ದೇಶದಲ್ಲೇ ಮೊಟ್ಟ ಮೊದಲಬಾರಿಗೆ ಉಪಗ್ರಹಕ್ಕೆ ಸಿನಿಮಾ‌ ನಟ‌ನ ಹೆಸರು ನಾಮಕರಣ !

ರಾಷ್ಟ್ರೀಯ ವಿಜ್ಞಾನ ದಿನ ಅಚರಣೆ ಅಂಗವಾಗಿ ಸರ್ಕಾರದ ವತಿಯಿಂದ ಮಲ್ಲೇಶ್ವರಂ ನಲ್ಲಿ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು…
ಮಲ್ಲೇಶ್ವರಂನ ಸರ್ಕಾರಿ ಕಾಲೇಜ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಶ್ವಥ್ ನಾರಾಯಣ ಚಾಲನೆ ನೀಡಿದ್ರು…ಇತಿಹಾಸದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳಿಂದ ಉಪಗ್ರಹ ನಿರ್ಮಾಣ ಕಾರ್ಯವಾಗಿದ್ದು ಇಸ್ರೋ ಜೊತೆಗೂಡಿ ವಿದ್ಯಾರ್ಥಿಗಳು ಉಪಗ್ರಹ ನಿರ್ಮಾಣ ಮಾಡಿದ್ದಾರೆ…

ಇನ್ನು ವಿಶೇಷ ಅಂದ್ರೆ ವಿದ್ಯಾರ್ಥಿಗಳು ನಿರ್ಮಿಸೋ ಉಪಗ್ರಹಕ್ಕೆ ಪುನೀತ್ ರಾಜ್ ಕುಮಾರ್ ಹೆಸರು ಘೋಷಣೆ ಮಾಡಲಾಯ್ತು‌…1.90 ಕೋಟಿ ವೆಚ್ಚದಲ್ಲಿ ಉಪಗ್ರಹ ನಿರ್ಮಾಣ ಮಾಡಲಾಗಿದ್ದು 1.5 ಕೆಜಿ ತೂಕದ ಉಪಗ್ರಹ ಇದಾಗಿದೆ…

ಸಚಿವ ಅಶ್ವಥ್ ನಾರಾಯಣ ರಿಂದ ಉಪಗ್ರಹಕ್ಕೆ ಪುನೀತ್ ರಾಜ್‍ಕುಮಾರ್ ಹೆಸರು ಘೋಷಣೆ ಮಾಡಿದ್ದು ನಾಡಿನ‌ಜನತೆಗೆ ಈ‌ವಿಚಾರ ಸಂತಸ ತಂದಿದೆ ಈ ಮೂಲಕ‌ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ನಟರೊಬ್ಬರ ಹೆಸರು ಉಪಗ್ರಹಕಗಕೆ ಇಡಲಾಗಿದೆ..‌

ಸೆಪ್ಟೆಂಬರ್‌ ಅಕ್ಟೋಬರ್ ವೇಳೆ ಉಪಗ್ರಹ ನಿರ್ಮಾಣ ಆಗಲಿದ್ದು, ಬೆಂಗಳೂರಿನ ಸರ್ಕಾರಿ ಶಾಲೆಯ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಉಪಗ್ರಹ ನಿರ್ಮಾಣ ಕಾರ್ಯದಲ್ಲಿ ತೊಡಗಲಿದ್ದಾರೆ…ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ 75 ಉಪಗ್ರಹಗಳನ್ನ ಉಡಾವಣೆ ಮಾಡ್ತಿದೆ…

Exit mobile version