ತೊಡೆ ತಟ್ಟಿ ಅಖಾಡಕ್ಕೆ ಇಳಿದ ಯುವರಾಜ ನಿಖಿಲ್ ಕುಮಾರಸ್ವಾಮಿ..!

ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮತ್ತು ಪಾಲಿಟಿಕ್ಸ್ ಎರಡರಲ್ಲೂ ಸಾಕಷ್ಟು ಬ್ಯೂಸಿ ಇರ್ತಾರೆ, ಸದ್ಯ ರೈಡರ್ ಮುಗಿಸಿದ್ದು ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆಗೆ ರೆಡಿಯಾಗಿದೆ ಮತ್ತೊಂದು ಚಿತ್ರಕ್ಕೆ ತಯಾರಾಗುತ್ತಿರುವ ನಿಖಿಲ್ ಕೊಂಚ ಫ್ರೀ ಮಾಡಿಕೊಂಡು  ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಕಬ್ಬಡಿ ಆಡಿದ್ದಾರೆ.

YouTube player

ಸ್ಯಾಂಡಲ್ ವುಡ್ ನಟ ಹಾಗೂ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯ ಜಂಜಾಟ ಬಿಟ್ಟು ಕಬ್ಬಡಿ ಆಟಗಾರನಾಗಿ ತೊಡೆತಟ್ಟಿದ್ದಾರೆ. ಹೌದು..ವಿಧಾನಪರಿಷತ್ ಚುನಾವಣೆ ಮಧ್ಯೆ ಕೊಂಚ ಫ್ರೀ ಮಾಡಿಕೊಂಡು. ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆಯಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ಒಂದು ರೈಡ್ ಮಾಡಿದರು . ಕಬ್ಬಡಿ ಆಡುವ ಮೂಲಕ ಅಭಿಮಾನಿಗಳನ್ನೂ ಹಾಗೂ ಆಟಗಾರರನ್ನು ಪ್ರೋತ್ಸಾಹಿಸಿದರು .

****

Exit mobile version