ಅಪ್ಪು ಅಣ್ಣ ನಮ್ಮೆಲ್ಲರಿಗೂ ಸ್ಪೂರ್ತಿ:ರೈಡರ್ ಪ್ರೆಸ್ ಮೀಟ್ ವೇಳೆ ಪುನೀತ್ ರಾಜಕುಮಾರ್ ರನ್ನು ಸ್ಮರಿಸಿದ ನಿಖಿಲ್

ಸ್ಯಾಂಡಲ್ ವುಡ್ ಯವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ರೈಡರ್’ ಇದೇ ತಿಂಗಳು ರಿಲೀಸ್ ಆಗಲಿದೆ. ಡಿ.7ರಂದು ನಿಖಿಲ್​ ನಟನೆಯ ‘ರೈಡರ್​’ ಚಿತ್ರದ ಸುದ್ದಿಗೋಷ್ಠಿ ನಡೆಯಿತು. ಚಿತ್ರದ ಪ್ರೆಸ್ ಮೀಟ್ ವೇಳೆ ಪುನೀತ್ ರಾಜಕುಮಾರ್ ಅವರನ್ನು ನೆನದು ಭಾವುಕರಾದರು ನಿಖಿಲ್ ಕುಮಾರಸ್ವಾಮಿ. ಪುನೀತ್ ರಾಜ್​​ಕುಮಾರ್​ ಗಳಿಸಿರುವ ಜನ ಪ್ರೀತಿಯ ಬಗ್ಗೆ ಮಾತನಾಡಿದರು. ಯಾರಿಗೂ ಗೊತ್ತಾಗದ ರೀತಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಅಪ್ಪು ಅವರು ಎಲ್ಲರಿಗೂ ಒಂದು ಪಾಠ ಹೇಳಿಕೊಟ್ಟಿದ್ದಾರೆ ಎಂದು ನಿಖಿಲ್​ ಅಭಿಪ್ರಾಯಪಟ್ಟರು.

YouTube player

‘ಇಡೀ ದೇಶದಲ್ಲಿ ಇಂದು ಪುನೀತ್​ ಅಣ್ಣನ ಬಗ್ಗೆ ಚರ್ಚೆ ನಡೆಯುತ್ತಿದೆ. ಹಳ್ಳಿಹಳ್ಳಿಯಲ್ಲೂ ಅವರ ಭಾವಚಿತ್ರಗಳನ್ನು ಹಾಕಿದ್ದಾರೆ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ನಾವೆಲ್ಲ ತಬ್ಬಲಿಗಳಾಗಿದ್ದೇವೆ’ ಎಂದು ನಿಖಿಲ್​ ಹೇಳಿದ್ದಾರೆ. ಪುನೀತ್​ ರಾಜ​ಕುಮಾರ್​ ಅವರು ಅಭಿಮಾನಿಗಳಿಗೆ ಮಾತ್ರವಲ್ಲದೇ ಚಿತ್ರರಂಗದಲ್ಲಿನ ಅನೇಕ ಹೀರೋಗಳಿಗೆ ಮಾದರಿ ಆಗಿದ್ದರು. ಅವರಿಂದ ಸ್ಫೂರ್ತಿ ಪಡೆದವರಲ್ಲಿ ನಿಖಿಲ್​ ಕುಮಾರಸ್ವಾಮಿ ಕೂಡ ಒಬ್ಬರು.

ನಿಖಿಲ್‌ ಕುಮಾರ್‌ ಅಭಿನಯದ ಬಹು ನಿರೀಕ್ಷಿತ ವಿಜಯ್‌ ಕುಮಾರ್‌ ಕೊಂಡ ನಿರ್ದೇಶನದ ‘ರೈಡರ್‌’ ಇದೇ ತಿಂಗಳು ರಿಲೀಸ್ ಆಗಲಿದೆ.  ನಿಖಿಲ್‌ ಕುಮಾರಸ್ವಾಮಿ ಆಪ್ತ ಸುನೀಲ್‌ ಗೌಡ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಲಹರಿ ಫಿಲಮ್ಸ್‌ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹಂಚಿಕೊಂಡಿದೆ. ಡಿಸೆಂಬರ್ 24 ರಂದು ಸಿನಿಮಾ ತೆರೆಗೆ ಬರಲಿದೆ. 

ರೈಡರ್’​ ಆ್ಯಕ್ಷನ್​ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಟೀಸರ್ ಪೋಸ್ಟರ್ ಲುಕ್‌  ಮೂಲಕ ವೀಕ್ಷಕರ ಗಮನ ಸೆಳೆಯುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಕೆ.ಎಮ್.ಪ್ರಕಾಶ್ ಸಂಕಲನ, ಶ್ರೀಶ ಕುದುವಳ್ಳಿ ಕ್ಯಾಮೆರಾ ಕೈ ಚಳಕ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷನ್ ಕೋರಿಯೊಗ್ರಾಫಿ, ಡಾ.ರವಿವರ್ಮ ಸಾಹಸ ಚಿತ್ರಕ್ಕಿದೆ. 

ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ರಾಜೇಶ್ ನಟರಂಗ, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ. ಇನ್ನು ಇತ್ತಿಚೆಗಷ್ಟೇ ಚಿತ್ರದ ‘ಡವ್ವ ಡವ್ವ’ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿತ್ತು. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗಿತ ಸಂಯೋಜನೆ ಚಿತ್ರಕ್ಕಿದೆ.

****

Exit mobile version