ಫ್ಯಾಂಟಮ್ ಕ್ಲೈಮ್ಯಾಕ್ಸ್ ಗಾಗಿ ಕಿಚ್ಚನ ಕಸರತ್ತು

ಪೈಲ್ವಾನ್ ಸಿನಿಮಾಕ್ಕಾಗಿ ಕಿಚ್ಚ ಸುದೀಪ್ ತಿಂಗಳುಗಳ ಕಾಲ ಕಸರತ್ತು ನಡೆಸಿ, ತಮ್ಮ ದೇಹವನ್ನ ಹುರಿಗೊಳಿಸಿ ಚಿತ್ರರಂಗವೇ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದ್ರು. ಪೈಲ್ವಾನ್ ನಲ್ಲಿನ ಕಿಚ್ಚನ ಲುಕ್ ನೋಡಿ ಎಷ್ಟೋ ಹುಡುಗರು ಜಿಮ್ ಕಡೆ ಮುಖ ಮಾಡಿದ್ರು. ಕಿಚ್ಚ ಅಂತದ್ದೊಂದು ಇನ್ಸ್ ಪಿರೇಷನ್ ಅಂದ್ರೆ ತಪ್ಪಲ್ಲ. ಸದ್ಯಕ್ಕೆ ‘ಫ್ಯಾಂಟಮ್‌’ ಸಿನಿಮಾ ಕೆಲಸಗಳಲ್ಲಿ ಸುದೀಪ್‌ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲೂ ಪೈಲ್ವಾನ್ ಮೀರಿಸೋವಂಥಾ ಮ್ಯಾಜಿಕ್ ತೋರಿಸಲು ರೆಡಿಯಾಗಿದ್ದಾರೆ.

‘ರಂಗಿತರಂಗ’ ಖ್ಯಾತಿಯ ಅನೂಪ್‌ ಭಂಡಾರಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಹೈದರಾಬಾದ್‌ನಲ್ಲಿ ಬಹುತೇಕ ದೃಶ್ಯಗಳ ಶೂಟಿಂಗ್‌ ನಡೆದಿದೆ. ಇನ್ನೇನು ಕೊನೇ ಹಂತದ ಚಿತ್ರೀಕರಣ ಬಾಕಿ ಇದೆ. ‘ಫ್ಯಾಂಟಮ್‌’ ಸಿನಿಮಾದಲ್ಲಿ ವಿಕ್ರಾಂತ್‌ ರೋಣ ಎಂಬ ಪಾತ್ರಕ್ಕೆ ಸುದೀಪ್‌ ಬಣ್ಣ ಹಚ್ಚಿದ್ದು, ಆ ಪಾತ್ರಕ್ಕಾಗಿಯೇ ಕಿಚ್ಚ ಜಬರ್ದಸ್ತಾಗಿ ರೆಡಿಯಾಗಿದ್ದಾರೆ. ಈಗಿನ ತಮ್ಮ ಲುಕ್ ರಿವೀಲ್ ಮಾಡೋ ಫೋಟೋ ಶೇರ್ ಮಾಡಿದ್ದಾರೆ.

‘ಒಳ್ಳೆಯ ಆಹಾರ, ಶಿಸ್ತಿನ ಜೀವನ ಎಂದಿಗೂ ಕೆಟ್ಟದ್ದಲ್ಲ. ಬಹಳ ದಿನಗಳ ನಂತರ ಮತ್ತೆ ವರ್ಕೌಟ್‌ ಶುರುಮಾಡಿದ್ದೇನೆ. ಫ್ಯಾಂಟಮ್‌ ಚಿತ್ರದ ಕ್ಲೈಮ್ಯಾಕ್ಸ್‌ಗೆ ಇದರ ಕ್ರೆಡಿಟ್‌ ಸಲ್ಲಬೇಕು. ಒಂದು ತಿಂಗಳ ಕಾಲ ಎಲ್ಲರೂ ಇದಕ್ಕಾಗಿ ಶ್ರಮಿಸಿದ್ದೇವೆ. ಡಿಸೆಂಬರ್‌ 4ರಿಂದ ಆರಂಭವಾಗುವ ಕೊನೇ ಹಂತದ ಚಿತ್ರೀಕರಣವನ್ನು ಎದುರುನೋಡುತ್ತಿದ್ದೇನೆ’ ಎಂದು ಈ ಫೋಟೋ ಸಮೇತ ಸುದೀಪ್‌ ತಮ್ಮ ಸೋಷಿಯಲ್ ಮಿಡಿಯಾ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.

Exit mobile version