ಶುಭಾ ಪೂಂಜಾ ಬಿಗ್‌ ಬಾಸ್‌ ವಿನ್ನರ್‌, ಅನೌನ್ಸ್‌ ಮಾಡಲಿದ್ದಾರೆ ಸುದೀಪ್‌..!?

ನಿನ್ನೆ ಬಿಗ್‌ ಬಾಸ್‌ ಶೋನ ಕೊನೆಯ ದಿನದ ಎಪಿಸೋಡ್‌ ಟೆಲಿಕಾಸ್ಟ್‌ ಆಯ್ತು, ಆದ್ರೆ ಕೊರೊನಾದಿಂದಾಗಿ ಬಿಗಾ ಬಾಸ್‌ ಫಾರ್ಮೆಟ್‌ ಕಳೆದುಕೊಂಡು ಮಧ್ಯದಲ್ಲೇ ಮನೆಯಲ್ಲಿದ್ದ 11 ಜನ ಆಟಗಾರರನ್ನ ಒಟ್ಟಿಗೆ ಮನೆಯಿಂದ ಹೊರಕಳುಹಿಸ ಬೇಕಾಯ್ತು..! ಪ್ರತಿ ಬಾರಿ ಒಬ್ಬೊಬ್ಬರೆ ಮನೆಯಿಂದ ಖಾಲಿಯಾಗಿ ಕೊನೆಯಲ್ಲಿ ಉಳಿದವರನ್ನ ಬಿಗ್‌ ಬಾಸ್‌ನ ವಿನ್ನರ್‌ ಅಂತ ಅನೌನ್ಸ್‌ ಮಾಡೋದು ವಾಡಿಕೆ. ಈ ಬಾರಿ ಹಾಗಾಗಲಿಲ್ಲ, ಹಾಗಾದ್ರೆ ಬಿಗ್‌ ಬಾಸ್‌ ಕನ್ನಡದ ಸೀಸನ್‌ 8ರ ವಿನ್ನರ್‌ ಯಾರು? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಂತಿದೆ.

ಕಲರ್ಸ್‌ ಕನ್ನಡ ವಾಹಿನಿಯ ಮೂಲಗಳ ಪ್ರಕಾರ, ಕೊರೊನಾ ಸಂಕಷ್ಟ ದೂರಾದ ಮೇಲೆ, ಎಲ್ಲವೂ ನಾರ್ಮಲ್‌ ಆದಮೇಲೆ, ಈ ಸೀಸನ್‌ನ ಟಾಪ್‌ 3 ಕಂಟೆಸ್ಟಂಟ್‌ಗಳನ್ನ ಅದ್ಧೂರಿ ವೇದಿಕೆಯಲ್ಲಿ ಅನೌನ್ಸ್‌ ಮಾಡಲಿದ್ದಾರೆ. ಈಗಾಗ್ಲೆ ಬಿಗ್‌ ಬಾಸ್‌ ವೀಕ್ಷಕರೇ ಪರೋಕ್ಷವಾಗಿ ಬಿಗ್‌ ಬಾಸ್‌ ವಿನ್ನರ್‌ನ ಅನೌನ್ಸ್‌ ಮಾಡಿಯಾಗಿದೆ. ವಾಡಿಕೆಯಂತೆ ಮನೆಯಿಂದ ಕೊನೆಯದಾಗಿ ಹೊರಬಂದವರೇ ಬಿಗ್‌ ಬಾಸ್‌ ವಿನ್ನರ್.‌ ಹಾಗಾಗಿ ನಿನ್ನೆ ಕೊನೆಯದಾಗಿ ಹೊರಬಂದ ಶುಭ ಪೂಂಜಾನೇ ವಿನ್ನರ್‌. ಈ ವಿಷ್ಯ ನಿನ್ನೆಯಿಂದ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾನೇ ಚರ್ಚೆಯಾಗ್ತಿದೆ.

ಬಿಗ್‌ ಬಾಸ್‌ ಮನೆಯಿಂದ ಕೊನೆಯದಾಗಿ ಹೊರಬಂದ ಅರವಿಂದ್‌ ಸೆಕೆಂಡ್‌ ರನ್ನರ್‌ ಅಪ್‌, ವೈಷ್ಣವಿ ಗೌಡ ಫಸ್ಟ್‌ ರನ್ನರ್‌ ಅಪ್‌ ಹಾಗೂ ಕಟ್ಟ ಕಡೆಯದಾಗಿ ಹೊರಬಂದ ಶುಭಾ ಪೂಂಜಾ ವಿನ್ನರ್‌ ಅಂತ ಬಿಗ್‌ ಬಾಸ್‌ ಅಭಿಮಾನಿಗಳೆ ಡಿಸೈಡ್‌ ಮಾಡಿದ್ದಾರೆ. ಆದ್ರೆ ಕಲರ್ಸ್‌ ಕನ್ನಡ ಈ ವರೆಗೂ ಬಂದಿರೋ ವೋಟ್ಸ್ ಲೆಕ್ಕ ಹಾಕಿ, ಮತ್ತೆ ಒಂದೆರಡು ವಾರ ಪೋಲಿಂಗ್‌ ನಡೆಸಿ, ಬಿಗ್‌ ಬಾಸ್‌ ವಿನ್ನರ್‌ನ ಅನೌನ್ಸ್‌ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಒಂದು ಅದ್ಧೂರಿ ಫಿನಾಲೆ ಎಪಿಸೋಡ್‌ ಇವೆಂಟ್‌ ಮಾಡುವ ಚಿಂತನೆ ನಡೆದಿದೆ..

ಈ ನಡುವೆ ಶುಭಾ ಕೊನೆಗೆ ಬಂದ್ರೂ ಅನ್ನೋ ಕಾರಣಕ್ಕಷ್ಟೆ ವಿನ್ನರ್‌ ಆಗದೆ, ಮನೆಯಲ್ಲಿ ಅವ್ರು ಇದ್ದ ರೀತಿ, ಕೊಟ್ಟ ಎಂಟರ್‌ಟೈನ್‌ಮೆಂಟ್‌, ಜನರನ್ನ ಹೆಚ್ಚು ಆಕರ್ಷಿಸಿದೆ. ಶುಭಾ ಪೂಂಜಾ ಬಗ್ಗೆ ಜನರಿಗಿದ್ದ ಇಮೇಜ್‌ ಬದಲಾಗಿದೆ, ಶುಭಾ ಪೂಂಜಾ ಒಳಗಿದ್ದ ಮುಗ್ದೆ ಎಲ್ಲರ ಮನಗೆದ್ದಿದಾಳೆ, ಯಾವುದೇ ಕಾಂಟ್ರೋವರ್ಸಿಗಳಿಲ್ಲದ, ಸ್ಟ್ರಾಟಜಿಗಳ್ಲಿಲ್ಲದ, ಒಮ್ಮೆಯೂ ಕಳಪೆ ಬೋರ್ಡ್‌ ಧರಿಸದ, ಅತಿ ಕಡಿಮೆ ಬಾರಿ ನಾಮಿನೇಟ್‌ ಆಗಿರೋ ಶುಭಾ ಈ ಬಾರಿ ವಿನ್ನರ್‌ ಆಗೋದು ಪಕ್ಕ ಅನ್ನೋದು ಬಿಗ್‌ ಬಾಸ್‌ ಪಕ್ಕ ಅಭಿಮಾನಿಗಳ ಲೆಕ್ಕಾಚಾರ

Exit mobile version