ಶಕ್ತಿಧಾಮದ ಮಕ್ಕಳ ಜೊತೆ ಶಿವಣ್ಣನ ಬಸ್ ಪರೇಡ್..!
ಇವತ್ತು ಗಣರಾಜ್ಯೋತ್ಸವದ ಪ್ರಯುಕ್ತ ದೇಶಾದ್ಯಂತ ಹಬ್ಬದ ಸಂಭ್ರಮ, ಈ ಹಬ್ಬವನ್ನ ಕರುನಾಡ ಚಕ್ರವರ್ತಿ ಡಾ.ಶಿವರಾಜ್ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್ಕುಮಾರ್ ಅವರ ಜೊತೆಗೆ, ಮೈಸೂರಿನಲ್ಲಿರುವ ತಮ್ಮ ಶಕ್ತಿಧಾಮದಲ್ಲಿ ಆಚರಿಸಿದ್ದಾರೆ. ಶಕ್ತಿಧಾಮದ ಮಕ್ಕಳ ಜೊತೆಗೆ ಕಾಲ ಕಳೆದು, ಆ ಮಕ್ಕಳ ಆಸೆಯಂತೆ ಅವ್ರನ್ನ ಸ್ಕೂಲ್ ಬಸ್ನಲ್ಲಿ ರೌಂಡ್ ಹಾಕಿಸುವ ಮೂಲಕ ಮಕ್ಕಳಿಗೂ ಖುಷಿ ಪಡಿಸಿ, ತಾವು ಈ ಮಕ್ಕಳ ಜೊತೆಗೆ ವಿಶೇಷವಾಗಿ ಗಣರಾಜ್ಯೋತ್ಸವ ಆಚರಿಸಿದ್ದಾರೆ.
ಇಂದು ಬೆಳಗ್ಗೆ ಶಕ್ತಿಧಾಮದಲ್ಲಿ ಶಿವಣ್ಣ ಪತ್ನಿ ಗೀತಕ್ಕ ಹಾಗೂ ಗೆಳೆಯ ಚಿ.ಗುರುದತ್ ಜೊತೆ ಸೇರಿ ಧ್ವಜಾರೋಹಣ ಮಾಡಿ, ಸಿಹಿ ಹಂಚಿ ನಂತ್ರ ಅಲ್ಲೇ ಕಾಲ ಕಳೆಯುವ ಮೂಲಕ ಗಣರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅಷ್ಟೆ ಶಕ್ತಿಧಾಮದ ಬಗ್ಗೆ ಪ್ರೀತಿ ಹೊಂದಿದ್ದ ಶಿವಣ್ಣ, ಅಪ್ಪು ದೈಹಿಕವಾಗಿ ಇಲ್ಲವಾದ ಮೇಲೆ ಹೆಚ್ಚು ಸಮಯವನ್ನ ಶಕ್ತಿಧಾಮದ ಮಕ್ಕಳ ಜೊತೆ ಕಳೆಯುವ ಮೂಲಕ ಅಪ್ಪು ನೆನಪನ್ನ ಹಸಿರಾಗಿಸಿಕೊಳ್ಳುತ್ತಿದ್ದಾರೆ. ಅವ್ರಲ್ಲೇ ಅಪ್ಪುವನ್ನ ನೋಡುತ್ತಿದ್ದಾರೆ.