4 ದಿನದಲ್ಲಿ 95.22ಲಕ್ಷಗಳಿಸಿ ದಾಖಲೆ ಬರೆದ ನಿನ್ನ ಸನಿಹಕೆ..!

ಕೋವಿಡ್ ನಂತರ ಥಿಯೇಟರ್ ಗಳಲ್ಲಿ 100% ಆಕ್ಯೂಪೆನ್ಸಿ ಗೆ ಅವಕಾಶ ಸಿಕ್ಕಿ ಅದ್ದೂರಿಯಾಗಿ ತೆರೆ ಕಂಡ ಚಿತ್ರ ನಿನ್ನ ಸನಿಹಕೆ. ಚಿತ್ರ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಂಡು ಪ್ರೇಕ್ಷಕರರಿಂದಲೂ ಮೆಚ್ಚುಗೆ ಪಡೆದಿದೆ. ಅ.8ಕ್ಕೆ ಬಿಡುಗಡೆ ಆದ ನಿನ್ನ ಸನಿಹಕೆ ಚಿತ್ರ ಜನರಿಂದಲೇ ಹೆಚ್ಚು ಪ್ರಚಾರ ಪಡೆದು ತನ್ನ ಮೈಲೇಜ್ ಹೆಚ್ಚಿಸಿಕೊಂಡಿದೆ ಇದಕ್ಕೆ ಕಾರಣ ಚಿತ್ರದ ಸಬ್ಜೆಕ್ಟ್ ಮತ್ತು ಅದನ್ನು ನಿರೂಪಿಸಿರುವ ಸೂರಜ್ ಅವರ ಪ್ರಯತ್ನವೂ ಕೂಡ ಇಲ್ಲಿ ವರ್ಕೌಟ್ ಆಗಿದೆ.

ಕೋವಿಡ್ ನಂತರ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾದ ಯಾವ ಚಿತ್ರವೂ ಕಲೆಕ್ಷನ್ ವಿಷಯಕ್ಕೆ ಬಂದಾಗ ಸಮಾಧಾನ ಪಡುವಂತಹ ಅಂಶ ಕಡಿಮೆಯೇ ಆದರೆ ‘ನಿನ್ನ ಸನಿಹಕೆ’ ಚಿತ್ರ ಬಿಡುಗಡೆ ಆದ ನಾಲ್ಕೇ ದಿನದಲ್ಲಿ 95.22 ಲಕ್ಷಗಳಿಸಿದೆ, ಸದ್ಯದ ಮಟ್ಟಿಗೆ ಇದೊಂದು ದಾಖಲೆ ಎನ್ನಬಹುದು.

ಈ ದಾಖಲೆಗೆ ಮತ್ತೊಂದು ಕಾರಣ ಎಂದರೆ ಚಿತ್ರ ತಂಡದ ಪರಿಶ್ರಮ. ಚಿತ್ರ ತೆರೆ ಕಂಡಿರುವ ಮಲ್ಟಿಪ್ಲಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಗಳಿಗೆ ಖುದ್ದು ಚಿತ್ರದ ನಾಯಕ ಮತ್ತು ನಾಯಕಿ ಧನ್ಯಾ ಹಾಗೂ ಸೂರಜ್ ಗೌಡ ಭೇಟಿ ಕೊಟ್ಟು ಪ್ರೇಕ್ಷರಲ್ಲಿ ಮನವಿ ಮಾಡಿದ್ರು, ಇದೂ ಕೂಡ ಚಿತ್ರಕ್ಕೆ ಮತ್ತಷ್ಟು ಪ್ರಚಾರ ಸಿಗಲು ಕಾರಣವಾಯ್ತು. ಇದೇ ಕಾರಣಕ್ಕೆ ವೀಕೆಂಡ್ ನಲ್ಲಿ ಜನರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ತು.

ವಿಭಿನ್ನ ಕಥಾಹಂದರ ಇರುವ ನಿನ್ನ ಸನಿಹಕೆ ಚಿತ್ರ ಎಲ್ಲಾ ವರ್ಗದ ಜನರು ನೋಡಬಹುದಾದ ಅದರಲ್ಲೂ  ಯುವ ಮನಸ್ಸುಗಳ ಹೃದಯಕ್ಕೆ ಹೆಚ್ಚು ಫೀಲ್ ನೀಡುವಂತಹ ನಿನ್ನ ಸನಿಹಕೆ ಸಿನಿಮಾ ಸದ್ಯ ಓಡ್ತಿರೊ ಸ್ಪೀಡ್ ನೋಡುದ್ರೆ ಮುಂದಿನ ದಿನಗಳಲ್ಲಿ ತನ್ನ ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡು  ದಾಖಲೆ ನಿರ್ಮಿಸಿ ಸಕ್ಸಸ್ ಕಾಣೋದ್ರಲ್ಲಿ ಡೌಟೇ ಇಲ್ಲಾ..!

****

Exit mobile version