ಶೋಕಿವಾಲಾ ಸಿನಿಮಾಕ್ಕಾಗಿ ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್‌ ಸಾಹಸ..!

ನಟ ಕೃಷ್ಣ ಅಜಯ್‌ ರಾವ್‌ ಅಭಿನಯದ ಸಿನಿಮಾಗಳು ಹಿಟ್‌ ಆಗೋದ್ರ ಹಿಂದಿನ ಕಾರಣಗಳಲ್ಲಿ ಪ್ರಮುಖವಾದದ್ದು, ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್‌ ಅವ್ರ ಹಾಡುಗಳು, ಶ್ರೀಧರ್‌ ಸಂಭ್ರಮ್‌ ಬಹುತೇಕ ಎಲ್ಲಾ ಅಜಯ್‌ ರಾವ್‌ ಸಿನಿಮಾಗಳಿಗೆ ಸಂಗಈತ ಸಂಯೋಜನೆ ಮಾಡಿದ್ದಾರೆ. ರಿಲೀಸ್‌ಗೆ ರೆಡಿಯಾಗಿರೋ ಅಜಯ್‌ ರಾವ್‌ ಅವ್ರ ಮುಂದಿನ ಸಿನಿಮಾ ಶೋಕಿವಾಲಕ್ಕೂ ಶ್ರೀಧರ್‌ ಹಾಡುಗಳನ್ನ ಮಾಡಿದ್ದಾರೆ. ಇದ್ರ ಮತ್ತೊಂದು ಸ್ಪೆಷಾಲಿಟಿ ಅಂದ್ರೆ ಮೊದಲ ಬಾರಿಗೆ ಈ ಸಿನಿಮಾಕ್ಕಾಗಿ ಹಾಡಿದ್ದಾರೆ ಶ್ರೀಧರ್.ವಿ.ಸಂಭ್ರಮ್.

ನಾಟಿ ಕೋಳಿ ನೀನು … ನಾಟಿ ಹುಂಜ ನೀನು.. ಅನ್ನೋ ಪಕ್ಕಾ ಟಪ್ಪಾಂಗುಚ್ಚಿ ಸಾಂಗ್‌ ಜೋಗಿ ಸುನಿತಾ ಅವ್ರ ಜೊತೆಗೆ ಧ್ವನಿ ಗೂಡಿಸಿದ್ದಾರೆ ಸಂಗೀತ ನಿರ್ದೇಶಕರು. ಈ ಹಾಡು ಇದೇ ಫೆ.3ರಂದು ಸಂಜೆ 05:04ಕ್ಕೆ ಕ್ರಿಸ್ಟಲ್ ಮ್ಯೂಸಿಕ್ ಚಾನಲ್ ನಲ್ಲಿ ರಿಲೀಸ್‌ ಆಗ್ತಾ ಇದೆ. ಈಗಾಗ್ಲೆ ಶೋಕಿವಾಲ ಸಿನಿಮಾದ ಮೊದಲನೇ ಲಿರಿಕಲ್ ವೀಡಿಯೋ ರಿಲೀಸ್ ಅಗಿ ಕೇಳುಗರ ಕಿವಿ ತಂಪು ಮಾಡಿ.. ಹಿಟ್ ಅಗಿತ್ತು… ಈಗ ಎರಡನೇ ಲಿರಿಕಲ್ ವೀಡಿಯೋ ನಾಟಿ ಕೋಳಿ… ನೀನುನಾಟಿ ಹುಂಜ ನಾನು.. ಸಾಂಗ್‌ ರಿಲೀಸ್‌ ಆಗ್ತಾ ಇದೆ. ಡಾ.ಟಿ.ಆರ್,ಚಂದ್ರಶೇಖರ್ ನಿರ್ಮಾಣ , ಜಾಕಿ ನಿರ್ದೇಶನವಿರುವ ಸಿನಿಮಾದ ಈ ಹಾಡಿಗೆ ವಿ.ನಾಗೇಂದ್ರ ಪ್ರಸಾದ್‌ ಲಿರಿಕ್ಸ್‌ ಬರೆದಿದ್ದಾರೆ.. ‌

Exit mobile version