‘ಲವ್ ಯೂ ರಚ್ಚು’ ಟೈಟಲ್ ಸಾಂಗ್ ರಿಲೀಸ್

ಶಂಕರ್ ಎಸ್ ರಾಜ್ ನಿರ್ದೇಶನದ, ಅಜಯ್ ರಾವ್ ಜೋಡಿಯಾಗಿ ರಚಿತಾ ರಾಮ್ ನಟನೆಯ ‘ಲವ್ ಯೂ ರಚ್ಚು’ ಚಿತ್ರದ ಡಿಂಪಲ್ ಡಿಂಪಲ್ ಹುಡ್ಗಿ ನಿನ್ನ ಡಾರ್ಲಿಂಗ್ ಅನ್ಬೋದ‘ ಎಂಬ ಟೈಟಲ್ ಸಾಂಗ್ ಇಂದು (ಡಿ.1) ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡ್ತಿದೆ.

ನವೀನ್ ಸಜ್ಜು ದ್ವನಿಯಲ್ಲಿ ಮೂಡಿ ಬಂದಿರುವ ‘ಡಿಂಪಲ್ ಡಿಂಪಲ್ ಹುಡ್ಗಿ ನಿನ್ನ ಡಾರ್ಲಿಂಗ್ ’ ಎಂಬ ಈ ಹಾಡಿಗೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ, ಚೇತನ್ ಕುಮಾರ್ ಅವರ ಸಾಹಿತ್ಯವಿದೆ. ಹಳ್ಳಿ ಸೊಗಡಿನ ದೃಶ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ ನವೀನ್ ಸಜ್ಜು ಅವರ ದ್ವನಿ ಸಖತ್ ಮ್ಯಾಚ್ ಆಗಿದೆ, ಸಂಗೀತ ಸಂಯೋಜನೆ ಮತ್ತು ಸಾಹಿತ್ಯ ಹಾಡಿಗೆ ಬೂಸ್ಟ್ ನೀಡಿದೆ.

ಈ ಹಿಂದೆ ರಿಲೀಸ್ ಆಗಿದ್ದ ಲವ್ ಯೂ ರಚ್ಚು ಚಿತ್ರದ ಮೊದಲ ‘ಮುದ್ದೂ ನೀನು’ ಹಾಡಿನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ರಚಿತಾ ಫಸ್ಟ್‌ ನೈಟ್‌ ಬಗ್ಗೆ ಪ್ರಶ್ನೆ ಎತ್ತಿದರು. ಆಮೇಲೆ ಉತ್ತರವನ್ನೂ ಅವರೇ ನೀಡಿದರು. ‘ಫಸ್ಟ್‌ ನೈಟ್‌ ನಲ್ಲಿ ರೊಮ್ಯಾನ್ಸ್‌ ಮಾಡ್ತಾರೆ, ಫಸ್ಟ್‌ ನೈಟ್‌ ಕಾಂಸೆಪ್ಟ್‌ ನಲ್ಲಿರುವ ಈ ಹಾಡಿನಲ್ಲೂ ನಾನು ಲೈಟಾಗಿ ರೊಮ್ಯಾನ್ಸ್‌ ಮಾಡೋ ದೃಶ್ಯದಲ್ಲಿ ಕಾಣಿಸಿಕೊಂಡಿದ್ದೇನೆ. ಹಿಂದೆ ಬೋಲ್ಡ್‌ ಆಗಿ ನಟಿಸಲ್ಲ ಅಂತ ಹೇಳಿ ಇಲ್ಲಿ ಹೀಗೆ ಕಾಣಿಸಿಕೊಂಡಿರೋದಕ್ಕೆ ಒಂದು ಕಾರಣ ಇದೆ. ಅದೇನು ಅಂತ ಸಿನಿಮಾದಲ್ಲೇ ರಿವೀಲ್‌ ಆಗಿತ್ತೆ’ ಎಂದು ಹೇಳಿ ಹೆಚ್ಚು ಟ್ರೋಲ್ ಗೆ ಒಳಗಾಗಿದ್ದರು.ಚಿತ್ರದ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು ಗುರು ದೇಶಪಾಂಡೆ ನಿರ್ಮಾಣ ಮಾಡಿರುವ ಈ ಸಿನಿಮಾ ಡಿಸೆಂಬರ್ 10ಕ್ಕೆ ರಿಲೀಸ್ ಆಗಲಿದೆ.

****

Exit mobile version