ಭಾರತದ ಬುತೇಕ ಭಾಷೆಗಳಲ್ಲಿ ಹಾಡಿರೋ, ಮೆಲೋಡಿ ಸಾಂಗ್‌ಗಳ ಮೂಲಕ ಸಂಗಿತ ಪ್ರೇಮಿಗಳ ಮನ ತಣಿಸಿರೋ ಪ್ರಖ್ಯಾತ ಹಿನ್ನಲೆ ಗಾಯಕ ಸೋನು ನಿಗಮ್ ಅವರಿಗೆ ಭಾರತ ಸರ್ಕಾರ ಗೌರವ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. 107ಜನ ಪದ್ಮಶ್ರೀ ಪುರಸ್ಕೃತರ ಪೈಕಿ ಗಾಯಕ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರತಿದೆ. ಪ್ರತಿ ವರ್ಷದಂತೆ ಗಣರಾಜ್ಯೋತ್ಸವದ ಸಂದಭರ್ದಲ್ಲಿ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮ ಪುರಸ್ಕೃತರನ್ನ ಘೋಷಿಸಲಾಗುತ್ತೆ. ಈ ಬಾರಿ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.
30 ವರ್ಷಗಳ ಸೋನು ನಿಗಮ್ ಅವ್ರ ಸಿನಿಮಾ ಗಾಯನ ಕ್ಷೇತ್ರದ ಸಾಧನೆಗೆ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುಮಾರು 5000ಕ್ಕೂ ಹೆಚ್ಚು ಹಿಟ್ ಗೀತೆಗಳನ್ನ ನೀಡಿರೋ ಸೋನು ನಿಗಮ್, ಹಿಂದಿಯಷ್ಟೆ ಕನ್ನಡ, ತಮಿಳು, ತೆಲುಗು, ಮರಾಠಿ,ಬೋಜ್‌ಪುರಿ ಹಾಡುಗಳಿಗೆ ಧ್ವನಿಯಾಗಿದ್ದಾರೆ. ವಿಶೇಷ ಅಂದ್ರೆ ಸೋನು ನಿಗಮ್ ನೇಪಾಳಿ ಹಾಡುಗಳಿಗೂ ಧ್ವನಿಯಾಗಿದ್ದಾರೆ. ಗಾಯಕ, ನಿರೂಪಕ, ಸಂಗೀತ ಸಂಯೋಜನ ಮೂಲಕ ಸಾವಿರಾರು ಮೆಲೋಡಿಯಸ್ ಗೀತೆಗಳಿಗೆ ಜೀವತುಂಬಿರೋ ಸೋನು ನಿಗಮ್ ಅವರಿಗೆ ಈ ಗೌರವ ಸಂದಿದೆ.