ಫೆಬ್ರವರಿ 11 ಕ್ಕೆ ಕಿಕ್ ಕೊಡಲು ಬರ್ತಿದೆ ‘ಓಲ್ಡ್ ಮಾಂಕ್’

ಶ್ರೀನಿ  ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ ‘ಓಲ್ಡ್ ಮಾಂಕ್’  ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ ಹಾಗೂ ಕಂಟೆಂಟ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಚಿತ್ರ ಇದೀಗ ತೆರೆಗೆ ಬರಲು ಸಜ್ಜಾಗಿದೆ.

ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಓಲ್ಡ್ ಮಾಂಕ್’ ಚಿತ್ರ 11 ಫೆಬ್ರವರಿ 2022 ಗೆ ಬಿಡುಗಡೆ ಆಗುತ್ತಿದೆ.ಈಗಾಗಲೇ ಬಿಡುಗಡೆಯಾಗಿರುವ ‘ಓಲ್ಡ್‌ ಮಾಂಕ್‌’ ಚಿತ್ರದ ಟ್ರೇಲರ್‌ ಮತ್ತು ಹಾಡು ಎರಡಕ್ಕೂ ಸೋಶಿಯಲ್‌ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದ್ದು, ಚಿತ್ರಕ್ಕೂ ಬೇಡಿಕೆ ಹೆಚ್ಚಾಗಿದೆ. ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ‘ರಂಗನಾಯಕಿ’ ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ತೆರೆ ಮೇಲೆ ಜತೆಯಾಗುತ್ತಿದ್ದು, ಮುಂದಿನ ವರ್ಷ ಫೆಬ್ರವರಿ 11ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಓಲ್ಡ್‌ ಮಾಂಕ್‌ ಅಂದರೆ ನಾರದ. ಪ್ರೀತಿಸಿ ಮದುವೆಯಾಗುವ ಶಾಪಕ್ಕೆ ತುತ್ತಾಗಿ ಭೂಲೋಕಕ್ಕೆ ಬರುವ ನಾರದ ಏನೆಲ್ಲಾ ರಂಪಾಟ ಮಾಡಿದ ಅನ್ನುವುದು ಚಿತ್ರದ ಕತೆಯ ಒನ್‌ಲೈನ್‌. ಸದ್ಯ ಕರ್ನಾಟಕದಲ್ಲಿ ಸುಮಾರು ಮೂರೂವರೆ ದಶಕಗಳ ‌ವಿತರಣೆಯ ಅನುಭವವಿರುವ ಅಭಿಜಿತ್‌ ಎಂಟರ್‌ಪ್ರೈಸಸ್‌ ಸಂಸ್ಥೆ ‘ಓಲ್ಡ್‌ ಮಾಂಕ್‌’ ಚಿತ್ರದ ಟ್ರೇಲರ್‌ ನೋಡಿ ಸಿನಿಮಾದ ಕರ್ನಾಟಕ ಔಟ್‌ ರೇಟ್‌ ರೈಟ್ಸ್‌ ಪಡೆದುಕೊಂಡಿದೆ. ದೊಡ್ಡ ಮೊತ್ತಕ್ಕೆ ಸಿನಿಮಾದ ರೈಟ್ಸ್‌ ಸೇಲ್‌ ಆಗಿರುವುದರಿಂದ ನಿರ್ಮಾಪಕರು ಖುಷಿಯಾಗಿದ್ದಾರೆ. ಇತ್ತೀಚೆಗೆ ಚಿತ್ರದ  ‘ಗಿಚ್ಚ ಗಿಲಿಗಿಲಿ’  ಹೆಸರಿನ ಹಾಡು ಬಿಡುಗಡೆಯಾಗಿದೆ.

****

Exit mobile version