‘ಅರ್ಜುನ್ ಗೌಡ’ ಬೆನ್ನಿಗೆ ಕಿಚ್ಚ, ರಾಮು ಬಗ್ಗೆ ಭಾವುಕ ನುಡಿ

ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ ರಾಮು ಅವರ ಹೆಸರಿನ ಜತೆ ‘ಕೋಟಿ’ ಎಂಬ ವಿಶೇಷಣ ಕೂಡ ಸೇರಿಕೊಂಡಿತ್ತು. ಸಿನಿಮಾ ಮೇಲೆ ಅವರಿಗೆ ಅಷ್ಟರಮಟ್ಟಿಗೆ ಪ್ರೀತಿ ಇತ್ತು. ಅನೇಕ ಸೂಪರ್​ ಹಿಟ್​ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ರಾಮು ನಿರ್ಮಿಸಿದ ಸಾಹಸ ಪ್ರಧಾನ ಚಿತ್ರಗಳು ಜನಮನ ಗೆದ್ದಿದ್ದು ಈಗ ಇತಿಹಾಸ. ಕೊರೊನಾದಿಂದ ಈ ವರ್ಷ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ.ರಾಮು ನಿರ್ಮಾಣ ಮಾಡಿದ ಕೊನೇ ಸಿನಿಮಾ ‘ಅರ್ಜುನ್​ ಗೌಡ’ ತೆರೆಕಾಣಿಸಲು ಮಾಲಾಶ್ರೀ ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ಪ್ರಜ್ವಲ್​ ದೇವರಾಜ್​ ನಾಯಕ.

YouTube player

ಪ್ರಜ್ವಲ್​ ದೇವರಾಜ್​ ನಟನೆಯ ‘ಅರ್ಜನ್​ ಗೌಡ’ ಒಂದು ಆ್ಯಕ್ಷನ್​ ಪ್ರಧಾನ ಸಿನಿಮಾ. ಅದರ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಈಗಾಗಲೇ ಟ್ರೇಲರ್​ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಡಿಸೆಂಬರ್ 31 ರಂದುತೆರೆಗೆ ಬರ್ತಿದೆ. ಈಗ  ಚಿತ್ರದ ಬೆನ್ನಿಗೆ ನಿಂತಿದ್ದಾರೆ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.

ಸಿನಿಮಾ ಬಗ್ಗೆ ವೀಡಿಯೋ ಮೂಲಕ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ರಾಮು ಎಂಟರ್ ಪ್ರೈಸಸ್ ಒಂದು ದೊಡ್ಡ ಸಂಸ್ಥೆ ಅಲ್ಲಿ ಎರಡು ಚಿತ್ರಗಳಲ್ಲಿ ಅಭಿನಯಿಸಲು ನನಗೆ ಅವಕಾಶ ಸಿಕ್ಕಿದ್ದು, ಈಗ ಅರ್ಜುನ್ ಗೌಡ ಚಿತ್ರ ಮೂಡಿಬಂದಿರುವ ಬಗ್ಗೆ ಮಾತನಾಡಿದ್ದಾರೆ. ಜಯಣ ಬೋಗಣ್ಣ ಎಂಬ ಹಾಡು ಚೆನ್ನಾಗಿ ಮೂಡಿಬಂದಿದೆ. ಚಿತ್ರ ಇದೇ ಡಿಸೆಂಬರ್ 31 ಕ್ಕೆ ಬಿಡುಗಡೆ ಆಗುತ್ತಿದ್ದು ಎಲ್ಲರು ಚಿತ್ರವನ್ನು ಯಶಸ್ವಿಗೊಳಿಸಿ ಮುಂದು ಇನ್ನಷ್ಟು ಚಿತ್ರಗಳು ರಾಮು ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಬರುವಂತಾಗಲಿ ಎಂದು ಹೇಳುವ ಮೂಲಕ ಅರ್ಜುನ್ ಗೌಡ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

****

Exit mobile version