ ಅಭ್ಯರ್ಥಿಗಳ್ಳಿದ್ರು ಬಿಜೆಪಿ ಪರ ನಿಂತ ಸುದೀಪ, ಶಿಗ್ಗಾವಿ ಸೇರಿದಂತೆ ಓಟ್ಟು 18ಕ್ಷೇತ್ರ ಸುತ್ತಾಡಿ ಲಕ್ಷಾಂತರ ಅಭಿಮಾನಿಗಳ ನಡುವೆ ಹಗಲು ರಾತ್ರಿ ಚುನಾವಣಾ ಪ್ರಚಾರ ಮಾಡಿದ್ರು.


ಎಲ್ಲ ಕಡೆ ಬಿಜೆಪಿಪರ ಅಲೆ ಎದ್ದಿತು. ಆದ್ರೆ ಬಿಜೆಪಿ ಪಕ್ಷ ಎಡವಿದ್ದು ಎಲ್ಲಿ?ಯಾರು ನೋಯಿಸದರು ಕಿಚ್ಚನ ಮನಸ್ಸನ್ನು? ಖುದ್ದಾಗಿ ಕಾಂಗ್ರೆಸ್ ಅಭ್ಯರ್ಥಿಗಳೇ ನಮ್ಮ ಭಾಗಕ್ಕೆ ಬಿಜೆಪಿ ಪರ ಬರಬೇಡಿ ಎಂದು ಕೇಳಿದರು ಬೊಮ್ಮಾಯಿಗೆ ಕೊಟ್ಟ ಮಾತನ್ನು ತಪ್ಪದ ಕಿಚ್ಚ ಸುದೀಪ್, ನವಲಗುಂದ ಗದಗ್ ಗೆ ನಿನ್ನೆ ಹೋಗದೆ ಯಾಕೆ ವಾಪಾಸ್ಸಾದ್ರು?


ಇದೀಗ ಡಿ ಕೆ ಶಿವಕುಮಾರ್ ಯಾಕೆ ಸುದೀಪ್ ಕಾಂಗ್ರೇಸ್ ಪರ ಪ್ರಾಚಾರ ಮಾಡುತ್ತಾರೆಂದು ಹೇಳುತಿದ್ದಾರೆ. ಹಾಗಾದ್ರೆ ಕಿಚ್ಚ ಸುದೀಪ್‌ ಕಾಂಗ್ರೆಸ್‌ ಪರ ಪ್ರಚಾರ ಮಾಡ್ತಾರಾ? ಈಗ ಇದು ರಾಜ್ಯದಲ್ಲಿ ಸಿಕ್ಕಪಟ್ಟೆ ಚರ್ಚೆಯಾಗ್ತಿರೋ ಹಾಟ್‌ ಟಾಪಿಕ್‌


Written By
kiranbchandra

Leave a Reply

Your email address will not be published. Required fields are marked *