ವಜ್ರಕಾಯ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ ಶುಭ್ರ ಅಯ್ಯಪ್ಪ ಇನ್ನ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ..
ಇತ್ತೀಚೆಗಷ್ಟೆ ಶುಭ್ರ ಅಯ್ಯಪ್ಪ ತಾವು ಮದುವೆ ಆಗಲು ನಿಶ್ಚಯವು ಮಾಡಿಕೊಂಡಿರೋದಾಗಿ ಸಾಮಾಜಿಕ ಜಾಲ ತಾಣದ ಮೂಲಕ ಅನೌನ್ಸ್ ಮಾಡಿದ್ದರು ..ತಮ್ಮ ಹುಡುಗನ ಫೋಟೋವನ್ನು ಶೇರ್ ಮಾಡುವ ಮೂಲಕ ನಾನು ಎಂಗೇಜ್ ಆಗಿದ್ದೇನೆ ಎಂದು ಶುಭ್ರ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು…
ಶುಭ್ರ ಅಯ್ಯಪ್ಪ ಮದುವೆ ಆಗುತ್ತಿರುವ ಹುಡುಗ ಯಾರು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ
ಶುಭ್ರ ಅಯ್ಯಪ್ಪ ಮದುವೆ ಆಗುತ್ತಿರುವ ಹುಡುಗನ ಹೆಸರು ವಿಶಾಲ್ ಶಿವಪ್ಪ
ವಿಶಾಲ್ ಶಿವಪ್ಪ ಕೂಡ ಶುಭ್ರ ಅಯ್ಯಪ್ಪ ಅವರಂತೆಯೇ ಕೊಡಗಿನ ಮೂಲದವರು
ವೃತ್ತಿಯಲ್ಲಿ ಸ್ಪೋರ್ಟ್ಸ್ ಮಾಸ್ಟರ್ ಆಗಿದ್ದಾರೆ ವಿಶಾಲ್ ಶಿವಪ್ಪ
ವಿಶಾಲ್ ಶಿವಪ್ಪ ಅವರಿಗೆ ಸಿನಿಮಾದ ನಂಟು ಕೂಡ ಇದೆ.
ಸಿನಿಮಾ ದಿಗ್ಗಜರಾದ ಅಂಬರೀಶ್, ಸುನೀಲ್ ಶೆಟ್ಟಿ ಹೀಗೆ ಸಾಕಷ್ಟು ಮಂದಿಯ ಸ್ನೇಹ ಸಂಪಾದಿಸಿದ್ದಾರೆ ಶುಭ್ರ ಅಯ್ಯಪ್ಪ ಅವರನ್ನ ಮದುವೆ ಆಗುತ್ತಿರುವ ಹುಡುಗ
ವಿಶಾಲ್ ಶಿವಪ್ಪ ಅವರಿಗೆ ವೈಲ್ಡ್ ಫೋಟೋಗ್ರಫಿ ಅಂದ್ರೆ ಅಚ್ಚುಮೆಚ್ಚು
ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ವಿಶಾಲ್ ಶಿವಪ್ಪ ಹಾಗೂ ಕುಟುಂಬಸ್ಥರು
ಮೈಸೂರಿನ ಮಹಾರಾಜರಾದ ಯಧುವೀರ್ ಒಡೆಯರ್ ಜೊತೆಗೆ ವಿಶಾಲ್ ಅವರಿಗಿದೆ ಉತ್ತಮ ಸ್ನೇಹ ಬಾಂಧವ್ಯ
ದಿ ಬೆಟ್ಟ ಲೈಫ್ ಕಾಫಿ ಬ್ರ್ಯಾಂಡ್ ನ ಮುಖ್ಯಸ್ಥರು ಕೂಡ ಆಗಿದ್ದಾರೆ
ಶುಭ್ರ ಹಾಗೂ ವಿಶಾಲ್ ಮಧ್ಯೆ ಇತ್ತು ಸಾಕಷ್ಟು ವರ್ಷದಿಂದ ಉತ್ತಮ ಸ್ನೇಹ ಬಾಂದವ್ಯ
ಇದೇ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಈ ಜೋಡಿ