ಒಟಿಟಿ ಗೂ ಬಂತು ‘ಮದಗಜ’

ತೆರೆ ಕಂಡು ಒಂದು ತಿಂಗಳ ಒಳಗೆ ‘ಮದಗಜ’ ಸಿನಿಮ ಒಟಿಟಿ (ಅಮೆಜಾನ್ ವೀಡಿಯೋ) ಯಲ್ಲಿ ಲಭ್ಯವಾಗಲಿದೆ. ಸಾಮಾನ್ಯವಾಗಿ ಬೇರೆ ಭಾಷೆಯ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗುವುದನ್ನು ನಾವು ಕಾಣ್ತಿದ್ವಿ ಆದ್ರೆ ಈಗ ಕನ್ನಡ ಸಿನಿಮಾಗಳು ಕೂಡ ಒಟಿಟಿಯಲ್ಲಿ ರಿಲೀಸ್ ಆಗುವುದನ್ನು ನಾವು ಕಾಣುತ್ತಿದ್ದೇವೆ.

ಕನ್ನಡದ ‘ಮದಜಗ’  ಸಿನಿಮಾ ಕೂಡ ಅದೇ ಹಾದಿ ಹಿಡಿದಿದೆ. ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಈ ಚಿತ್ರ ಪ್ರಸಾರ ಆಗುತ್ತಿದೆ. ಶ್ರೀಮುರಳಿ  ನಟನೆಯ ಈ ಚಿತ್ರಕ್ಕೆ ‘ಅಯೋಗ್ಯ’ ಖ್ಯಾತಿಯ ಮಹೇಶ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್​ ನಟಿಸಿದ್ದಾರೆ. ಪಕ್ಕ ಮಾಸ್​ ಶೈಲಿಯಲ್ಲಿ ಮೂಡಿಬಂದಿರುವ ‘ಮದಗಜ’ ಸಿನಿಮಾ ಈಗ ಆನ್​ಲೈನ್​ನಲ್ಲಿ ಲಭ್ಯವಾಗಿರುವುದು ಒಟಿಟಿ ಪ್ರಿಯರಿಗೆ ಖುಷಿತಂದಿದೆ.

ಡಿ.3ರಂದು ಬಿಡುಗಡೆಯಾದ ‘ಮದಗಜ’ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿತ್ತು. 900ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಾಣುತ್ತಿತ್ತು. ಆರಂಭದಲ್ಲಿ ಉತ್ತಮ ಕಲೆಕ್ಷನ್​ ಕೂಡ ಆಗಿತ್ತು ಎಂಬ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು. ಮೊದಲ ದಿನ 7.86 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂಬ ಬಗ್ಗೆ ಚಿತ್ರತಂಡವೇ ಮಾಹಿತಿ ಹಂಚಿಕೊಂಡಿತ್ತು. ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್​ ಗೌಡ ಬಂಡವಾಳ ಹೂಡಿದ್ದಾರೆ.​ ಬಿಡುಗಡೆಯಾಗಿ 25 ದಿನ ಕಳೆಯುವುದರೊಳಗೆ ‘ಮದಗಜ’ ಸಿನಿಮಾ ಒಟಿಟಿ ಕದ ತಟ್ಟಿದೆ.

ಕೊರೊನಾ ಲಾಕ್ ಡೌನ್ ನಂತರ ಓಟಿಟಿ ಪ್ಲ್ಯಾಟ್ ಫಾರ್ಮ್ ನ ರೀಚ್ ದೊಡ್ಡದಾಗಿದೆ. ಜೊತೆಗೆ ಸಿನಿಮಾ ಬ್ಯುಸಿನೆಸ್  ಅಂತ ಬಂದ್ರೆ ಒಳ್ಳೆಯ ವೇದಿಕೆಯನ್ನೆ ಸೃಷ್ಟಿ ಮಾಡಿಕೊಟಿದೆ. ಇತ್ತೀಚೆಗೆ ಹಲವಾರು ಸಿನಿಮಾಗಳು ನೇರವಾಗಿ ಓಟಿಟಿ ಗೆ ಬರಲು ಶುರುವಾಗಿವೆ, ಹಿಂದೆಯಲ್ಲಾ ಚಿತ್ರಮಂದಿರದಲ್ಲಿ ತೆರೆಕಂಡು ಆರೇಳು ತಿಂಗಳು ಅಥವಾ ವರ್ಷದ ಬಳಿಕ ಟಿವಿ ಯಲ್ಲಿ ಪ್ರಸಾರ ಆಗುತ್ತಿದ್ದವು ಆದರೆ ಈಗ ಕಾಲ ಬದಲಾಗಿದ್ದು ಒಟಿಟಿ ಯಲ್ಲಿ ನೇರವಾಗಿ ಬಿಡುಗಡೆ ಆಗುತ್ತಿದ್ದು ಒಟಿಟಿ ಕೂಡ ಚಿತ್ರರಂಗದ ಮಾರುಕಟ್ಟೆ ವ್ಯಾಪ್ತಿಯನ್ನ ವಿಸ್ತರಿಸಿದೆ, ಮತ್ತು ನಿರ್ಮಾಪಕರ ಜೀಬನ್ನು ತುಂಬಿಸಿ ಅವರ ಮುಖದಲ್ಲಿ ಮಂದಹಾಸ ತರಿಸುವಲ್ಲಿ ಯಶಸ್ವಿಯಾಗಿದೆ.

****

Exit mobile version