ಕೆಲಸದಲ್ಲಿ ಬ್ಯೂಸಿ. ನನ್ ಮನೆ ಹತ್ರ ಬರ್ಬೇಡಿ ಎಂದ ನಿರ್ದೇಶಕ ಜೋಗಿ ಪ್ರೇಮ್ ..! ಹೀಗನ್ನೊಕೆ ಕಾರಣ ಏನು?ಈ story ಓದಿ

ನಿರ್ದೇಶಕ ‘ಜೋಗಿ’ ಪ್ರೇಮ್‌ ಅವರಿಗೆ ಅ.22ರಂದು (ಶುಕ್ರವಾರ) ಹುಟ್ಟುಹಬ್ಬದ ಸಂಭ್ರಮ. ಆ ಹಿನ್ನೆಲೆಯಲ್ಲಿ ಅಭಿಮಾನಿಗಳಿಗಾಗಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಕಳೆದ ಎರಡು ವರ್ಷದಿಂದ ಕೊರೊನ ತಂದ ತಾಪತ್ರಯ ಒಂದಾ ಎರಡಾ? ಎಲ್ಲರಿಗೂ ಉಸಿರು ಕಟ್ಟುವ ಹಾಗಾಗಿತ್ತು ಈಗ ಸ್ವಲ್ಪವೇ ಉಸಿರು ಬಿಡುವಲ್ಲಿಗೆ ಅಂದರೆ ನಿಟ್ಟುಸಿರು ಬಿಡುವಷ್ಟು ಸ್ಪೇಸ್ ಗೆ ಬಂದು ನಿಂತಿದ್ದೇವೆ. ಆದ್ರು ಮಳೆ ನಿಂತ್ರು ಮಳೆ ಹನಿ ನಿಂತಿಲ್ಲಾ ಅನ್ನೋ ಮಾತಿನಂತೆ ಕೊರೊನಾ ಸೊಂಕು ಕಡಿಮೆಯಾಗಿದ್ರು ಅದರ ಆತಂಕ ಇನ್ನು ಮನೆ ಮಾಡಿದೆ, ಈ ಭಯ ಇನ್ನಷ್ಟು ದಿನ ಇದ್ರೆ ಇನ್ನು ಒಳ್ಳೆಯದೆ.

ಈಗ ಕೊರೊನಾ ವಿಷ್ಯ ಈಗ್ಯಾಕಪ್ಪಾ ಅಂತೀರಾ ಅದಕ್ಕೂ ಒಂದು ರೀಸನ್ ಇದೆ, ಸ್ಯಾಂಡಲ್ ವುಡ್ ನಲ್ಲಿ ಸೆಲೆಬ್ರೆಟಿಗಳ ಹುಟ್ಟುಹಬ್ಬ, ಮದುವೆ ಸಮಾರಂಭ ಮತ್ತು ಕೆಲವು ಸಿನಿಮಾ ಇವೆಂಟ್ ಗಳು ಸರಳವಾಗಿ ನಡೆಯುತ್ತಿರುವುದೆ ಇದಕ್ಕೆ ಸಾಕ್ಷಿ. ಯಾವ ಸ್ಟಾರ್ ನಟರಾಗಲಿ, ನಿರ್ದೇಶಕರಾಗಲಿ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಸೆಲೆಬ್ರೆಟ್ ಮಾಡದೆ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತ್ರ ಸಂಭ್ರಮಾಚರಣೆಗಳನ್ನು ಮಾಡಿಕೊಂಡಿದ್ದರು. ಈಗ ಇದೇ ಸಾಲಿಗೆ ಮತ್ತೊಬ್ಬ ಸ್ಟಾರ್ ನಿರ್ದೇಶಕರಾದ ಜೋಗಿ ಪ್ರೇಮ್ ಸೇರಿಕೊಳ್ಳುತ್ತಿದ್ದಾರೆ. ಆದರೆ ಜೋಗಿ ಪ್ರೇಮ್ ಕೊಡುತ್ತಿರುವ ಕಾರಣವೇ ಬೇರೆ ಅದೇನಂದ್ರೆ..?

ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಪ್ರೇಮ್‌ ನಿರ್ಧರಿಸಿದ್ದು, ಸದ್ಯ ತಾವು ‘ಏಕ್​ ಲವ್​ ಯಾ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವುದಾಗಿ ಹೇಳಿಕೊಂಡಿದ್ದಾರೆ. ಇದರ ನಡುವೆ ದೀಪಾವಳಿ ಹಬ್ಬಕ್ಕೆ ‘ಏಕ್​ ಲವ್​ ಯಾ’ ಚಿತ್ರದ ಮೂರನೇ ಹಾಡು ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಡಿಯೋ ಸಂದೇಶದಲ್ಲೇನಿದೆ?

‘ಅ.22ರಂದು (ಶುಕ್ರವಾರ) ನನ್ನ ಹುಟ್ಟುಹಬ್ಬ. ಪ್ರತಿ ಬಾರಿ ನನ್ನ ಅನ್ನದಾತರು, ಸ್ನೇಹಿತರು ಹಾಗೂ ಬಂಧು-ಬಳಗದವರು ಬಂದು ಶುಭ ಹಾರೈಸುತ್ತಿದ್ರಿ. ಆದರೆ, ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ. ಯಾಕೆಂದರೆ ಮುಂಬೈನಲ್ಲಿ ‘ಏಕ್​ ಲವ್​ ಯಾ’ ಸಿನಿಮಾ ಕೆಲಸ ನಡೆಯುತ್ತಿದೆ. ಹಾಗಾಗಿ ತಾವು ಯಾರೂ ಕೂಡ ನನ್ನ ಮನೆ ಬಳಿ ಬರುವುದಾಗಲಿ, ಬಂದು ಕಾಯುವುದಾಗಲಿ ಮಾಡಬೇಡಿ ಅಂತ ಪ್ರೀತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲೇ ಇದ್ದರೂ ದೂರದಿಂದ ನನಗೆ ಆಶೀರ್ವಾದ ಮಾಡಿ’ ಎಂದು ಪ್ರೇಮ್​ ಮನವಿ ಮಾಡಿದ್ದಾರೆ.

‘ನ.4ರಂದು ದೀಪಾವಳಿ ಹಬ್ಬದ ದಿನ ‘ಏಕ್​ ಲವ್​ ಯಾ’ ಸಿನಿಮಾದ ಮೂರನೇ ಹಾಡು ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ಬಿಡುಗಡೆ ಆಗಿರುವ 2 ಹಾಡುಗಳನ್ನು ದೊಡ್ಡ ಹಿಟ್​ ಮಾಡಿಕೊಟ್ಟಿದ್ದೀರಿ. ಈಗ ಮೂರನೇ ಹಾಡು ಬರುತ್ತಿದೆ. ಇದು ಲವ್​ ಬ್ರೇಕಪ್​ ಸಾಂಗ್​ ಆಗಿದ್ದು, ಹುಡುಗಿಯರಿಗಾಗಿ ಮಾಡಿರುವ ವಿಶೇಷ ಹಾಡು. ಆ ಹಾಡು ನೋಡಿ ಹಾರೈಸಿ. ಜನವರಿ 21ಕ್ಕೆ ಎಲ್ಲ ಕಡೆ ಈ ಸಿನಿಮಾ ಬಿಡುಗಡೆಯಾಗಲಿದೆ’ ಎಂದು ಪ್ರೇಮ್​ ಹೇಳಿದ್ದಾರೆ.

Exit mobile version