Site icon Kannada Pichchar

ಗೆಳೆಯ ಚಿ.ಗುರುದತ್‌ ಡೈರೆಕ್ಷನ್‌ನಲ್ಲಿ ಶಿವಣ್ಣನ ಹೊಸ ಪಿಚ್ಚರ್‌..!

ಸಂದೇಶ್ ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್.
ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಶಿವಣ್ಣನ ಕುಚಿಕು ಚಿ.ಗುರುದತ್ ನಿರ್ದೇಶನ .

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ ಈ ಚಿತ್ರವನ್ನು ಸಂದೇಶ್ ಎನ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಿ.ಗುರುದತ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ.

ಶಿವಣ್ಣನ ಸಿನಿಮಾ ಅಂತಷ್ಟೆ ಫೈನಲ್‌ ಆಗಿದ್ದು, ಸಿನಿಮಾದ ತಾಂತ್ರಿಕ ವರ್ಗ, ಸ್ಟಾರ್‌ ಕಾಸ್ಟ್‌ ಬಗ್ಗೆ ಇನ್ನಷ್ಟೆ ಫೈನಲ್‌ ಆಗಬೇಕಿದೆ, ಹಂತ ಹಂತವಾಗಿ ಈ ಬಗ್ಗೆ ಮಾಹಿತಿ ನೀಡೋದಾಗಿ ನಿರ್ಮಾಪಕರು ಹೇಳಿದ್ದಾರೆ. ಸದ್ಯ ಸಿನಿಮಾ ಚಟುವಟಿಕೆಗಳು ಮೊದಲಿನಂತೆ ಶುರುವಾಗ್ತಾ ಇದ್ದು, ಶಿವಣ್ಣ ಕೂಡ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ಓಕೆ ಹೇಳ್ತಾ ಇದ್ದಾರೆ. ಇದು ಗೆಳೆಯ ಚಿ.ಗುರುದತ್‌ ಸಿನಿಮಾ ಆಗಿರೋದ್ರಿಂದ ಇನ್ನಷ್ಟು ಸ್ಪೆಷಲ್‌ ಆಗಿರೋದ್ರಲ್ಲಿ ಡೌಟೇ ಇಲ್ಲ.

Exit mobile version