ಗಮನ ಸೆಳೇದಿದೆ ಭಜರಂಗಿ 2 ಚಿತ್ರದ ಟ್ರೈಲರ್..!

ಇದೇ ತಿಂಗಳು ಅ.29ಕ್ಕೆ ಡಾ ಶಿವರಾಜಕುಮಾರ್ ಅಭಿಮಾನಿಗಳಿಗೆ ಹಬ್ಬ.ಅಂದ್ರೆ ಶಿವಣ್ಣ ಅವರ ಹುಟ್ಟು ಹಬ್ಬವಲ್ಲ ಬದಲಿಗೆ ಶಿವಣ್ಣ ನಟನೆಯ ಬಹು ನಿರೀಕ್ಷೆಯ ಭಜರಂಗಿ 2 ಚಿತ್ರ ಬಿಡುಗಡೆ ಆಗುತ್ತದ್ದೆ. ಹಾಗಾಗಿ ಅಂದು ಶಿವಣ್ಣ ಅಭಿಮಾನಿಗಳ ಪಾಲಿಗೆ ಅದು ಹಬ್ಬವೇ ಸರಿ. ಈಗ ಅದರ ಅಂದರೆ ಭಜರಂಗಿ2 ಚಿತ್ರದ ಒಂದು ಝಲಕ್ ರಿಲೀಸಿ ಆಗಿದೆ, ನಿನ್ನೆ ಅ.20 ಭಜರಂಗಿ 2 ಚಿತ್ರದ ಟ್ರೈಲರ್ ರಿಲೀಸ್ ಆಗಿದೆ, ಇಷ್ಟು ದಿನಗಳ ಕಾಲ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಶಿವಣ್ಣ ಅಭಿಮಾನಿಗಳಿಗೆ ಟ್ರೈಲರ್ ಸಂಚಲನ ಮೂಡಿಸಿದೆ.

ಈಗಾಗಲೇ ರಿಲೀಸ್ ಮಾಡಿದ್ದ ಪೋಸ್ಟರ್ ಗಳಲ್ಲಿ ಸೂಪರ್ ನ್ಯಾಚುರಲ್ ಎಲಿಮೆಂಟ್ ಗಳು ಡಾಳವಾಗಿ ಕಾಣುತ್ತಿದ್ದರಿಂದ ಇದೊಂದು ಮಂತ್ರ-ತಂತ್ರಗಳ ಕಥೆಯ ಎಳೆ ಇರಬಹುದಾ ಎಂಬ ಚಿಕ್ಕ ಅನುಮಾನ ಕಾಡುತ್ತಿತ್ತು ನಿನ್ನೆ ಅ,20ರಂದು ಬಿಡುಗಡೆಗೊಳಿಸಿದ ಟ್ರೈಲರ್ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದು ಟ್ರೇಲರ್​ನಲ್ಲಿ ಬರುವ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ಇಲ್ಲಿ ಹೈಲೈಟ್​ ಆಗಿದ್ದು ಸೆಟ್​. ಟ್ರೆಲರ್​ನಲ್ಲಿ ಕಾಣುವ ಪ್ರತಿ ಸೆಟ್​ ಸಾಕಷ್ಟು ಗಮನ ಸೆಳೆಯುತ್ತಿದೆ. ಚಿತ್ರತಂಡ ಇದಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದು ಕಾಣುತ್ತದೆ. ಶಿವರಾಜ್​ಕುಮಾರ್, ಭಾವನಾ ಸೇರಿ ಎಲ್ಲರೂ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್​ ನೋಡಿದವರಿಗೆ ಇಡೀ ಸಿನಿಮಾದ ಕಥೆ ತಂತ್ರ-ಮಂತ್ರಗಳ ಮೇಲೆಯೇ ಸಾಗುತ್ತದೆಯೇ ಎನ್ನುವ ಪ್ರಶ್ನೆ ಕಾಡದೆ ಇರದು. ಇನ್ನು, ಹಿನ್ನೆಲೆ ಸಂಗೀತ ಕೂಡ ಇಲ್ಲಿ ಸಾಕಷ್ಟು ಗಮನ ಸೆಳೆಯುವಂತಿದೆ.

ಒಟ್ಟಾರೆ ಶಿವಾರಾಜಕುಮಾರ್ ಮತ್ತು ಹರ್ಷ ಕಾಂಬೋ ಸಕತ್ ವರ್ಕೌಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಚಿತ್ರ ಬಿಡುಗಡೆ ವಿಳಂಬವಾಗಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ, ಅಕ್ಟೋಬರ್ 29 ಕ್ಕೆ ಸ್ಯಾಂಡಲ್ ವುಡ್ ಗೆ ಮತ್ತಷ್ಟು ಹುರುಪು ತುಂಬಲಿದೆಯಾ ಭಜರಂಗಿ 2 ಕಾದುನೋಡಬೇಕಿದೆ. ಶಿವರಾಜ್​ಕುಮಾರ್​, ಭಾವನಾ ಮೆನನ್​ ಶ್ರುತಿ, ಲೋಕಿ, ಚೆಲುವರಾಜು ಜೊತೆಗೆ ಮಂಜು ಪಾವಗಡ, ಶಿವರಾಜ್​ ಕೆ. ಆರ್​ ಪೇಟೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

****

Exit mobile version