‘ಶಿವಾಜಿ ಸೂರತ್ಕಲ್ 2’ ರಮೇಶ್ ಅರವಿಂದ್ ಜೊತೆ ಟಫ್ ಕಾಪ್ ಆಗಿ ಮೇಘನಾ ಗಾಂವ್ಕರ್

ರಮೇಶ್​ ಅರವಿಂದ್​ ನಟನೆಯ ‘ಶಿವಾಜಿ ಸುರತ್ಕಲ್​’ ಸಿನಿಮಾಗೆ 2020ರ ಆರಂಭದಲ್ಲಿ ಭರ್ಜರಿ ಗೆಲುವು ಸಿಕ್ಕಿತ್ತು. ಈಗ ಅದರ ಸೀಕ್ವೆಲ್​ ಸಿದ್ಧವಾಗುತ್ತಿದೆ. ಅದೇ ತಂಡ ಸೇರಿಕೊಂಡು ‘ಶಿವಾಜಿ ಸುರತ್ಕಲ್​ 2’ ಮಾಡುತ್ತಿರುವುದು ಗೊತ್ತೇ ಇದೆ. ಆ ಚಿತ್ರತಂಡಕ್ಕೀಗ ನಟಿ ಮೇಘನಾ ಗಾಂವ್ಕರ್​ ಎಂಟ್ರಿ ನೀಡಿದ್ದಾರೆ. ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಇಷ್ಟು ದಿನ ಸಿನಿಮಾಗಳಲ್ಲಿ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುತ್ತಿದ್ದ ಮೇಘನಾ ಅವರು ಈಗ ‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯಾಗಿ ನಟಿಸಲಿದ್ದಾರೆ.

ಶಿವಾಜಿಯ ಪ್ರತಿ ಹೆಜ್ಜೆಯ ಜೊತೆಗೆ ಡಿಸಿಪಿ ಮೇಘನಾ ಪಾತ್ರ ಸಾಗುತ್ತೆ. ಈ ಪಾತ್ರ ಚಿತ್ರದಲ್ಲಿ ಬಹಳ ಮುಖ್ಯವಾದ ಪಾತ್ರ ಅಂತರೆ ನಿರ್ದೇಶಕ ಆಕಾಶ್‌ ಶ್ರೀವತ್ಸ. ನಟಿ ಮೇಘನಾ ಗಾಂವ್ಕರ್ ವಿಚಾರಕ್ಕೆ ಬರುವುದಾದರೆ ಮೇಘನಾ ಸಾಕಷ್ಟು ಸಿನಿಮಾಗಳಲ್ಲಿ ಭಿನ್ನ ಪಾತ್ರಗಳಲ್ಲಿ ಗಮನಸೆಳೆದಿರುವ ನಟಿ. ಯಾವುದೇ ಪಾತ್ರ ಆದ್ರು ಸರಿ ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಎನಿಸಿ ಕೊಳ್ಳುವಂತಹ ನಟಿ.

ಇನ್ನಷ್ಟು ಕಲಾವಿದರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ರಮೇಶ್ ಅರವಿಂದ್ ನಟನೆಯ 103ನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್. ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಕೆಲವೇ ದಿನದಲ್ಲಿ ಮುಹೂರ್ತ ಮಾಡಿ ಚಿತ್ರೀಕರಣ ಆರಂಭಿಸಬೇಕು ಎಂದು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

****

Exit mobile version