ಸಂಕ್ರಾಂತಿ ಸಂಜೆ Liveನಲ್ಲಿ ದುನಿಯಾ ವಿಜಿ surprise

ಸ್ಯಾಂಡಲ್‌ ವುಡ್‌ ಸಲಗ, ದುನಿಯಾ ವಿಜಿ ಇವತ್ತು ಸಂಜೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಲೈವ್‌ ಬರ್ತಾ ಇದ್ದಾರೆ. ಇತ್ತೀಚೆಗಷ್ಟೆ ಲೈವ್‌ ಬಂದು ಸರ್ಪ್ರೈಸ್‌ಗಳ ಸುರಿಮಳೆಯನ್ನೇ ಸುರಿಸಿದ್ರು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಈಗ ದುನಿಯಾ ವಿಜಿ ಕೂಡ ಅಭಿಮಾನಿಗಳಿಗೆ ಒಂದಷ್ಟು ವಿಶೇಷತೆಗಳನ್ನ ನೀಡಲಿದ್ದಾರೆ.

ಇವತ್ತು ಸಂಜೆ ೬ಕ್ಕೆ ದುನಿಯಾ ವಿಜಿ ಲೈವ್‌ ಬರ್ತಾ ಇದ್ದು, ಆ ಲೈವ್‌ ನಲ್ಲಿ ಏನೆಲ್ಲಾ ಹೇಳ್ತಾರೆ ಅನ್ನೋದನ್ನ ಕನ್ನಡ ಪಿಚ್ಚರ್‌ ನಿಮಗೆ ಮೊದಲೇ ಹೇಳ್ತಾ ಇದೆ. ದುನಿಯಾ ವಿಜಿ ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆಗೆ ಆಚರಿಸಕೊಳ್ತಾ ಇಲ್ಲ, ಕಾರಣ ಕೊರೋನಾ, ಆದ್ರೆ ಅಭಿಮಾನಿಗಳಿಗೊಂದು ಖುಷಿಯ ವಿಷಯವನ್ನ ಶೇರ್‌ ಮಾಡಲಿದ್ದಾರೆ. ಹೌದು ವಿಜಿ ತಮ್ಮ ಮುಂದಿನ ಸಿನಿಮಾದ ಅಧೀಕೃತ ಮಾಹಿತಿಯನ್ನ ಬರ್ತ್‌ಡೇಗೆ ಶೇರ್‌ ಮಾಡಲಿದ್ದಾರೆ. ಈ ಕುರಿತು ಇವತ್ತು ಲೈವ್‌ ನಲ್ಲಿ ಮಾತನಾಡಲಿದ್ದಾರೆ.

ಈಗಾಗ್ಲೆ ಹಾಡುಗಳು ಹಾಗೂ ಟೀಸರ್‌ನಿಂದ, ಸೌಂಡ್‌ ಮಾಡಿರೋ ವಿಜಿ ಅವ್ರ ಚೊಚ್ಚಲ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಸಲಗ ಬಗ್ಗೆ ಇನ್ನಷ್ಟು ಅಪ್‌ಡೇಟ್‌ ನೀಡಲಿದ್ದಾರೆ. ಇದರ ಜೊತೆಗೆ ಸಲಗ ಸಿನಿಮಾದ ರಿಲೀಸ್‌ ಡೇಟ್‌ ಕೂಡ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಸೋ ಇವತ್ತು ಸಂಜೆ ದುನಿಯಾ ವಿಜಿ ಅವ್ರ ಸೋಷಿಯಲ್‌ ಮೀಡಿಯಾ ಪೇಜ್‌ ನಲ್ಲಿ ಲೈವ್‌ ಮಿಸ್‌ ಮಾಡಿಕೊಳ್ಳಬೇಡಿ, ಈ ಲೈವ್‌ ಅನ್ನು ಕನ್ನಡ ಪಿಚ್ಚರ್‌ ಫೇಸ್‌ ಬುಕ್‌ ಪೇಜ್‌ ನಲ್ಲೂ ಕೂಡ ವೀಕ್ಷಿಸಬಹುದು.

Exit mobile version